
ಭಾರತದ ‘ಆಪರೇಶನ್ ಸಿಂಧೂರ’ ವಿಶ್ವದ ಮುಂದೆ: 7 ಸಂಸದರ ನಿಯೋಗ ರವಾನೆ”
ಭಾರತ ಸರ್ಕಾರವು ಪಹಲ್ಗಾಂಮ್ ಉಗ್ರದಾಳಿ ಮತ್ತು ನಂತರದ ‘ಆಪರೇಷನ್ ಸಿಂಧೂರ’ ಹಿನ್ನೆಲೆಯಲ್ಲಿ ವಿದೇಶಗಳಲ್ಲಿ ಭಾರತದ ನಿಲುವು ಸ್ಪಷ್ಟಪಡಿಸಲು 48 ಸದಸ್ಯರ ಬಹುಪಕ್ಷೀಯ ಸಂಸದೀಯ ನಿಯೋಗಗಳನ್ನು ರವಾನಿಸಲು ನಿರ್ಧರಿಸಿದೆ. ಈ ನಿಯೋಗಗಳು ಮೇ 22ರಿಂದ ಜೂನ್ 1ರವರೆಗೆ ಅಮೆರಿಕಾ, ಬ್ರಿಟನ್, ರಷ್ಯಾ, ಯುರೋಪಿಯನ್ ಯೂನಿಯನ್, ಜಪಾನ್, ದಕ್ಷಿಣ ಆಫ್ರಿಕಾ, ಕತಾರ್, ಯುಎಇ ಸೇರಿದಂತೆ ಪ್ರಮುಖ ದೇಶಗಳಿಗೆ ಭೇಟಿ ನೀಡಲಿವೆ. ಪ್ರತಿ ನಿಯೋಗವು 6 ಸದಸ್ಯರನ್ನು ಒಳಗೊಂಡಿದ್ದು, ಎಲ್ಲಾ ಪ್ರಮುಖ ರಾಜಕೀಯ ಪಕ್ಷಗಳ ಸಂಸದರು ಮತ್ತು ಹಿರಿಯ ರಾಜತಾಂತ್ರಿಕರನ್ನು ಒಳಗೊಂಡಿರುತ್ತಾರೆ….