Headlines

ಸಂಗಮದಲ್ಲಿ‌ ಮಿಂದೆದ್ದ ಮೋದಿ, ಗಡ್ಕರಿ, ಅಭಯ, C T RAVI…!

ಸಂಗಮ ಸ್ನಾನವು ಹಿಂದೂ ಧರ್ಮದಲ್ಲಿ ಬಹಳ ಪವಿತ್ರವಾದ ಮತ್ತು ಮಹತ್ವಪೂರ್ಣವಾದದ್ದು….!. ಸಂಗಮ ಎಂದರೆ ಎರಡು ಅಥವಾ ಹೆಚ್ಚು ನದಿಗಳು ಸೇರುವ ಸ್ಥಳ ಎಂದರ್ಥ!.

ಹಿಂದೂ ಪುರಾಣಗಳ ಪ್ರಕಾರ, ಸಂಗಮ ಸ್ಥಳಗಳು ಬಹಳ ಪವಿತ್ರವಾದವು

ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಸಂಗಮ ಸ್ಥಳವೆಂದರೆ ಪ್ರಯಾಗರಾಜ್ (ಇಲಾಹಾಬಾದ್), ಇಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುತ್ತವೆ. ಇಲ್ಲಿ ಕುಂಭ ಮೇಳದ ಸಮಯದಲ್ಲಿ ಮಿಲಿಯನಗಟ್ಟಲೆ ಭಕ್ತರು ಸ್ನಾನ ಮಾಡಿ ಪುನೀತರಾಗಿದ್ದಾರೆ. ಈ ಸ್ನಾನವು ಮೋಕ್ಷ (ಪಾಪಗಳಿಂದ ಮುಕ್ತಿ) ದೊರಕಿಸುತ್ತದೆ ಎಂದು ನಂಬಲಾಗಿದೆ.

ಸಂಗಮ ಸ್ನಾನದ ಮಹಿಮೆಯನ್ನು ಹಲವು ಪುರಾಣಗಳು ಮತ್ತು ಧಾರ್ಮಿಕ ಗ್ರಂಥಗಳಲ್ಲಿ ವರ್ಣಿಸಲಾಗಿದೆ. ಇದು ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ನೀಡುತ್ತದೆ .

ಸಂಗಮ ಸ್ನಾನವು ಜೀವನದಲ್ಲಿ ಪವಿತ್ರತೆ ಮತ್ತು ಶಾಂತಿಯನ್ನು ತರುತ್ತದೆ ಎಂಬುದು ಭಕ್ತರ ನಂಬಿಕೆ.

ಆದರೆ, ಧಾರ್ಮಿಕ ಮಹತ್ವದ ಜೊತೆಗೆ, ಸಂಗಮ ಸ್ನಾನವು ಪರಿಸರ ಮತ್ತು ಸಮುದಾಯದ ಒಗ್ಗಟ್ಟಿನ ಸಂಕೇತವಾಗಿಯೂ ಕಾರ್ಯನಿರ್ವಹಿಸುತ್ತದೆ. ಭಕ್ತರು ಒಟ್ಟಿಗೆ ಸೇರಿ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದರ ಮೂಲಕ ಸಾಮಾಜಿಕ ಮತ್ತು ಸಾಂಸ್ಕೃತಿಕ ಬಂಧನಗಳು ಬಲಪಡುತ್ತವೆ.

ಆದ್ದರಿಂದ, ಸಂಗಮ ಸ್ನಾನವು ಕೇವಲ ಶಾರೀರಿಕ ಶುದ್ಧತೆಯನ್ನು ಮಾತ್ರವಲ್ಲದೆ, ಮಾನಸಿಕ ಮತ್ತು ಆಧ್ಯಾತ್ಮಿಕ ಶುದ್ಧತೆಯನ್ನು ಸಾಧಿಸಲು ಒಂದು ಮಹತ್ವಪೂರ್ಣ ಸಾಧನವಾಗಿದೆ.

ಅಂತಹ ಸಂಗಮ ಸ್ನಾನ ಮಾಡಿದವರಲ್ಲಿ ಬೆಳಗಾವಿಗರು ಅನೇಕರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲರು ದಂಪತಿ ಸಮೇತ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಇದರ ಜೊತೆಗೆ ನ್ಯಾಯವಾದಿ ರವಿರಾಜ ಪಾಟೀಲರೂ ಸಹ ಸಂಗಮದಲ್ಲಿ ಸ್ನಾನ ಮಾಡಿದ್ಸಾರೆ.

ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ,ಕರ್ನಾಟಕ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಂತಾದವರು ಸಂಗಮದಲ್ಲಿ‌ ಕುಟುಂಬ ಸಮೇತ ಮಿಂದೆದ್ದಿದ್ದಾರೆ.

ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮುಂದಿನ ಮುಖ್ಯಮಂತ್ರಿ ಎಂದು ಅವರ ಭಾವಚಿತ್ರ ಹಿಡಿದು ಪವಿತ್ರ ಸ್ನಾನ ಮಾಡಿದವರೂ ಇದ್ದಾರೆ

ಅಷ್ಟೇ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಪೊಟೊ ಹಿಡಿದು ಪವಿತ್ರ ಸ್ನಾನ ಮಾಡಿದವರೂ ಇದ್ದಾರೆ.

ಇದನ್ನು ಹೊರತುಪಡಿಸಿದರೆ ಸಿ.ಟಿ.ರವಿ ಕೂಡ ಸಂಗಮ ಸ್ನಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!