ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟನೆ
`ಸಾಕು ಪ್ರಾಣಿಗಳಿಂದ ಮಾನಸಿಕ ಶಾಂತಿ‘
ಬೆಳಗಾವಿ.
ಸಾಕು ಪ್ರಾಣಿಗಳು ಇಂದು ಕೇವಲ ಮನರಂಜನೆಗಾಗಿ ಅಲ್ಲ, ಅವು ಮನೆಯವರಾಗಿ, ಜೀವನದ ಅಗತ್ಯ ಭಾಗವಾಗಿ ರೂಪುಗೊಂಡಿವೆ ಎಂದು ಡಾ ಪಶುವೈದ್ಯ ಡಾ. ಪಿ.ಎಂ. ಪಂಪಪತಿ ಹೇಳಿದರು.
ನಗರದಲ್ಲಿ ಭಾನುವಾರ ‘ಸೋಲ್ಮೇಟ್ಸ್ ಪೆಟ್ ಹಾಸ್ಪಿಟಲ್’ ಉದ್ಘಾಟಿಸಿ ಮಾತನಾಡಿದರು.
ಆಧುನಿಕ ಜೀವನದ ಒತ್ತಡದಲ್ಲಿ ಇರುವವರಿಗಾಗಿ ಸಾಕು ಪ್ರಾಣಿಗಳು ಪ್ರಮುಖವಾಗಿವೆ ಎಂದರು,

ಶ್ವಾನಗಳು ಮಾನವನ ಆತಂಕ ನಿವಾರಕವಾಗಿದ್ದು, ಮಕ್ಕಳಿಂದ ಹಿರಿಯರ ತನಕ ಎಲ್ಲರ ಬದುಕಿಗೆ ಸಂತೋಷ, ಉತ್ಸಾಹ ತುಂಬಿಸುತ್ತಿವೆ. ತಜ್ಞರಾಗಿ, ಉದ್ಯೋಗಸ್ಥರಾಗಿ, ರಾಜಕಾರಣಿಗಳಾಗಿ ಎಲ್ಲರಿಗೂ ಮನೆಯಲ್ಲಿ ಒಂದು ಸಾಕು ಪ್ರಾಣಿ ಬೇಕು ಎಂದರು. ಪೆಟ್ ಥೆರಪಿ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಹೊಸ ದಾರಿ ನೀಡುತ್ತಿದೆ,” ಎಂದು ಹೇಳಿದರು.
“ಇಂದು ಪ್ರತಿ ಮನೆಯಲ್ಲಿ ನಾಯಿ ಅಥವಾ ಬೆಕ್ಕನ್ನು ಸಾಕುವ ಪ್ರವೃತ್ತಿ ತೀವ್ರವಾಗುತ್ತಿದೆ. ಪೋಷಕ ಪ್ರಾಣಿಗಳ ಸಾನ್ನಿಧ್ಯದಲ್ಲಿ ಬೆಳೆದ ಮಕ್ಕಳು ಹೆಚ್ಚು ಮಾನವೀಯ ಗುಣಗಳನ್ನು ಹೊಂದುತ್ತಾರೆ. ಜತೆಗೆ ಮಾನಸಿಕ ಒತ್ತಡ, ದೀರ್ಘಕಾಲದ ಕಾಯಿಲೆಗಳ ಬಾಧೆಗಳಿಂದ ಬಳಲುತ್ತಿರುವವರಿಗೂ ಸಾಕುಪ್ರಾಣಿಗಳು ಧೈರ್ಯ ತುಂಬುತ್ತಿರುವುದು ಸಂಶೋಧನೆಯ ಮೂಲಕ ಸಾಬೀತಾಗಿದೆ ಎಂದು ವಿವರಿಸಿದರು.
ಡಾ. ವಿಜಯಲಕ್ಷ್ಮಿ ಕುಲಗೋಡ ಮತ್ತು ಡಾ. ಶಶಿಕಾಂತ ಕುಲಗೋಡ ನನ್ನನ್ನು ಭೇಟಿಯಾಗಿ ಬೆಳಗಾವಿಯಲ್ಲಿ ಪೆಟ್ ಹಾಸ್ಪಿಟಲ್ ಸ್ಥಾಪನೆಯ ಕನಸು ಹಂಚಿಕೊಂಡರು. ಆದರೆ ಆಗ ನನ್ನಲ್ಲಿ ಕೆಲ ಪ್ರಶ್ನೆಗಳಿದ್ದವು. ಇಂದು ಅವರ ಬದ್ಧತೆ, ದೃಢ ಸಂಕಲ್ಪ ಫಲವಾಗಿ ಈ ಅತ್ಯಾಧುನಿಕ ಹಾಸ್ಪಿಟಲ್ ಉದ್ಘಾಟಿಸಲು ನನಗೆ ಹೆಮ್ಮೆಯಾಗಿದೆ ಎಂದು ಡಾ. ಪಂಪಪತಿ ಸಂತೋಷ ವ್ಯಕ್ತಪಡಿಸಿದರು.
ಆಸ್ಪತ್ರೆಯ ವ್ಯವಸ್ಥಾಪನಾ ನಿದರ್ೇಶಕಿ ಡಾ. ವಿಜಯಲಕ್ಷ್ಮಿ ಕುಲಗೋಡ ಅವರು, “ಸಾಕು ಪ್ರಾಣಿಗಳ ಮೇಲಿನ ಅತೀವ ಪ್ರೀತಿಯಿಂದ ಮತ್ತು ಸೇವಾ ಮನೋಭಾವದಿಂದಲೇ ಈ ಆಸ್ಪತ್ರೆಯನ್ನು ಸ್ಥಾಪಿಸಿದ್ದೇವೆ,” ಎಂದು ತಿಳಿಸಿದರು.
ಡಾ. ಶಶಿಕಾಂತ ಕುಲಗೋಡ ಅವರು, ಸಾಕು ಪ್ರಾಣಿಗಳಿಗೆ ಉತ್ತಮ ಚಿಕಿತ್ಸಾ ಸೇವೆಗಳನ್ನು ಕಡಿಮೆ ದರದಲ್ಲಿ ಒದಗಿಸುವ ಉದ್ದೇಶ ನಮ್ಮದು ಎಂದು ತಿಳಿಸಿದರು.
ಆಸ್ಪತ್ರೆಯಲ್ಲಿ ತಪಾಸಣಾ ಯಂತ್ರಗಳು, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ತುತರ್ು ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿದ್ದು, ಇದು ಬೆಳಗಾವಿಯಲ್ಲಿ ತನ್ನ ರೀತಿಯಲ್ಲೇ ಮೊದಲ ಪೆಟ್ ಹಾಸ್ಪಿಟಲ್ ಆಗಿದೆ ಎಂದರು.
ಡಾ. ಅವಿನಾಶ್ ಭಿರಡೆ, ಡಾ. ಅನಿಲ್ ಕುಮಾರ್ ಜಾಮಿ, ಡಾ. ಶಶಿಧರ ನಾಡಗೌಡ, ಡಾ. ವಿಶ್ವನಾಥ ಬಂಟಿ, ಡಾ. ಸುಧಾ ನಾಡಗೌಡ, ಡಾ. ಹೇಮಂತ ಸಣಕ್ಕಿ, ಡಾ. ಶ್ರೀಕಾಂತ ಗಣವಿ, ರೂಪಾ ತಲ್ವಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

