
ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು..!
ಆಂತರಿಕ ಹೊಂದಾಣಿಕೆ ಇಲ್ಲದ ಪೊಲೀಸರು. ಮಂತ್ರಿಗಳ ಹೆಸರು ದುರ್ಬಳಕೆ. ಮಂತ್ರಿಗಳ ಹೆಸರಿನಲ್ಲಿ ಅಧಿಕಾರ ದುರ್ಬಳಕೆ ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು. ಕಾನೂನು ಹಿಡಿತ ಕಳೆದುಕೊಂಡ ಖಾಕಿ ಆಡಳಿತ. ಇಲ್ಲಿ ಆಕ್ಷನ್ ಇಲ್ಲವೇ ಇಲ್ಲ. ಬರೀ ನಾಟಕ. ಬೆಳಗಾವಿ, ನಗರದ ಭದ್ರತೆಗೆ ನೂತನ ಪೊಲೀಸ್ ಆಯುಕ್ತರ ಆಗಮನ ಹೊಸ ಆಶಾವಾದವನ್ನು ಮೂಡಿಸಿದರೂ, ಅವರ ಎದುರು ಸವಾಲುಗಳ ಪರ್ವತವೇ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೊಳಗಿನ ಸಹಕಾರದ ಅಭಾವ, ವ್ಯಾಪ್ತಿಯೊಳಗೇ ನಡೆಯುತ್ತಿರುವ ಅಕ್ರಮ ದಂಧೆಗಳ ಬೆನ್ನುತಟ್ಟಿ ನಿಂತಿರುವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ – ಈ…