Headlines

ರಾಜೀನಾಮೆಗೆ ಮುಂದಾಗಿದ್ದ R I ? ಕಾರಣ ಏನ್ ಗೊತ್ತೆ?

ಬೆಳಗಾವಿ.

ಗಡಿನಾಡ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ಶಾಖೆಯಲ್ಲಿ ನಿತ್ಯ ನಡೆಯುತ್ತಿರುವ ಕಿರುಕುಳದಿಂದ ಕಂದಾಯ ನಿರೀಕ್ಷಕರು ರಾಜೀನಾಮೆಗೆ ಮುಂದಾಗುತ್ತಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಶ್ರೀಕಾಂತ ಇರಾಳೆ ಎಂಬುವರೇ ಇಂದು ರಾಜೀನಾಮೆಗೆ ಮುಂದಾದ ಕಂದಾಯ ನಿರೀಕ್ಷಕ.

ಕಳೆದ ಕೆಲ ದಿನಗಳಿಂದ ಇವರಿಗೆ PID ಸಂಬಂಧ ಕೆಲ ನಗರಸೇವಕರು ಕಿರಿಕಿರಿ ಮಾಡುತ್ತಿದ್ದಾರೆ. ಇದರಿಂದ ಮಾನಸಿಕ ನೆಮ್ಮದಿ ಇಲ್ಲದಾಗಿದೆ. ಈ ಬಗ್ಗೆ ಸಂಬಂಧಿಸಿದವರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಶ್ರೀಕಾಂತ ಅವರು ಆಯುಕ್ತರನ್ನು ಭೆಟ್ಟಿ ಮಾಡಿ ರಾಜೀನಾಮೆ ಪತ್ರ ಕೊಡಲು ಆಗಮಿಸಿದ್ದರು ಎಂದು ಗೊತ್ತಾಗಿದೆ.

Leave a Reply

Your email address will not be published. Required fields are marked *

error: Content is protected !!