“ಆಪರೇಷನ್ ಸಿಂಧೂರ”: ಭಯೋತ್ಪಾದನೆ ವಿರುದ್ಧ ಭಾರತದ ಘರ್ಜನೆ – ಪ್ರಧಾನಿ ಮೋದಿ
ನವದೆಹಲಿ, ಮೇ 12:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ರಾತ್ರಿ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾಡಿದ ಮಹತ್ವದ ಭಾಷಣದಲ್ಲಿ, ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ “ಆಪರೇಷನ್ ಸಿಂಧೂರ” ಕಾರ್ಯಾಚರಣೆಯ ವಿವರಗಳನ್ನು ಬಹಿರಂಗಪಡಿಸಿದರು.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಹಿಂದೆ ತಿರುಗುವ ಮಾತೇ ಇಲ್ಲ ಎಂಬುದನ್ನು ಮೋದಿ ಸ್ಪಷ್ಟಪಡಿಸಿದರು.

ಭಾಷಣದ ಮುಖ್ಯಾಂಶಗಳು:
:ಪಹಲ್ಗಾಮ್ ದಾಳಿಗೆ ಪಾಕಿಸ್ತಾನ ಬೆಂಬಲಿತ ಉಗ್ರರು ಹೊಣೆದಾರರಾಗಿದ್ದು, ಭಾರತ ಅದಕ್ಕೆ ಶಕ್ತಿಯುತ ಪ್ರತಿಕ್ರಿಯೆ ನೀಡಿದೆ ಎಂದು ಮೋದಿ ಘೋಷಿಸಿದರು.
“ಆಪರೇಷನ್ ಸಿಂಧೂರ” ಯಶಸ್ವಿ:
ಭಾರತೀಯ ಸೇನೆ ನಡೆಸಿದ ಈ ಕಾರ್ಯಾಚರಣೆಯಲ್ಲಿ 100 ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಲಾಗಿದೆ. ಪಾಕ್ ಆಕ್ರಮಿತ ಪ್ರದೇಶದಲ್ಲಿಯ ಉಗ್ರ ನೆಲೆಗಳನ್ನು ನಾಶಪಡಿಸಲಾಗಿದೆ.
ಪಾಕಿಸ್ತಾನ ಉಗ್ರರಿಗೆ ಸೇನಾ ಗೌರವ ಸಲ್ಲಿಸುತ್ತಿರುವುದು, ಅದರ ನಿಜವಾದ ನಿಲುವನ್ನು ಜಗತ್ತಿಗೆ ತೋರಿಸುತ್ತಿದೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಶಾಂತಿ ಇಚ್ಛಿಸುವ ಭಾರತ, ಆದರೆ ಬಲವಂತದ ವಿರುದ್ಧ ಬಲದಿಂದ ಪ್ರತಿಸ್ಪಂದಿಸುವ ನಿಲುವನ್ನು ಮುಂದುವರಿಸುತ್ತದೆ ಎಂದು ಪ್ರಧಾನಿ ಹೇಳಿದರು.

ಮಾತುಕತೆಗೂ ಶರತ್ತುಗಳಿವೆ:
ಪಾಕಿಸ್ತಾನದೊಂದಿಗೆ ಮಾತುಕತೆ ನಡೆದರೆ ಅದು ಕೇವಲ ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ ಕುರಿತಾಗಿರಬೇಕು ಎಂದು ಮೋದಿ ಸ್ಪಷ್ಟಪಡಿಸಿದರು.
ಮಹಿಳಾ ಭದ್ರತೆಗೆ ಖಡಕ್ ಎಚ್ಚರಿಕೆ:
ಭಾರತೀಯ ಮಹಿಳೆಯರ ಮೇಲೆ ದಾಳಿ ಮಾಡಿದರೆ, ಅದರ ವಿರುದ್ಧವು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
ಇಲ್ಲಿಯವರೆಗೆ ತಾಳ್ಮೆಯ ಮಾರ್ಗದಲ್ಲಿ ನಡೆದು ಬಂದ ಭಾರತ, ಇನ್ನು ಮುಂದೆ ಭದ್ರತೆಗಾಗಿ ಬಲವಂತದ ವಿರುದ್ಧ ಬಲದಿಂದಲೇ ಪ್ರತಿಕ್ರಿಯೆ ನೀಡುತ್ತದೆ ಎಂಬ ಸಂದೇಶ ಪ್ರಧಾನಿಯವರ ಭಾಷಣದಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು.
ಇದೊಂದು ಹೊಸ ಭದ್ರತಾ ಅಧ್ಯಾಯದ ಆರಂಭವೆಂದೇ ದೇಶದ ರಾಜಕೀಯ ವಲಯಗಳು ಈ ಭಾಷಣವನ್ನು ವಿಶ್ಲೇಷಿಸುತ್ತಿವೆ.