Headlines

ಮೇಣದ ಬತ್ತಿ ಹಿಡಿದ ಕೈ ತಲವಾರ ಹಿಡಿಯಲು ಸಜ್ಜು”

ಮೌನ ರ್ಯಾಲಿಯಲ್ಲಿ ಉಗ್ರತೆಯ ವಿರುದ್ಧ ಘೋಷಣೆ:

ಬೆಳಗಾವಿ ದಕ್ಷಿಣ ಬಿಜೆಪಿ ವತಿಯಿಂದ ಆಯೋಜಿಸಿದ ಕಾರ್ಯಕ್ರಮ

ಹತ್ತು ಸಾವಿರಕ್ಕೂ ಹೆಚ್ಚು ಜನ‌ಭಾಗಿ.

ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ನಡೆದ ರ್ಯಾಲಿ

ಮೇಣದ ಬತ್ತಿ ಹಿಡಿದ ಕೈ ತಲವಾರ ಹಿಡಿಯಲು ಸಜ್ಜು

ಪಹಲ್ಗಾಮ ಹತ್ಯಾಕಾಂಡ ಖಂಡಿಸಿ ಬೆಳಗಾವಿಯಲ್ಲಿ ಹಿಂದೂಪರ ಸಂಘಟನೆಗಳ ಕ್ಯಾಂಡಲ್ ಮಾರ್ಚ್

ಬೆಳಗಾವಿ:

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮದಲ್ಲಿ ನಡೆದ ಭಯಾನಕ ಹಿಂದೂಹತ್ಯೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ದಕ್ಷಿಣ ಬಿಜಿಪಿ ಕಾರಗಯಕರ್ತರು ಸಂಘಟನೆಗಳು ಬುಧವಾರ ಸಂಜೆ ಬೆಳಗಾವಿಯಲ್ಲಿ ಕ್ಯಾಂಡಲ್ ಮಾರ್ಚ್‌ ಮೂಲಕ ತೀವ್ರ ಪ್ರತಿರೋಧ ವ್ಯಕ್ತಪಡಿಸಿವೆ.

ನಗರದ ನಾಥಪೈ ವೃತ್ತದಿಂದ ಕಪಿಲೇಶ್ವರ ಸೇತುವೆವರೆಗೆ ನಡೆದ ಮೌನ ಮೆರವಣಿಗೆಯಲ್ಲಿ ಸುಮಾರು ಅತ್ಯಧಿಕ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಅವರ ಕೈಯಲ್ಲಿ ಮೇಣದ ಬತ್ತಿ ಇದ್ದರೂ, ಅವರ ನೋಟ-ನೆನಪುಗಳಲ್ಲಿ ಉಗ್ರತೆಯ ವಿರುದ್ಧ ಕ್ರೂರ ಪ್ರತಿಕ್ರಿಯೆ ಸ್ಪಷ್ಟವಾಗಿ ಕಾಣುತ್ತಿತ್ತು.

ಮೌನದ ನಡುವೆ ಆಕ್ರೋಶ”
ಈ ಮೆರವಣಿಗೆಯ ವೇಳೆ ಹಲವರು ಮಾತನಾಡಿ, ಮೇಣದ ಬತ್ತಿ ಹಿಡಿಯುವ ಕೈಗಳು ತಲವಾರ ಹಿಡಿಯಲು ಕೂಡ ತಯಾರಾಗುತ್ತವೆ ಎಂಬ ಎಚ್ಚರಿಕೆಯ ಸಂದೇಶ ನೀಡಿದರು.


ಸಂತೋಷ ಜೈನೋಜಿ ಮಾತನಾಡುತ್ತಾ, “ಜಿಹಾದಿ ಭಯೋತ್ಪಾದಕರು ಹಿಂದೂ ಎಂದು ಗುರುತಿಸಿ ಪುರುಷರನ್ನು ವಿವಸ್ತ್ರಗೊಳಿಸಿ ಹತ್ಯೆ ಮಾಡಿದ್ದಾರೆ. ಇಂತಹ ಕ್ರೂರತೆಗೆ ಒಗ್ಗಟ್ಟಿನಿಂದಲೇ ಪ್ರತಿರೋಧ ಸಾಧ್ಯ. ಇಂದು ನಾವು ಬತ್ತಿ ಹಿಡಿದಿದ್ದೇವೆ, ನಾಳೆ ತಲವಾರ ಹಿಡಿಯುವುದಕ್ಕೂ ಹಿಂದೇಟಿ ಇಲ್ಲ” ಎಂದರು.

ಹಿಂದೂ ವಿರೋಧಿಗಳಿಗೆ ಸ್ಪಷ್ಟ ಸಂದೇಶ ನೀಡೋಣ” ಶಾಸಕ ಅಭಯ ಪಾಟೀಲ

ಇದು ಕೇವಲ ಮೌನ ಹೋರಾಟವಲ್ಲ. ಜಿಹಾದಿ ಮನಸ್ಸು ಹೊಂದಿರುವ, ಹಿಂದೂ ವಿರೋಧಿ ರಣಹೇಡಿಗಳ ವಿರುದ್ಧ ನಾವು ಒಂದಾಗಬೇಕು. ಈಗಲೇ ಪ್ರತಿಜ್ಞೆ ತೆಗೆದುಕೊಳ್ಳಿ – ಪಾಕಿಸ್ತಾನ ಪರ ನಿಲುವು ಹೊಂದಿರುವವರಿಂದ ಯಾವುದೇ ವಸ್ತು ಖರೀದಿಸಬಾರದು. ಇದು ಹೋರಾಟದ ಮೊದಲ ಹೆಜ್ಜೆ” ಎಂದು ಹೇಳಿದರು.

ಸರ್ಜಿಕಲ್ ಸ್ಟ್ರೈಕ್ ಮೀರುವ ತೀವ್ರ ಕ್ರಮ ಬೇಕು” – ಅನಿಲ ಬೆನಕೆ

ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, “ಉಗ್ರರು ಮುಂದೆ ಬಂದು ಹೋರಾಡಲು ಧೈರ್ಯವಿಲ್ಲ. ಹಿಂದಿನಿಂದ ಬಂದು ಅಮಾಯಕರನ್ನು ಬಲಿ ತೆಗೆದುಕೊಳ್ಳುವುದು ಕೇವಲ ಪಿತೂರಿ. ಇದು ಖಂಡನೀಯ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರು ಈ ಘಟನೆಗೆ ತಕ್ಕ ಗಂಭೀರವಾದ, ಭಯಾನಕ ಪ್ರತಿಕ್ರಿಯೆ ನೀಡಬೇಕು” ಎಂದು ಒತ್ತಾಯಿಸಿದರು.

ಈ ಮೌನ ಮೆರವಣಿಗೆಯು ಸಾಂತ್ವನಕ್ಕಿಂತಲೂ ಹೆಚ್ಚು ಸಂದೇಶದ ಮೆರವಣಿಗೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ,

Leave a Reply

Your email address will not be published. Required fields are marked *

error: Content is protected !!