ದಾರ್ಶನಿಕರ ಮಾರ್ಗದಲ್ಲಿ ನಡೆದರೆ ಜೀವನ ಸಾರ್ಥಕ; ಅಭಯ

ಬೆಳಗಾವಿ,
ಈ ನಾಡಿನ ದಾರ್ಶನಿಕರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವುದರಿಂದ ಜೀವನದ ಸಾರ್ಥಕತೆ ಅಡಗಿದೆ ಎಂದು ಶಾಸಕರಾದ ಅಭಯ ಪಾಟೀಲ ಅವರು ನುಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆ, ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ (ಏ.೨) ವಡಗಾವಿಯ ಸಫಾರಗಲ್ಲಿ, ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಜರುಗಿದ ಆದ್ಯ ವಚನಕಾರ ಶ್ರೀ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ ನ್ಯಾಯದ ತತ್ವಗಳು ಹಾಸುಹೊಕ್ಕಾಗಿ ವಿಸ್ತರಿಸಿದ್ದು ವಚನಕಾಲದ ದೊಡ್ಡ ಆಂದೋಲನವೆAದು ಅವರು ಬಣ್ಣಿಸಿದರು. ದೇವರ ದಾಸಿಮಯ್ಯ ಅವರ ಕೊಡುಗೆ ಅಪಾರವಾದದ್ದು, ಇವರು ತಮ್ಮ ವಚನಗಳ ಮೂಲಕ ಗುರುಗಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಿ. ಗುರುಗಳಿಗೆ ತಮ್ಮನ್ನು ತಾವು ಅರ್ಪಿಸಿಕೊಂಡAತಹ ದೇವರ ದಾಸಿಮಯ್ಯ ಅವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗುಳೇದಗುಡ್ಡದ ಶ್ರೀ ಗುರುಸಿದ್ಧೇಶ್ವರ ಬೃಹನ್ಮಠ, ಪಟ್ಟಸಾಲಿ ಗುರುಪೀಠದ ಶ್ರೀ ೧೦೦೮ ಬಸವರಾಜ ಪಟ್ಟದಾರ್ಯ ಮಹಾಸ್ವಾಮಿಗಳು ವಹಿಸಿದ್ದರು,

ಗಜಾನನ ಗುಂಜಾರ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ವಿಜಯಕುಮಾರ್ ಹೊನಕೇರಿ, ಕನ್ನಡ ಮತ್ತು ಸಂಸ್ಕöÈತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಹಾನಗರ ಪಾಲಿಕೆಯ ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ವಿಲಾಸ ಜೋಶಿ, ನಗರಸೇವಕರಾದ ಪ್ರೀತಿ ಕಾಮಕರ, ರೇಷ್ಮಾ ಕಾಮಕರ, ದೀಪಾಲಿ ಚೊಪಗಿ, ಲಕ್ಷಿö್ಮÃ ಲೋಕರಿ, ಉದಯ ಉಪರಿ, ಶಿವಾನಂದ ಉಪರಿ, ಲೋಹಿತ ಮೋರಕರ, ಬಸವರಾಜ ಢವಳಿ, ವೆಂಕಟೇಶ ವನಹಳ್ಳಿ, ಮಾರುತಿ ಬಂಗೋಡಿ, ಕಿಶೋರ ಬಡಗಾವಿ, ಪ್ರಸನ್ನ ಲಟ್ಟಿ, ರಮೇಶ ಸೊಂಟಕ್ಕಿ, ಬಸವರಾಜ ಜಡಪನ್ನವರ, ವಿ.ಜಿ. ನೀರಲಗಿಮಠ, ಹಾಗೂ ಮತ್ತಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!