
ಬ್ರಾಹ್ಮಣ ಮಹಾಸಭಾ ಚುನಾವಣೆ- ಹಾರನಹಳ್ಳಿ ಬಣಕ್ಕೆ ದಿಗ್ವಿಜಯ..!
ಹಾರನಹಳ್ಳಿ ಬಣ ದಿಗ್ವಿಜಯ..! ಬೆಳಗಾವಿ ಸೇರಿ 8 ಜಿಲ್ಲೆಗಳಲ್ಲಿ ಅವಿರೋಧ. ಘೋಷಣೆಯೊಂದೇ ಬಾಕಿ. ಹಾರನಹಳ್ಳಿ ಬೆಂಬಲಿತ ಡಾ. ಭಾನುಪ್ರಕಾಶ ಶರ್ಮಾರಿಗೆ ಹೆಚ್ಚುತ್ತಿರುವ ಬೆಂಬಲ. ಬೆಂಗಳೂರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಫಲಿತಾಂಶಕ್ಕೆ ಮುನ್ನವೇ ಅಶೋಕ ಹಾರನಹಳ್ಳಿ ಬಣ ಭರ್ಜರಿ ಮೇಲುಗೈ ಸಾಧಿಸಿದೆ.ಎಂಟು ಜಿಲ್ಲೆಯಲ್ಲಿ ಹಾರನಹಳ್ಳಿ ಬಣದ ಪ್ರತಿನಿಧಿಗಳು ಅವಿರೋಧ ಆಯ್ಕೆಯಾಗಿದ್ದಾರೆ.ಆದರೆ ಘೊಷಣೆಯೊಂದೇ ಬಾಕಿ ಉಳಿದಿದೆ. ಬೆಳಗಾವಿಯ ಅಕ್ಷಯ ಕುಲಕರ್ಣಿ ಕೊಡಗಿನ ದುರ್ಗಾಪ್ರಸಾದ್ ಮಂಗಳೂರಿನ ಮಹೇಶ್ ಕಜೆ ಬಳ್ಳಾರಿಯ ಡಾ.ಶ್ರೀನಾಥ್ ವಿಜಯನಗರದ ಕೆ.ದಿವಾಕರ್ ಚಿಕ್ಕಮಗಳೂರಿನ ಜೆ.ಎಸ್.ಮಹಾಬಲ ಗದಗನ ಶ್ರೀನಿವಾಸ…