ಜನಿವಾರಕ್ಕೆ ಕೈ ಹಾಕಿದರೆ ತಲವಾರ ಹಿಡಿಯಲು ನಮಗೆ ಕಷ್ಟವಿಲ್ಲ!”
ಬೆಳಗಾವಿಯಲ್ಲಿ ಬ್ರಾಹ್ಮಣರ ಬೃಹತ್ ಪ್ರತಿಭಟನೆ – ಸಂಸ್ಕೃತಿಗೆ ತೋಳೂರಿಸಿದ ದನಿ

ಬೆಳಗಾವಿ, :
ಬ್ರಾಹ್ಮಣ ಸಮುದಾಯದ ಧರ್ಮ-ಸಂಸ್ಕೃತಿಯ ಸಂಕೇತವಾದ ಜನಿವಾರ ಕತ್ತರಿಸಿದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಬೆಳಗಾವಿಯಲ್ಲಿ ಸೋಮವಾರ ಸಮಾಜದ ಸದಸ್ಯರು ಸಾಮೂಹಿಕ ಶಕ್ತಿ ಪ್ರದರ್ಶನ ನಡೆಸಿದರು.

“ಜನಿವಾರ ಉಳಿಸಿ – ಬ್ರಾಹ್ಮಣ್ಯ ಬೆಳೆಸಿ” ಎಂಬ ಘೋಷಣೆಯೊಂದಿಗೆ ಕಿತ್ತೂರು ಚನ್ನಮ್ಮ ವೃತ್ತವು ಧರ್ಮ ರಕ್ಷಣೆಯ ಕೇಂದ್ರಬಿಂದುವಾಗಿ ಪರಿವರ್ತಿತವಾಯಿತು.

ಈ ಆಕ್ರೋಶ ಭರಿತ ಪ್ರತಿಭಟನೆಯಲ್ಲಿ ಶಾಸಕ ಅಭಯ ಪಾಟೀಲ ಮತ್ತು ಬ್ರಾಹ್ಮಣ ಮುಖಂಡ ಅನಿಲ ಪೊತದಾರ್ ನೇತೃತ್ವ ವಹಿಸಿದ್ದರು. “ಜನಿವಾರ ಕತ್ತರಿಸಿದವರ ಮೇಲೆ ಕೇವಲ ಅಮಾನತ್ ಅಲ್ಲ, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು,” ಎಂಬ ಬಿಗಿ ಎಚ್ಚರಿಕೆಗಳು ಹಾರಿದವು.
ಪರಶುರಾಮನ ಪಾಠ ಮರೆಯದಿರಿ:
“ಇದೇ ರೀತಿ ಮುಂದುವರಿದರೆ, ಪರಶುರಾಮನಂತೆ ನಾವು ಕೂಡ ತಲವಾರ ಹಿಡಿಯುತ್ತೇವೆ” ಎಂಬ ಶಬ್ದಗಳು ಪ್ರತಿಭಟನಾಕಾರರಿಂದ ಕೇಳಿಬಂದವು.

ಬ್ರಾಹ್ಮಣರು ಶಾಂತಿಪ್ರಿಯರು ಆದರೆ ಆತ್ಮಗೌರವಕ್ಕೆ ಧಕ್ಕೆಯಾಗಿದರೆ ಪ್ರತಿಕ್ರಿಯೆಯೂ ತೀವ್ರವಾಗಿರುತ್ತದೆ ಎಂದು ವಾಕ್ಚಾತುರ್ಯವಿಲ್ಲದ ಸ್ಪಷ್ಟ ಸಂದೇಶವನ್ನು ನೀಡಲಾಯಿತು.
ಶಾಸಕರ ಆಕ್ರೋಶ:

“ವಿದ್ಯಾರ್ಥಿಗಳ ಧಾರ್ಮಿಕ ಅಭ್ಯಾಸಗಳಿಗೆ ಸಂಬಂಧಪಟ್ಟಂತೆ ಸರ್ಕಾರದ ನೀತಿ ಎರಡು ಮೆಟ್ಟಿಲಾಗಿರುವಂತಿದೆ. ಹಿಜಾಬ್ ಪರ ವಿಚಾರವಾಗಿ ನೀವು ತಕ್ಷಣ ಸ್ಪಂದಿಸಿದ್ದೀರಿ. ಆದರೆ ಜನಿವಾರ ಕುರಿತು ಕತ್ತುಮೆರೆಯುತ್ತಿರುವ ನಿಮ್ಮ ನಿಶ್ಶಬ್ದತೆ ಏನು ಸೂಚಿಸುತ್ತದೆ?” ಎಂದು ಶಾಸಕ ಅಭಯ ಪಾಟೀಲ ಪ್ರಶ್ನಿಸಿದರು. “ಅವರ ಕೈ ಕತ್ತರಿಸಿದರೆ ನಡೆಯುತ್ತದೆಯೆ?” ಎಂಬ ವಾಕ್ಯದಿಂದ ಅವರ ಆಕ್ರೋಶ ತೀವ್ರತೆಯ ಮಟ್ಟ ಸ್ಪಷ್ಟವಾಯಿತು.
ಸಮುದಾಯದ ವಿದ್ವಾಂಸರು ಎಚ್ಚರಿಕೆ :
ಬ್ರಾಹ್ಮಣ ಸಮಾಜದ ಅನಿಲ್ ಪೊತದಾರ್, ಭರತ್ ದೇಶಪಾಂಡೆ, ಆರ್.ಎಸ್. ಮುತಾಲಿಕ್ ದೇಸಾಯಿ, ಅಕ್ಷಯ ಕುಲಕರ್ಣಿ ಸೇರಿದಂತೆ ಹಲವಾರು ಹಿರಿಯರು ಹಾಜರಿದ್ದರು. “ನಾವು ಶಾಂತಿಯುತವಾಗಿ ಇದ್ದರೂ ನಮ್ಮ ಧರ್ಮಕ್ಕೆ ಪದೇ ಪದೇ ಧಕ್ಕೆಯಾಗುತ್ತಿದ್ರೆ, ಶಾಂತಿಯ ದಾರಿಯಲ್ಲೇ ನಡೆಯೋದು ಕಷ್ಟಕರ” ಎಂಬ ಮುನ್ನೆಚ್ಚರಿಕೆಯನ್ನು ಅವರು ನೀಡಿದರು.
ಮಾನವ ಸರಪಳಿಯಿಂದ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆ:
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಚನ್ನಮ್ಮ ವೃತ್ತದಿಂದ ಮೆರವಣಿಗೆ ನಡೆದಿದ್ದು, ಹಲವು ಜನಿವಾರಧಾರಿ ಪ್ರತಿಭಟನಾಕಾರರು ಶಾಂತಿಯುತವಾಗಿ ತಮ್ಮ ಧ್ವನಿ ಎತ್ತಿದರು.

ಜನಿವಾರ ಕತ್ತರಿಸಿದವರ ವಿರುದ್ದ ಕಾನೂನು ಕ್ರಮ ಕೈಗೊಳ್ಳದೇ ಇಟ್ಟುಕೊಂಡರೆ, ಈ ದುರ್ಘಟನೆಯ ಹಿಂದೆ ಸರ್ಕಾರವಿದೆ ಎಂದು ನಂಬಬೇಕಾಗುತ್ತದೆ” –
ಅಭಯ ಪಾಟೀಲ

“ನಾವು ಶಾಂತಿಪ್ರಿಯರು. ಆದರೆ ಪುನಃ ಪುನಃ ಧರ್ಮಕ್ಕೆ ತೊಂದರೆ ನೀಡಿದರೆ, ಪರಶುರಾಮ ಶಕ್ತಿ ಜೀವಂತವೆಂದು ತೋರಿಸಬೇಕು!” – ಅನಿಲ್ ಪೊತದಾರ್

