ಬೆಳಗಾವಿಯಲ್ಲಿ 1050 ರೌಡಿಗಳು..!

ಖಡಕ್ ಎಚ್ಚರಿಕೆ ಕೊಟ್ಟ ಡಿಸಿಪಿ ರೋಹನ್.

ಬೆಳಗಾವಿಯಲ್ಲಿ 1050 ರೌಡಿಗಳು..!

ಎಂಇಎಸ್ ನವರ ಮುಖಕ್ಕೆ ಮಸಿಬಳಿದವರ ಮೇಲೂ ರೌಡಿಶೀಟರ್ ಕೇಸ್


ಬೆಳಗಾವಿ.
ಕುಂದಾನಗರಿ ಎಂದೇ ಹೆಸರಾದ ಗಡಿನಾಡ ಬೆಳಗಾವಿ ನಗರವೊಂದರಲ್ಲಿಯೇ ಬರೊಬ್ಬರಿ 1050 ಜನ ರೌಡಿಶೀಟರಗಳಿದ್ದಾರೆ. ಕೆಲವೊಂದು ವ್ಯಯಕ್ತಿಕ ಘಟನೆಗಳಲ್ಲಿ ಹೊಡೆದಾಡಿಕೊಂಡವರನ್ನು ರೌಡಿಶೀಟರ ಪಟ್ಟಿಗೆ ಸೇರಿಸಲಾಗಿದೆ.

ಅಚ್ಚರಿ ಸಂಗತಿ ಎಂದರೆ, ಇದರಲ್ಲಿ ಕೆಲವರು ಎರಡೂ ಭಾಷೆಯ ಹೋರಾಟಗಾರರೂ ಇದ್ದಾರೆ.
ಬೆಳಗಾವಿ ಖಡೇಬಜಾರ ಉಪವಿಭಾಗ ಠಾಣೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೌಡಿಶೀಟರಗಳನ್ನು ಇಂದು ಒಂದೆಡೆ ಸೇರಿಸಿ ಖಡಕ್ ಎಚ್ಚರಿಕೆ ಕೊಡುವ ಕೆಲಸವನ್ನು ಡಿಸಿಪಿ ಜಗದೀಶ ರೋಹನ್ ಮಾಡಿದರು.

ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ರೌಡಿಶೀಟರಗಳ ಪರೇಡ್ ನಡೆಸಲಾಯಿತು.
ಯಾವುದೇ ಕಾರಣಕ್ಕೂ ಕಾನೂನುನ್ನು ಕೈಗೆ ತೆಗೆದುಕೊಳ್ಳಬಾರದು. ಯಾವುದೇ ತಂಟೆ ತಕರಾರುಗಳಲ್ಲಿ ಭಾಗಿಯಾಗಬಾರದು. ಪೊಲೀಸ್ ಇಲಾಖೆ ಯಾವುದೇ ಕಾರಣಕ್ಕೂ ಅಪರಾಧ ಚಟುವಟಿಕೆಗಳನ್ನು ಸಹಿಸುವುದಿಲ್ಲ ಎನ್ನುವ ಎಚ್ಚರಿಕೆ ಸಂದೇಶವನ್ನು ಡಿಸಿಪಿ ಜಗದೀಶ ರೋಹನ್ ನೀಡಿದರು,
ಖಡೇ ಬಜಾರ್ ಎಸಿಪಿ ಶೇಖರಪ್ಪ ಸೇರಿದಂತೆ ಇನ್ನುಳಿದ ನಾಲ್ಕು ಠಾಣೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎಲ್ಲ ರೌಡಿಶೀಟರಗಳ ಮಾಹಿತಿಯನ್ನು ಪರಿಶೀಲಿಸಿ, ಕಾನೂನು ರೀತಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಈಗಾಗಲೇ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಮಾಕರ್ೇಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಪರೇಡ್ ನಡೆಸಲಾಗುವುದು ಎಂದು ಜಗದೀಶ ರೋಹನ್ ಹೇಳಿದರು,
ಕಳೆದ ಮೂರು ವರ್ಷದಲ್ಲಿ ಸುಮಾರು 40 ಜನರನ್ನು ಗಡಿಪಾರು ಮಾಡಲಾಗಿದೆ. ಈ ಬಾರಿಯೂ ಖಡೇಬಜಾರ್ ಠಾಣೆಯಿಂದ ಮತ್ತೇ ಮೂರು ಗಡಿಪಾರು ಪ್ರಸ್ತಾವಣೆಗಳನ್ನು ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಮಸಿ ಬಳಿದವರ ಮೇಲೆ ರೌಡಿಶೀಟರ್..!

ಸಾಂದರ್ಭಿಕ ಚಿತ್ರ..

ನಾಡದ್ರೋಹಿ ಎಂಇಎಸ್ನವರಿಗೆ ಮಸಿ ಬಳಿದ ಕನ್ನಡ ಹೋರಾಟಗಾರನ ವಿರುದ್ಧವೂ ಬೆಳಗಾವಿ ಪೊಲೀಸರು ರೌಡಿಶೀಟರ್ ಕೇಸ್ ದಾಖಲಿಸಿದ್ದಾರೆ.


Leave a Reply

Your email address will not be published. Required fields are marked *

error: Content is protected !!