“ಅನಧಿಕೃತ ಆಸ್ತಿಗೆ ಭಾರೀ ದಂಡ!”
ವೇಗಾ ಫನ್ಮೊಬೈಲ್ಗೆ ₹7.08 ಕೋಟಿ ಬಿಲ್ಡಿಂಗ್ ಉಲ್ಲಂಘನೆ ದಂಡ:
ಬೆಳಗಾವಿ ಪಾಲಿಕೆ ಆಯುಕ್ತೆ ಶುಭಾ ಬಿ. ಅವರ ನಿಖರ ಕಾರ್ಯಾಚರಣೆ
ಬೆಳಗಾವಿ, ಮೇ 2:
ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ವರ್ಷಗಳ ಕಾಲ ತೆರಿಗೆ ತಪ್ಪಿಸಿದ್ದ ಬೆಳಗಾವಿಯ ಖ್ಯಾತ ಕಂಪನಿ ವೇಗಾ ಫನ್ಮೊಬೈಲ್ ಪ್ರೈ. ಲಿ.ಗೆ ಬಿಗ್ ಶಾಕ್!
ಬೆಳಗಾವಿ ಮಹಾನಗರ ಪಾಲಿಕೆ (BCC) ಈ ವೆಗಾ ಕಂಪನಿಗೆ ₹7.08 ಕೋಟಿ ತೆರಿಗೆ ದಂಡ ವಿಧಿಸಿ ಕಟ್ಟುನಿಟ್ಟಿನ ಸಂದೇಶ ನೀಡಿದೆ.

ಪಾಲಿಕೆ ಮೂಲಗಳ ಪ್ರಕಾರ, ಕಂಪನಿಯು ಸ್ವಮೌಲ್ಯಮಾಪನ ಯೋಜನೆಯಡಿ 2004ರಿಂದ ವಾಣಿಜ್ಯ ವರ್ಗದಲ್ಲಿ ತೆರಿಗೆ ಪಾವತಿಸುತ್ತಿದ್ದರೂ, ನಿಜವಾದ ನಿರ್ಮಾಣ ಪ್ಲಾನ್ಗೆ ಅನುಗುಣವಾಗಿರದ 24,000 ಚ.ಅಡಿ ಅನಧಿಕೃತ ಕಟ್ಟಡ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಇದನ್ನು ವಿಚಾರಣಾ ಸಂದರ್ಭದಲ್ಲಿಯೇ ಕಂಪನಿಯು ಒಪ್ಪಿಕೊಂಡಿದೆ.

ಶುಭಾ ಬಿ. ಅವರ ಸ್ಪಷ್ಟ ನಿರ್ಧಾರ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಯುಕ್ತೆ ಶುಭಾ ಬಿ. ಅವರು ಜನವರಿ 31, ಏಪ್ರಿಲ್ 15 ಮತ್ತು 21ರಂದು ಮೂರು ಹಂತದ ವಿಚಾರಣೆ ನಡೆಸಿ, ಏಪ್ರಿಲ್ 25ರಂದು ಅಂತಿಮ ಆದೇಶ ಹೊರಡಿಸಿದರು. ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆ, 1976ರ ಸೆಕ್ಷನ್ 112(C) ಅಡಿಯಲ್ಲಿ ಈ ಕ್ರಮ ಕೈಗೊಂಡಿದ್ದಾರೆ.
“ಪಾವತಿಸಿದ ಮೊತ್ತವನ್ನೂ ಕಡಿತಗೊಳಿಸಿ ನಿಖರ ಲೆಕ್ಕಹಾಕಲಾಗಿದೆ. ಅನಧಿಕೃತ ಕಟ್ಟಡದ ಬಗ್ಗೆ ಯಾವುದೇ ಪರವಾನಗಿಯಿಲ್ಲ. ಬಳಕೆ ಕೈಗಾರಿಕಾ ಪ್ರಕಾರವಾದರೂ, ವಾಣಿಜ್ಯ ವರ್ಗದಲ್ಲಿ ತೆರಿಗೆ ಪಾವತಿಸುತ್ತಿದ್ದರು” ಎಂದು ಆಯುಕ್ತೆ ಸ್ಪಷ್ಟಪಡಿಸಿದರು.

ಹಿನ್ನೆಲೆ:
2002ರ ಆಗಸ್ಟ್ನಲ್ಲಿ BEMCO ಕಂಪನಿಯಿಂದ ಜಮೀನು ಲೀಸ್ಗೆ
2003ರ ಡಿಸೆಂಬರ್ನಲ್ಲಿ ಕಟ್ಟಡ ಪರವಾನಗಿ – ಆದರೆ ನಿರ್ಮಾಣವಿಲ್ಲ
2004-05ರಿಂದಲೇ ಕಟ್ಟಡ ತೆರಿಗೆ ಪಾವತಿ
ಐಟಿ ದಾಖಲೆ, ವಿದ್ಯುತ್ ಸಂಪರ್ಕ, ಉಪಗ್ರಹ ಚಿತ್ರಗಳ ಪರಿಶೀಲನೆ
BCC ತನಿಖೆಯ ಬಳಿಕ ದಂಡ ಆದೇಶ
ಇನ್ನಷ್ಟು ಗಮನಾರ್ಹವಾದ ಅಂಶವೆಂದರೆ – ಕಂಪನಿಯು BCCಗೆ ತೆರಿಗೆ ಸ್ಥಾಯಿ ಸಮಿತಿಗೆ ಅಪೀಲ ಮಾಡಲು ಮೊದಲು ವಿಧಿಸಲಾದ ಮೊತ್ತದ ಶೇಕಡಾ 50ರಷ್ಟು ಠೇವಣಿ ಇಡಬೇಕಿದೆ.

ಆಯುಕ್ತರ ಕ್ರಮ ಮತ್ತು ಜವಾಬ್ದಾರಿ ನಿರ್ವಹಣೆಯ ಫಲವಾಗಿ, ಅನೇಕ ವರ್ಷಗಳಿಂದ ಉಳಿದಿದ್ದ ತೆರಿಗೆ ಹಕ್ಕನ್ನು BCC ಈಗ ವಸೂಲಿಸಲು ಮುಂದಾಗಿದೆ.