Headlines

ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ಕೈ ನಾಟಕ..!?

`ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲೇಕೆ ನಾಟಕ’
ಬೆಳಗಾವಿ. ಪೆಹಲ್ಗಾಂದಲ್ಲಿ ನಡೆದ ಹಿಂದೂಗಳ ನರಮೇಧದ ನಂತರ ಇಡೀ ದೇಶವ್ಯಾಪಿ ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಿದ್ದಾರೆ, ಅಂತಹುದರಲ್ಲಿ ಕಾಂಗ್ತೆಸ್ಸಿಗರಿಗೆ ಪೆಹಲ್ಗಾಂ ಬಿಟ್ಟು ಬೆಳಗಾವಿಯಲ್ಲಿ ಬಂದು ಈ ರೀತಿ ನಾಟಕ ಮಾಡುವ ಅವಶ್ಯಕತೆಯಾದರೂ ಏನಿತ್ತು ಎಂದು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲರು ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿಂದು ಸಂಜೆ ತುತರ್ು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೋರಾಟ ಮಾಡುವುದು ಪ್ರತಿಯೊಬ್ಬರ ಹಕ್ಕು, ಅವರೂ ಸಹ ಅಲ್ಲಿ ಹೋಗಿ ಕಲ್ಲು ಹೊಡೆದಿಲ್ಲ. ಬದಲಾಗಿ ಸಿಎಂ ಅವರು ಪಾಕಿಸ್ತಾನ ಪರ ಮಾತನಾಡಿದ್ದರಿಂದ ಸಿಎಂ ಅವರಿಗೆ ಗೋ ಬ್ಯಾಕ್ ಎಂದಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ಅಭಯ ಪಾಟೀಲ ಕೇಳಿದರು,


ಉಗ್ರರು 26 ಜನರನ್ನು ಹತ್ಯೆ ಮಾಡಿದರೂ ಕೂಎ ಪಾಕಿಸ್ತಾನ ಜೊತೆ ಯುದ್ಧ ಬೇಡ ಎನ್ನುವ ಮೂಲಕ ಮುಸ್ಲೀಂರನ್ನು ಓಲೈಸುವ ರಾಜಕಾರಣ ಮಾಡಿದ್ದಾರೆ, ಈ ಹೇಳಿಕೆಂಯಿಂದ ಇವತ್ತು ಪಾಕಿಸ್ತಾನದ ಟಿವಿಗಳಲ್ಲಿ ಸಿದ್ಧರಾಮಯ್ಯ ಹೀರೋ ಆಗಿದ್ದಾರೆಂದು ವ್ಯಂಗ್ಯವಾಡಿದರು
ಅದನ್ನು ಶಾಂತರೀತಿಯಿಂದ ಹೋಗಿ ಖಂಡನೆ ಮಾಡಿದ್ದಾರೆ, ಆದರೆ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡು ಹೋಗುವಾಗ ದೌರ್ಜನ್ಯ ನಡೆಸಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಪ್ರಶ್ನೆ ಮಾಡಿದರು,
ಇಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರನ್ನು ಪೊಲೀಸರು ಕರೆದುಕೊಂಡು ಹೋಗುವಾಗ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಲು ಹೋಗಿದ್ದು ಸ್ಪಷ್ಟವಾಗಿ ಗೊತ್ತಾಗುತ್ತದೆ, ಇದನ್ನು ಬಿಜೆಪಿ ಎಂದಿಗೂ ಸಹಿಸಿಕೊಳ್ಳಲು ಆಗಲ್ಲ ಎಂದು ಅಭಯ ಪಾಟೀಲ ತಿರುಗೇಟು ನೀಡಿದರು.

ರಾಜ್ಯದ ಕಾಂಗ್ರೆಸ್ ಸಕರ್ಾರ ಅಂದರೆ ಹಿಟ್ಲರ್ ಸಕರ್ಾರವಾಗಿದೆ, ಇವರಿಗೆ ಪೆಹಲ್ಗಾಂ ಬಗ್ಗೆ ಏನೂ ಕಾಳಜಿ ಇಲ್ಲ ಎಂದು ಅವರು ಹೇಳಿದರು.

ಸಿಎಂ ತಾಳ್ಮೆ ಕಳೆದುಕೊಂಡು ವರ್ತಿಸಿ ತರವಲ್ಲ
ಕಾಂಗ್ರೆಸ್ ಸಮಾವೇಶದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಕ್ಕೆ ತಾಳ್ಮೆ ಕಳೆದುಕೊಂಡ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡೆ ಸರಿಯಲ್ಲ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.


ಮುಖ್ಯಮಂತ್ರಿಗಳು ತಾಳ್ಮೆಯಿಂದ ಸಂದಭರ್ೋಚಿತವಾಗಿ ಉತ್ತರಿಸುವ ಜಾಣ್ಮೆ ಅವರಲ್ಲಿರಬೇಕಿತ್ತು ಎಂದರು. ವೇದಿಕೆಯ ಮೇಲೆ ಒಬ್ಬ ದಕ್ಷ ಪೊಲೀಸ್ ಅಧಿಕಾರಿಯನ್ನು ಕರೆದು ಅವಮಾನಿಸಿ, ಕಪಾಳಮೋಕ್ಷ ಮಾಡಲು ಮುಂದಾಗಿದ್ದು ಜವಾಬ್ದಾರಿಯುತ ಸ್ಥಾನದಲ್ಲಿರುವ ಮುಖ್ಯಮಂತ್ರಿಗಳಿಗೆ ಇದು ಶೋಭೆ ತರುವಂತದ್ದಲ್ಲ, ತಾಳ್ಮೆ ಕಳೆದುಕೊಂಡು ವತರ್ಿಸಿದ್ದು ಸರಿಯಲ್ಲ ಹಿಂದೆ ಜೆ.ಎಚ್ ಪಟೇಲ್ ಅವರು ಮುಖ್ಯಮಂತ್ರಿಗಳಾಗಿದ್ದಾಗ ಅವರ ವಿರುದ್ಧ ಎಷ್ಟೇ ಪ್ರತಿಭಟನೆ ನಡೆಸಿದರೂ ಅವರು ಸಮಾಧಾನದಿಂದ ವತರ್ಿಸುತ್ತಿದ್ದರು, ಅದೇ ರೀತಿ ನಡವಳಿಕೆ ಇವರಲ್ಲಿಯೂ ಇದ್ದರೆ ಒಳ್ಳೆಯದು. ಎಂದು ಅವರು ಕಿವಿಮಾತು ಹೇಳಿದರು. ಕಾರ್ಯಕ್ರಮ ನಡೆದ ಸ್ಥಳ ಎಸ್.ಪಿ ಅವರ ವ್ಯಾಪ್ತಿಗೆ ಬರುವುದಿಲ್ಲ. ಅದು ಪೋಲಿಸ್ ಕಮಿಷನರ್ ವ್ಯಾಪ್ತಿಗೆ ಬರುತ್ತದೆ. ಅವರನ್ನು ಪ್ರಶ್ನಿಸುವ ಬದಲು ಎಸ್.ಪಿ ಅವರನ್ನು ಅವಮಾನಿಸಿದ್ದು ಸರಿ ಅಲ್ಲ ಎಂದರು.
ಒಬ್ಬ ದಕ್ಷ ಅಧಿಕಾರಿಯನ್ನು ಹೀಗೆ ಅವಮಾನಿಸಿದ್ದರಿಂದ ಮುಂದೆ ಅವರಿಗೆ ಸರಿಯಾಗಿ ಕಾರ್ಯ ನಿರ್ವಹಿಸಲು ತೊಂದರೆಯಾಗುತ್ತದೆ. ಪೂವರ್ಾಪರ ಯೋಚಿಸದೆ ಈ ರೀತಿ ನಡೆದುಕೊಂಡಿದ್ದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದರು.

ಮೊನ್ನೆ ಯುದ್ಧ ಮಾಡುವುದು ಬೇಡ ಎಂದು ಪಾಕಿಸ್ತಾನದ ಪರವಾಗಿ ಹೇಳಿಕೆ ಕೊಟ್ಟು, ಮತ್ತೆ ಅದನ್ನು ತಿರುಚುವುದು ಹೀಗೆ ಸಿದ್ದರಾಮಯ್ಯನವರು ಪದೇ ಪದೇ ಮಾಡುತ್ತಾ ಬಂದಿದ್ದು, ಸಿದ್ದರಾಮಯ್ಯನವರ ಮನಸ್ಸು ವಿಚಲಿತವಾಗಿರುವುದನ್ನು ತೋರಿಸುತ್ತದೆ ಎಂದು ಸಂಸದ ಜಗದೀಶ ಶೆಟ್ಟರ್ ಅವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.

ಯಾವ ನೈತಿಕತೆ ಇದೆ?

:ಪಾಕಿಸ್ತಾನದ ವಿರುದ್ಧ ಯುದ್ಧ ಬೇಡ ಎಂದು ಹೇಳಿಕೆ ನೀಡಿ, ನೀವು ವೈರಿ ರಾಷ್ಟ್ರಕ್ಕೆ ಬೆಂಬಲಿಸುತ್ತಿದ್ದಿರಿ. ನಿಮಗೆ ಏನು ನೈತಿಕತೆಯಿದೆ ಎಂದು ಪ್ರಶ್ನಿಸಿ, ಪ್ರತಿಭಟಿಸಲು ಹೋದಾಗ ನಮ್ಮ‌ ಬಿಜೆಪಿ ಕಾರ್ಯಕರ್ತೆಯರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದೌರ್ಜನ್ಯ ಎಸಗಿದ್ದಾರೆ. ಪೊಲೀಸ್ ಬಲಪ್ರಯೋಗದ ಮೇಲೆ ನಮ್ಮ ಮಹಿಳಾ ಕಾರ್ಯಕರ್ತೆಯರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.

, ಯುದ್ಧದ ಅವಶ್ಯಕತೆ ಇಲ್ಲ. ನಾವು ಬುದ್ಧನ ನಾಡಿನವರು. ಪಾಕಿಸ್ತಾ‌ನ ಜೊತೆಗೆ ಯುದ್ಧ ಮಾಡಬಾರದು ಎಂದು ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು‌. ಇಡೀ ದೇಶದ ಜನರು ಭಯೋತ್ಪಾದಕ ಕೃತ್ಯವನ್ನು ಖಂಡಿಸಿದ್ದಾರೆ. ಅಲ್ಲದೇ ಅದರ ಹಿಂದಿರುವ ಪಾಕಿಸ್ತಾನದ ಕೃತ್ಯವನ್ನು ಖಂಡಿಸಿ ಅನೇಕ ರಾಷ್ಟ್ರಗಳು ಭಾರತದ ಜೊತೆಗೆ ನಿಂತಿವೆ. ಇಂಥ ಸಂದರ್ಭದಲ್ಲಿ ಜನರ ಮನಸ್ಸಿಗೆ ವಿರುದ್ಧವಾದ ಹೇಳಿಕೆ ನೀಡಿದ್ದರಿಂದ ಸಿದ್ದರಾಮಯ್ಯ ಅವರ ವಿರುದ್ಧ ಹಲವು ಕಡೆ ಪ್ರತಿಭಟನೆಗಳು ನಡೆಯುತ್ತಿವೆ. ಹಾಗಾಗಿ, ನಮ್ಮವರು ಅದನ್ನು ಪ್ರಶ್ನಿಸಲು ಹೊರಟಿದ್ದರು ಎಂದು ಸಮರ್ಥಿಸಿಕೊಂಡರು.

ನಮ್ಮ‌ ಮಹಿಳಾ ಕಾರ್ಯಕರ್ತೆಯರನ್ನು‌ ಪೊಲೀಸರು ಠಾಣೆಯಿಂದ ಠಾಣೆಗೆ ಅವರನ್ನು ಅಲೆದಾಡಿಸುತ್ತಿದ್ದಾರೆ. ಇದು ಸಿ.ಟಿ‌.ರವಿ ಪ್ರಕರಣವನ್ನು ಮರುಕಳಿಸುವಂತಾಗಿದೆ ಎಂದು ಆರೋಪಿಸಿದ ಈರಣ್ಣ ಕಡಾಡಿ, ಇಷ್ಟು ದಿನ ಕಾಂಗ್ರೆಸ್ ಪಕ್ಷ ದುರಾಡಳಿತಕ್ಕೆ ಹೆಸರಾಗಿತ್ತು. ಇಂದು ಓರ್ವ ಪೊಲೀಸ್ ಅಧಿಕಾರಿ‌ ಮೇಲೆ ಕೈ ಮಾಡುವ ಮೂಲಕ ಅವರ ದುರಹಂಕಾರವನ್ನು ಎತ್ತಿ ತೋರಿಸಿದ್ದಾರೆ. ಮುಖ್ಯಮಂತ್ರಿ ಸಂಯಮ ಕಳೆದುಕೊಂಡಿದ್ದಾರೆ. ಹಾಗಾಗಿ, ಈ ರೀತಿ ನಮ್ಮ ಕಾರ್ಯಕರ್ತೆಯರ ಮೇಲೆ ಕೇಸ್ ಹಾಕುವ ಕ್ರಮ ಖಂಡನೀಯ ಎಂದರು.

Leave a Reply

Your email address will not be published. Required fields are marked *

error: Content is protected !!