ಶಿವಾಜಿ ಮೆರವಣಿಗೆಯ ಮಧ್ಯೆ ತಂಪಾದ ಸೇವೆಯ ಸ್ಮರಣೆ: ಮಾನವೀಯ ಸ್ಪರ್ಶ“
ಬೆಳಗಾವಿ:
ಬೆಳಗಾವಿಯ ಬೀದಿಗಳಲ್ಲಿ ಹರಡಿದ ಕೇಸರಿ ಬಾವುಟಗಳು, ಶಿವಾಜಿಯ ಘೋಷವಾಕ್ಯಗಳಿಂದ ಗಗನ ಮುಟ್ಟಿದ ವಾತಾವರಣ, ಸಂಸ್ಕೃತಿಯ ಹೊಂಬೆಳಕು ಹರಡಿದ ಮೆರವಣಿಗೆ…
ಇದರ ಮಧ್ಯೆ ಮತ್ತೊಂದು ಮೌಲ್ಯವನ್ನು ಸಜೀವಗೊಳಿಸಿದ ದೃಶ್ಯವೊಂದು ಬೆಳಗಾವಿಯ ಜನಮನವನ್ನು ಹತ್ತಿರದಿಂದ ಸ್ಪರ್ಶಿಸಿತು.

ಶಿವಜಯಂತಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಭಕ್ತರ ನೀರಿನ ದಾಹ ನೀಗಿಸುವ ಕೆಲಸವನ್ನು ಶಾಸಕ ಅಭಯ ಪಾಟೀಲರು ಮಾಡಿದರು. ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ‘ಉಚಿತ ನೀರಿನ ಪಾಕೀಟ್ ವಿತರಣೆ’ ಈ ಮೆರವಣಿಗೆಯಲ್ಲಿ ಎಲ್ಲರ ಗಮನ ಸೆಳೆಯಿತು. .

ಇದು ಸಣ್ಣದಾದರೂ ಹೃದಯಸ್ಪರ್ಶಿಯಾದ ಸೇವಾ ಕಾರ್ಯವು ಮೆರವಣಿಗೆಯ ಭಕ್ತಿ ಉತ್ಸಾಹಕ್ಕೆ ಮತ್ತೊಂದು ಮೌಲ್ಯವನ್ನು ಸೇರಿಸಿತು.

ಈ”ಶಿವಾಜಿ ಮಹಾರಾಜರು ಜನಪಾಲನೆಯ ಪ್ರತೀಕ. ಅವರು ಪ್ರಜೆಗಳಿಗಾಗಿ ಯುದ್ಧಮಾಡಿದವರು, ನಾವು ಪ್ರಜೆಗಳ ಹಿತಕ್ಕಾಗಿ ಈ ಕಾರ್ಯಗಳನ್ನು ಮಾಡಬೇಕು,” ಎಂದು ಅಭಯ ಪಾಟೀಲ ಹೇಳಿದರು

ಇದು ಕೇವಲ ಕುಡಿಯುವ ನೀರಿನ ವ್ಯವಸ್ಥೆಯಲ್ಲ. ಅದು ಶಾಸಕರ ಆತ್ಮೀಯತೆಗೆ, ಭಕ್ತರ ಆರಾಧನೆಗೆ ಹಾಗೂ ಮಹಾರಾಜರ ಆದರ್ಶಗಳಿಗೆ ನಮನ ಸಲ್ಲಿಸುವ ವಿಧಾನ ಎನ್ನಬಹುದು.
ಮೆರವಣಿಗೆಯಲ್ಲಿ ಉಪಮೇಯರ್ ವಾಣಿ ವಿಲಾಸ ಜೋಶಿಯವರು ಬಿಜೆಪಿ ಕಾರ್ಯಕರ್ತರೊಂದಿಗೆ ನೀರಿನ ಪಾಕೀಟ್‌ಗಳನ್ನು ಹಂಚಿದ ದೃಶ್ಯಗಳು, ಜನಸಮುದಾಯದ ಗಮನ ಸೆಳೆದವು.

