ಬೆಳಗಾವಿ
ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸಧ್ಯ ನಡೆಯುತ್ತಿರುವ ಸಮಗ್ರ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರ ಭೆಟ್ಟಿಗೆ ಶಾಸಕ ಅಭಯ ಪಾಟೀಲರು ಬೆಂಗಳೂರಿಗೆ ದೌಡಾಯಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬೆಳಗಾವಿ ಮಹಾನಗರ ಪಾಲಿಕೆಯ ಬಿಜೆಪಿ ಇಬ್ಬರು ನಗರಸೇವಕರ ಸದಸ್ಯತ್ವ ರದ್ದು ಮಾಡಿ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದರು,

ಇದರಿಂದ ಕೆರಳಿದ ಶಾಸಕ ಅಭಯ ಪಾಟೀಲರು ಪ್ರಾದೇಶಿಕ ಆಯುಕ್ತರ ವಿರುದ್ಧ ಕಿಡಿಕಾರಿದ್ದರು. ಅಷ್ಟೇ ಅಲ್ಲ ಅವರ ಕಾರ್ಯವೈಖರಿ ವಿರುದ್ಧ ಕೇಂದ್ರಕ್ಕೆ ಅಷ್ಟೇ ಅಲ್ಲ ರಾಜ್ಯಪಾಲರಿಗೂ ದೂರು ನೀಡುವುದಾಗಿ ಹೇಳಿದ್ದರು,


ಹೀಗಾಗಿ ನಾಳೆ ದಿ. 14 ರಂದು ಅಭಯ ಪಾಟೀಲರು ರಾಜ್ಯಪಾಲರ ಮುಂದೆ ಪ್ರಾದೇಶಿಕ ಆಯುಕ್ತರ ವಿರುದ್ಧ ಗಂಭೀರ ಸ್ವರೂಪದ ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.
ಈ ಹಿಂದೆ ಕೂಡ ರಾಜ್ಯ ಸಕರ್ಾರವು ಪಾಲಿಕೆಗೆ ಸೂಪರ್ ಸೀಡ್ ನೋಟೀಸ್ ನೀಡಿತ್ತು, ಆಗಲೂ ಬೆಳಗಾವಿಯ ವಿಟಿಯು ಗೆ ರಾಜ್ಯಪಾಲರು ಆಗಮಿಸಿದ್ದ ಸಂದರ್ಭದಲ್ಲಿ ಎಲ್ಲ ನಗರಸೇವಕರೊಂದಿಗೆ ರಾಜ್ಯಪಾಲರಿಗೆ ದೂರು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು,
ಈಗ ಇಬ್ಬರು ಬಿಜೆಪಿ ನಗರಸೇವಕರ ಸದಸ್ಯತ್ವ ರದ್ದತಿ ವಿಷಯ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಸದಸ್ಯತ್ವ ರದ್ದತಿ ಪ್ರಶ್ನೆ ಮಾಡಿ ಇಬ್ಬರೂ ನಗರಸೇವಕರು ಸಲ್ಲಿಸಿದ್ದ ಅಜರ್ಿಯನ್ನುಹೈಕೋರ್ಟ ತಳ್ಳಿ ಹಾಕಿತ್ತು, ಈ ಸಮಸ್ಯೆಗೆ ಸಕರ್ಾರ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೈಕೋರ್ಟ ನಿದರ್ೇಶನ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು,