ಬೆಳಗಾವಿ.
ಜನಿವಾರ ತೆಗೆಸಿದ ವಿಷಯ ಮುಂದಿಟ್ಟುಕೊಂಡು ನಾಳೆ ದಿ. 21 ರಂದು ಬೆಳಗಾವಿಯಲ್ಲಿ ಸಮಸ್ತ ಬ್ರಾಹ್ಮಣರ ವತಿಯಿಂದ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ.

ನಗರದ ಕೃಷ್ಣಮಠದಲ್ಲಿಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಯಿತು.
ಬೆಳಿಗ್ಗೆ ಕನ್ನಡ ಸಾಹಿತ್ಯ ಭವನದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಅರ್ಪಿಸಲಾಗುವುದು ಎಂದು ತಿಳಿಸಲಾಗಿದೆ.

ಸಮಾಜದ ಸಭೆಗೆ ಹಾಜರಾದ ವಿಪ್ರ ಬಳಗದವರು
ಇಂದಿಲ್ಲಿ ನಡೆದ ಸಭೆಯಲ್ಲಿ ನಗರದ ಬೇರೆ ಬೇರೆ ಭಾಗಗಳಿಂದ ನೂರಾರು ಜನ ಭಾಗವಹಿಸಿದ್ದರು.
ಜಿಲ್ಲಾ ಬ್ರಾಹ್ಮಣ ಸಮಾಜ ಟ್ರಸ್ಟ ಅಧ್ಯಕ್ಷ ರಾಮ ಭಂಡಾರಿ, ಹಿರಿಯ ನ್ಯಾಯವಾದಿ ಎಸ್. ಎಂ ಕುಲಕರ್ಣಿ, ಆರ್.ಎಸ್ ಮುತಾಲಿಕ ಮುಂತಾದವರ ಉಪಸ್ಥಿತಿ ಯಲ್ಲಿ ಈ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭರತ ದೇಶಪಾಂಡೆ, ಅನುಶ್ರೀ ದೇಶಪಾಂಡೆ, ಕೃಷ್ಣಮಠದ ಶ್ರೀನಿವಾಸ ಹೊನ್ನಿದಿಬ್ಬಿ ಆಚಾರ್ಯರು, ವಿಪ್ರ ಬಳಗದ ಮಹೇಶ ಕುಲಕರ್ಣಿ ಮುಂತಾದವರು ಮಾತನಾಡಿದರು.