ಕತ್ತಿ ಕೋಟೆಗೆ ಜಾರಕಿಹೊಳಿ-ಜೊಲ್ಲೆ ‘ಪಾಳಯ ಲಗ್ಗೆ’


ಹುಕ್ಕೇರಿ ವಿದ್ಯುತ್ ಸಹಕಾರ ಸಂಘದಲ್ಲಿ ರಾಜಕೀಯ ಭೂಕಂಪ

ವಿದ್ಯುತ್ ಸಂಘದಲ್ಲಿ ಮಿಂಚಿನ‌ ರಾಜಕೀಯ

ಬೆಳಗಾವಿ
ಬೆಳಗಾವಿ ಜಿಲ್ಲೆಯ ರಾಜಕೀಯ ಹಂಚಿಕೆಯಲ್ಲಿ ಮತ್ತೊಮ್ಮೆ ಕದನದ ಘಮಘಮ. ಡಿಸಿಸಿ ಬ್ಯಾಂಕ್‌ನಲ್ಲಿ ವಿಜಯದ ಬಾವುಟ ಹಾರಿಸಿದ ಜಾರಕಿಹೊಳಿ-ಜೋಲ್ಲೆ ಬಣ, ಈಗ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದತ್ತ ಕಣ್ಣೊತ್ತಿದೆ. ಈ ದಾಳಿ ಕೇವಲ ಸಹಕಾರ ಸಂಘದ ಚುನಾವಣೆ ಅಲ್ಲ; ಇದು ಕತ್ತಿ ಕುಟುಂಬದ ರಾಜಕೀಯ ಶಕ್ತಿಗೆ ನೇರ ಸವಾಲು.

ಡಿಸಿಸಿ ನಂತ್ರ ‘ಪ್ಲಾನ್-ಬಿ’
ಡಿಸಿಸಿ ಬ್ಯಾಂಕ್‌ನಲ್ಲಿ ರಮೇಶ ಕತ್ತಿಯ ಹಿಡಿತವನ್ನು ಉರುಳಿಸಿದ ನಂತರ, ಈಗ ಮತ್ತೊಂದು ಪ್ರಮುಖ ನಿಗಮ, ಹುಕ್ಕೇರಿ ವಿದ್ಯುತ್ ಸಹಕಾರ ಸಂಘ ಜಾರಕಿಹೊಳಿ-ಜೋಲ್ಲೆ ತಂತ್ರದ ಗುರಿಯಾಗಿರುವುದು ಖಚಿತ. ರಾಜಕೀಯ ವಲಯದ ಮೂಲಗಳ ಪ್ರಕಾರ, ಈ ಸಂಘದ ಅಧ್ಯಕ್ಷ ಸ್ಥಾನ ‘ಸ್ಟ್ರಾಟಜಿಕ್ ಟಾರ್ಗೆಟ್’ ಆಗಿದ್ದು, ಅಧ್ಯಕ್ಷ ಕಲಗೌಡ ಪಾಟೀಲ ವಿರುದ್ಧ 11 ನಿರ್ದೇಶಕರಿಂದ ಅವಿಶ್ವಾಸ ಮಂಡನೆ ಸಲ್ಲಿಸಿ, ತಾವು ಹಿಡಿತದಲ್ಲಿರುವ ಬಣದ ಸದಸ್ಯರಿಗೆ ಸ್ಥಾನ ಖಾಯಂ ಮಾಡಲು ತಂತ್ರ ಜಾರಿಯಲ್ಲಿದೆ.

ಕತ್ತಿ ಬಣದ ತಿರಸ್ಕಾರವೇ ‘ಮೈತ್ರಿಯ ಮೂಲ’?
ಡಿಸಿಸಿ ಚುನಾವಣೆ ವೇಳೆ ಸದುಪಯೋಗವಾಗದ ರಾಜಕೀಯ ಬುದ್ಧಿವಂತಿಕೆ, ರಮೇಶ ಕತ್ತಿಗೆ ಬೆಂಬಲಿಗಳನ್ನು ಕಳೆವಂತಾಗಿದೆ. ಅಲ್ಲದೇ, ತಮಗೆ ಸಂಬಂಧಪಟ್ಟ ನಿರ್ದೇಶಕರೊಂದಿಗೂ ಸಮಾಲೋಚನೆ ನಡೆಸದೆ ‘ಅಧ್ಯಕ್ಷಗಿರಿ’ ಉಳಿಸಿಕೊಂಡ ನಿರ್ಧಾರ, ಬಹುತೇಕ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು. ಈ ಅಸಮಾಧಾನವೇ, ಜಾರಕಿಹೊಳಿ-ಜೋಲ್ಲೆ ಮೈತ್ರಿಗೆ ಪೂರಕವಾಗಿದೆ.

ಸಹಕಾರ ಕ್ಷೇತ್ರದ ಅಂಗಳದಲ್ಲಿ ಇದೀಗ ರಾಜಕೀಯ ಶಿಫಾರಸ್ಸುಗಳ ನೆಲ ಕಸಿದಂತೆ ಹೋಗಿದೆ. ಜಾರಕಿಹೊಳಿ-ಜೋಲ್ಲೆ ಬಣಗಳು, ಕ್ಷೇತ್ರಮಟ್ಟದ ಸಮರ್ಥ ಕಾರ್ಯಕರ್ತರನ್ನು ಒತ್ತಿ ಹಿಡಿದು, ಮೌನದೊಳಗಿನ ಮೈತ್ರಿಯನ್ನು ಕ್ರಿಯಾತ್ಮಕವಾಗಿಸಲು ತಂತ್ರ ರೂಪಿಸಿದೆ,

ಈ ಕದನ ಹೋರಾಟಗಳು, ಸಹಕಾರ ಸಂಘಗಳ ಮಟ್ಟವಲ್ಲ; ಜಿಲ್ಲೆಯ ಮುಂದಿನ ಚುನಾವಣಾ ಸಮೀಕರಣಗಳಿಗೆ ಸೂಕ್ಷ್ಮವಾಗಿ ಸಿದ್ಧಗೊಳ್ಳುವ ರಾಜಕೀಯ ಷಡ್ಯಂತ್ರಗಳ ನಕ್ಷೆಯೇ ಇದಾಗಿದೆ. ಇಂದಿನ ಸಂಘದ ಚುನಾವಣೆಗಳಲ್ಲಿ ಜಯ ಸಾಧಿಸುವ ಬಣವೇ, ನಾಳೆಯ ವಿಧಾನಸಭಾ ಟಿಕೆಟ್ ಹಂಚಿಕೆಯಲ್ಲಿ ತಾಕತ್ತು ತೋರಿಸಬಹುದಾದುದರಿಂದ, ಈ ರಾಜಕೀಯ ವಿಗ್ರಹ ಎಲ್ಲ ಪಕ್ಷಗಳಿಗೆ ಉಪಚುನಾವಣೆಯ ತರಬೇತಿ ಕೇಂದ್ರವಾಯಿತು!


ಜಾರಕಿಹೊಳಿ-ಜೋಲ್ಲೆ ಬಣಗಳ ಒಗ್ಗಟ್ಟು, ಕತ್ತಿ ಪ್ರಭಾವದ ಮೇಲೆ ರಾಜಕೀಯ ಕತ್ತಿಗೆ ಮಸೆಯುತ್ತಿದೆಯಾ?
ಈ ಪ್ರಶ್ನೆಗೆ ಉತ್ತರ ನಾಳೆಯ ‘ಮತದಾನ ಯುದ್ಧಭೂಮಿ’ಯಲ್ಲಿ ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!