Headlines

ಶಿವಜಯಂತಿ‌ ಮೆರವಣಿಗೆಃ ಸಿದ್ಧತೆ ಪರಿಶೀಲನೆ

Oplus_16908288

ಮೆರವಣಿಗೆ ಸಿದ್ಧತೆ ಪರಿಶೀಲಿಸಿದ ಮೇಯರ್ ಮಂಗೇಶ್ ಪವಾರ್ ಉಪಮೇಯರ್. ವಾಣಿ ವಿಲಾಸ ಜೋಶಿ.

ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚನೆ.

ನಾಳೆ ದಿ. 1 ರಂದು ಬೆಳಿಗ್ಗೆ‌ ಮತ್ತೇ ಮಾರ್ಗಗಳ ತಪಾಸಣೆ.

ಬೆಳಗಾವಿ.

ನಗರದಲ್ಲಿ ನಾಳೆ ದಿ.‌1 ರಂದು ನಡೆಯಲಿರುವ ಶಿವಜಯಂತಿ ಮೆರವಣಿಗೆ ಪೂರ್ವ ಸಿದ್ಧತೆಯನ್ನು: ಬೆಳಗಾವಿ ಮೇಯರ್ ಮಂಗೇಶ್ ಪವಾರ ಮತ್ತು‌ ಉಪ ಮೇಯರ್ ವಾಣಿ ಜೋಶಿ ಪರಿಶೀಲನೆ ನಡೆಸಿದರು.

ಮೆರವಣಿಯನ್ನು ಕಣ್ತುಂಬಿಕೊಳ್ಳಲು ಆಗಮಿಸುವ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆ ಆಗಬಾರದು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮೆರವಣಿಗೆ ನಿಗದಿಯಾದ ಮಾರ್ಗಗಳ ರಸ್ತೆ ಸಂಚಾರದ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ಸಾರ್ವಜನಿಕ ಸೌಲಭ್ಯಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಪಾಲಿಕೆ ಆಡಳಿತ ಗುಂಪಿನ‌ ನಾಯಕ ಗಿರೀಶ್ ಧೋಂಗಡಿ‌ ಮುಂತಾದವರು ಹಾಜರಿದ್ದರು.

.

Leave a Reply

Your email address will not be published. Required fields are marked *

error: Content is protected !!