ಸ್ಮಶಾನ ಅಭಿವೃದ್ಧಿಗೆ ಚಾಲನೆ
ಬೆಳಗಾವಿ.
ಅನಗೋಳ ಸ್ಮಶಾನ ಎಂದೇ ಹೆಸರಾದ ಚಿದಂಬರ ನಗರದಲ್ಲಿರುವ ಸ್ಮಶಾನದ ಸಮಗ್ರ ಅಭಿವೃದ್ಧಿಗೆ ಶಾಸಕ ಅಭಯ ಪಾಟೀಲ ಚಾಲನೆ ನೀಡಿದರು.

ಈಗಾಗಲೇ ಹತ್ತು ಲಕ್ಷ ರೂ ವೆಚ್ಚದ ಕಾಮಗಾರಿಗೆ ಪೂಜೆ ಸಲ್ಲಿಸಲಾಯಿತು. ಅಷ್ಟೇ ಅಲ್ಲ ಇನ್ನುಳಿದ ಕಾಮಗಾರಿಗಳನ್ನು ತೆಗೆದುಕೊಳ್ಳಿ. ಅದಕ್ಕೆ ಇನ್ನಷ್ಡು ಅನುದಾನ ನೀಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಮಹಾನಗರ ಪಾಲಿಕೆಯ ಉಪಮೇಯರ್ ವಾಣಿ ವಿಲಾಸ ಜೋಶಿ, ನಗರಸೇವಕ ಜಯಂತ ಜಾಧವ ಮುಂತಾದವರು ಹಾಜರಿದ್ದರು.

