Headlines

ಮೇಲ್ಸೇತುವೆಗೆ ಬಸವೇಶ್ವರ ಹೆಸರು..!

ಬೆಳಗಾವಿ.
ಬಸವ ಜಯಂತಿಯ ಹಿನ್ನೆಲೆಯಲ್ಲಿ ಇಲ್ಲಿನ ರೈಲ್ವೆ ಮೇಲ್ವೇತುವೆಗೆ ವಿಶ್ವಗುರು ಜಗಜ್ಯೋತಿ ಬಸವೇಶ್ವರ ರೇಲ್ವೇ ಮೇಲ್ವೇತುವೆ ಎಂದು ನಾಮಕರಣ ಮಾಡಿ ರವಿವಾರ ನಾಮಫಲಕವನ್ನು ಅನಾವರಣಗೊಳಿಸಲಾಯಿತು.

ಸಂಸದ ಜಗದೀಶ ಶೆಟ್ಟರ, ದಕ್ಷಿಣ ಶಾಸಕ ಅಭಯ ಪಾಟೀಲ, ಕೆ.ಎಲ್.ಇ. ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸೇವಕರಾದ ನುಮಂತ ಕೊಂಗಾಲಿ, ರಾಜಶೇಖರ ಡೋಣಿ, ರತ್ನಪ್ರಭಾ ಬೆಲ್ಲದ, ಎಂ.ಬಿ. ಝೀರಲಿ, ಈರಣ್ಣ ದೇಯನ್ನವರ, ಬಸವರಾಜ್ ರೊಟ್ಟಿ ಸೇರಿದಂತೆ ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶಾಸಕ ಅಭಯ ಪಾಟೀಲ ಮಾತನಾಡಿ, ಸ್ಥಳೀಯ ಜನಪ್ರತಿನಿಧಿಗಳು ಕೈಗೊಂಡ ನಿರ್ಣಯದಂತೆ ನಗರದ ರೇಲ್ವೆ ಮೇಲ್ಸೇತುವೆಗೆ ವಿಶ್ವಗುರು ಜಗಜ್ಯೋತಿ ಬಸವೇಶ್ವರ ಹೆಸರಿಡಲಾಗಿದೆ. ಅಲ್ಲದೇ ಬೆಳಗಾವಿಯಲ್ಲಿ ಬಸವಣ್ಣನವರ ಮೂರ್ತಿ ಮತ್ತು ಅನುಭವ ಮಂಟಪದ ಪ್ರತಿಕೃತಿಯನ್ನು ನಿರ್ಮಿಸಿಲು ಸ್ಮಾರ್ಟ್ ಸಿಟಿಯಿಂದ 18 ಕೋಟಿ ರೂ.ಗಳು ಮಂಜೂರಾಗಿದ್ದು, ಆ ಅನುದಾನ ಬೇರೆಡೆ ವರ್ಗಾವಣೆಯಾಗಿದೆ. ರಾಜ್ಯ ಸರ್ಕಾರ ಆ ಅನುದಾನವನ್ನು ಮರಳಿ ತರಲು ಪ್ರಯತ್ನಿಸಬೇಕಿ. ಮೂರು ವರ್ಷದ ಹಿಂದೆಯೇ ಯೋಜನೆಯನ್ನು ತಯಾರಿಸಲಾಗಿದ್ದರೂ ಇಲ್ಲಿಯವರೆಗೆ ಈ ಕಾರ್ಯ ನೆರವೇರಿಲ್ಲ. ಹೀಗಾಗಿ, ಶೀಘ್ರದಲ್ಲೇ ಅನುದಾನವನ್ನು ಮರಳಿ ತರಬೇಕೆಂದರು.

Leave a Reply

Your email address will not be published. Required fields are marked *

error: Content is protected !!