ಶ್ರೀಕೃಷ್ಣನ ಜೀವನವೇ ಸರ್ವತ್ಮಕ ನೀತಿಯ ದೀಪಸ್ತಂಭ…!
ಶ್ರೀಕೃಷ್ಣನ ಜೀವನವೇ ಸರ್ವತ್ಮಕ ನೀತಿಯ ದೀಪಸ್ತಂಭ ಬೆಳಗಾವಿ:“ಶ್ರೀಕೃಷ್ಣನು ಕೇವಲ ಪುರಾಣದ ಪಾತ್ರವಲ್ಲ; ಅವನು ಪರಿಪೂರ್ಣ ವ್ಯಕ್ತಿತ್ವದ ಜೀವಂತ ದೀಪ,” ಎಂದು ಶ್ರೀರಾಮಜನ್ಮಭೂಮಿ ನ್ಯಾಸ (ಅಯೋಧ್ಯೆ) ಖಜಾಂಚಿ ಹಾಗೂ ಗೀತಾಪರಿವಾರ ಸಂಸ್ಥಾಪಕರಾದ ಶ್ರೀ ಗೋವಿಂದ ದೇವ ಗಿರಿ ಮಹಾರಾಜ್ ಉಜ್ವಲವಾಗಿ ಹೇಳಿದ್ದಾರೆ. ಎಸಿಪಿಆರ್ ಸಂಸ್ಥೆ ಆಯೋಜಿಸಿದ್ದ ಮೂರು ದಿನಗಳ ಉಪನ್ಯಾಸಮಾಲಿಕೆಯ ಎರಡನೇ ದಿನದಂದು “ಶ್ರೀಕೃಷ್ಣ ನೀತಿ” ವಿಷಯದ ಕುರಿತು ಮಹಾರಾಜ್ ಉಪನ್ಯಾಸ ನೀಡಿದರು. ಅವರು ತಿಳಿಸಿದಂತೆ, “ಶ್ರೀಕೃಷ್ಣ ಪರಿಪೂರ್ಣ ಅವತಾರ. ಅವನ ಗೀತೆ ಕೇವಲ ಓದುವ ಶಾಸ್ತ್ರವಲ್ಲ; ಆತ್ಮಾನುಭವದ…

