ಹೇಮರೆಡ್ಡಿ ಮಲ್ಲಮ್ಮ ಜಯಂತಿಗೆ ನಿರಾಕರಣೆ: ಅಧಿಕಾರಿಗಳ ವಿರುದ್ಧ ರೆಡ್ಡಿ ಸಮುದಾಯದಿಂದ ಧರಣಿ
ಬೆಳಗಾವಿ,
ಯರಗಟ್ಟಿ ಪಟ್ಟಣ ಪಂಚಾಯತಿಯಲ್ಲಿ ವೀರ ಮಹಿಳೆ ಹೇಮರೆಡ್ಡಿ ಮಲ್ಲಮ್ಮರ ಜಯಂತಿ ಆಚರಣೆಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿರಾಕರಣೆ ತೋರಿದ ಘಟನೆಗೆ ರೆಡ್ಡಿ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ ಪಟ್ಟಣ ಪಂಚಾಯತಿ ಕಚೇರಿ ಮುಂದೆ ಧರಣಿ ನಡೆಸಿದ ಸಮುದಾಯದವರು, ಅಧಿಕಾರಿಗಳ ನಿರ್ಲಕ್ಷ್ಯತೆಯನ್ನು ಖಂಡಿಸಿದರು.

ರಾಜ್ಯ ಸರ್ಕಾರ ಹೇಮರೆಡ್ಡಿ ಮಲ್ಲಮ್ಮ ಜಯಂತಿಗೆ ಅಧಿಕೃತ ಮಾನ್ಯತೆ ನೀಡಿದೆ. ಅಂಥ ಮಹಾನ್ ಮಹಿಳೆಯ ನೆನಪಿಗೆ ಸರಕಾರಿ ತಾಣದಲ್ಲೇ ಉತ್ಸವ ಆಚರಿಸಲು ನಿರಾಕರಿಸುವುದು ಅಪರಾಧ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಪಂಚಾಯತಿ ಅಧಿಕಾರಿಗಳಿಂದ ಸ್ಪಷ್ಟನೆ ಕೇಳಿದರೂ, ಯಾವುದೇ ಸಮರ್ಪಕ ಉತ್ತರ ಸಿಗುತ್ತಿಲ್ಲ.ಆದ್ದರಿಂದ ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಪ್ರತಿಭಟನಾಕಾರರು ಅಗ್ರಹಿಸಿದರು. ಈ ಬಗ್ಗೆ ಡಿಸಿಗೆ ಪತ್ರವನ್ನು ಅರ್ಪಿಸಿದ್ದಾರೆ
.

