ಮುಂಉದುವರೆದ ಸೆಟ್ಟರ್ ಹೆಬ್ಬಾಳಕರ ವಾಕ್ ಸಮರ
ಬೆಳಗಾವಿಯ ರಾಜಕೀಯ ಸಮರದಲ್ಲಿ ಹೊಸ ತಗಾದೆ – ಹೆಬ್ಬಾಳಕರ ವಿರುದ್ಧ ಶೆಟ್ಟರ್ ಆಕ್ರೋಶ
ಬೆಳಗಾವಿಯ ರಾಜಕೀಯ ಹೋರಾಟ ಈಗ ಇನ್ನೊಂದು ತಿರುವು ಪಡೆದುಕೊಂಡಿದೆ. ಅಭಿವೃದ್ಧಿ ಎಂಬ ಹಕ್ಕು ಬುದ್ಧಿಯ ವಿಷಯವೂ, ರಾಜಕೀಯ ಲೆಕ್ಕಾಚಾರದ ಪಾತ್ರೆಯೊಳಗೆ ಸಿಕ್ಕಿಹಾಕಿಕೊಂಡಿದೆ.
ಈ ಬಾರಿಯದು ವ್ಯಕ್ತಿ ವಿರೋಧವಲ್ಲ – ವೈಚಾರಿಕ ಸಮನ್ವಯದ ಅಡಚಣೆಯ ಗಂಭೀರ ಪ್ರತಿಧ್ವನಿ. ಲೋಕಸಭಾ ಸದಸ್ಯ ಜಗದೀಶ್ ಶೆಟ್ಟರ್ ನೀಡಿರುವ ಹೇಳಿಕೆಗಳು ಬೆಳಗಾವಿ ಗ್ರಾಮೀಣ ರಾಜಕಾರಣದಲ್ಲಿ ಹೊಸ ಚರ್ಚೆಗೆ ದಾರಿ ತೆರೆಯುತ್ತಿವೆ.
“ಶೆಟ್ಟರ್ ಟೀಕೆ ಹಿನ್ನಲೆಯಲ್ಲಿ ಏನಿದೆ?
ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿ, ಶಿಂದೋಳಿ, ಮುತಗಾ ಗ್ರಾಮ ಪಂಚಾಯತ್‌ಗಳಲ್ಲಿ ನರೇಗಾ ಯೋಜನೆಯಡಿಯಲ್ಲಿ ಅನುದಾನ ಸಿಕ್ಕಿದರೂ ಕಾಮಗಾರಿಗಳು ಪ್ರಾರಂಭವಾಗಿಲ್ಲವೆಂದು ಶೆಟ್ಟರ್ ಆರೋಪಿಸಿದ್ದಾರೆ.
ಮಾರ್ಚ್ 31ರೊಳಗೆ ಆಕ್ಷನ್ ಪ್ಲಾನ್ ಸಿದ್ಧವಿತ್ತು, ಅನುದಾನ ಬಿಡುಗಡೆ ಆಗಿತ್ತು – ಆದರೆ ಕಾಮಗಾರಿಗೆ ಚಾಲನೆ ನೀಡಲು ಅಧಿಕಾರಿಗಳೂ, ಸಚಿವೆಯೂ ವಿಳಂಬವೇಕೆ? ಎಂಬ ಪ್ರಶ್ನೆ ಅವರು ಮುಂದಿಟ್ಟಿದ್ದಾರೆ.

ಇಲ್ಲಿ ಪ್ರಶ್ನೆ ಒಂದೇ – ಅಭಿವೃದ್ಧಿ ಕಾರ್ಯಗಳು ವಿಳಂಬವಾದರೆ, ದೋಷ ಅಧಿಕಾರಿಗಳದು ಮಾತ್ರವೇ? ಅಥವಾ ರಾಜಕೀಯ ಉದ್ದೇಶಪೂರಿತ ನಿರ್ಲಕ್ಷ್ಯವೋ?
ನರೇಗಾ – ಕೇಂದ್ರದ ಹಕ್ಕು ಈ ಯೋಜನೆಗೆ ರಾಜ್ಯದ ನೀಚ ರಾಜಕೀಯ ?
ನರೇಗಾ ಎಂಬದು ಕೇಂದ್ರ ಸರ್ಕಾರದ ಕಾನೂನುಬದ್ಧ ಹಕ್ಕು ಯೋಜನೆ. ಗ್ರಾಮೀಣ ಬದುಕಿಗೆ ನೂರು ದಿನದ ಕೆಲಸದ ಭರವಸೆ ನೀಡುವ ಈ ಯೋಜನೆಯಡಿ ದೇಶದಾದ್ಯಂತ ಕೋಟಿ ಕೋಟಿ ಅನುದಾನ ಹರಿದು ಹೋಗುತ್ತಿದೆ.
ಈ ಹಿನ್ನಲೆಯಲ್ಲಿ, “ನಾನು ಅನುದಾನ ತರುವದಿಲ್ಲ” ಎಂಬ ಶೆಟ್ಟರ್ ಹೇಳಿಕೆಯು ಉದ್ದೇಶಪೂರ್ವಕ ಸ್ಪಷ್ಟತೆ ನೀಡುವ ಪ್ರಯತ್ನ. ಆದರೆ ಅದೇ ಯೋಜನೆಯ ಅನುಷ್ಠಾನದಲ್ಲಿ ನಡೆಯುತ್ತಿರುವ ರಾಜಕೀಯ ಆಟಕ್ಕೆ ಗುರುತು ಇಟ್ಟಿದ್ದಾರೆ.

ಹೆಬ್ಬಾಳಕರ್ ಅವರಿಂದ ಸ್ಪಷ್ಟನೆ ಕೇಳಿರುವ ಶೆಟ್ಟರ್, “ತುರ್ತು ಆಕ್ಷನ್ ಪ್ಲಾನ್‌ಗಳೂ ನಡೆಯದ ಸ್ಥಿತಿಗೆ ಬಂದಿದೆ” ಎಂದಿದ್ದಾರೆ. ಇದು ಕೇವಲ ಆಡಳಿತದ ವಿಫಲತೆಯೋ, ಅಥವಾ ಖಾತರಿಯ ರಾಜಕೀಯ ಬ್ಲಾಕ್ ಮೇಲ್ವಿಚಾರಣೆಯೋ ಎಂಬುದನ್ನು ಸಮುದಾಯವೇ ನಿರ್ಧರಿಸಬೇಕು.
ಸಿದ್ದರಾಮಯ್ಯ ಸರ್ಕಾರದ ಬಜೆಟ್ – ಘೋಷಣೆ ಜಾಸ್ತಿ,

ಮೂರು ಬಿಜೆಪಿ ಸಿಎಂಗಳು ರಾಜ್ಯವನ್ನು ಆರ್ಥಿಕ ದಿವಾಳಿಗೆ ಕರೆದೊಯ್ದರು” ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಶೆಟ್ಟರ್ ಪ್ರತಿಕ್ರಿಯೆ ಸ್ಪಷ್ಟ – “ಅವರದೇ ಪಕ್ಷದ ಶಾಸಕರು ಈಗ ಹಣ ಇಲ್ಲವೆಂದು ಹೇಳುತ್ತಿದ್ದಾರೆ.”
60 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳ ಕೆಳಗೆ ಸುಮ್ಮನೆ ಬಜೆಟ್‌ನಲ್ಲಿ ಬರವಣಿಗೆ ನಡೆದಿದೆಯೆಂಬ ಪ್ರಶ್ನೆ ಉತ್ಥಾಪಿಸಿದ್ದಾರೆ.
ಇಲ್ಲಿ ಮಾತು ಯೋಜನೆಗಳ ಮೇಲೆ ಅಲ್ಲ – ಆಡಳಿತದ ಪ್ರಾಮಾಣಿಕತೆಗೆ. ಶೆಟ್ಟರ್ ಅವರ ಆರೋಪ ಪ್ರಕಾರ, ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿವೆ, ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ, ಯೋಜನೆಗಳು ಕಾಗದ ಮಟ್ಟಕ್ಕೆ ಸೀಮಿತವಾಗಿದೆ.