ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು..!

ಆಂತರಿಕ ಹೊಂದಾಣಿಕೆ ಇಲ್ಲದ ಪೊಲೀಸರು.

ಮಂತ್ರಿಗಳ ಹೆಸರು ದುರ್ಬಳಕೆ.

ಮಂತ್ರಿಗಳ ಹೆಸರಿನಲ್ಲಿ ಅಧಿಕಾರ ದುರ್ಬಳಕೆ

ಬೆಳಗಾವಿಯನ್ನು ಪರಮೇಶ್ವರನೇ ಕಾಪಾಡಬೇಕು.

ಕಾನೂನು ಹಿಡಿತ ಕಳೆದುಕೊಂಡ ಖಾಕಿ ಆಡಳಿತ.

ಇಲ್ಲಿ ಆಕ್ಷನ್ ಇಲ್ಲವೇ ಇಲ್ಲ. ಬರೀ ನಾಟಕ.

ಬೆಳಗಾವಿ,

ನಗರದ ಭದ್ರತೆಗೆ ನೂತನ ಪೊಲೀಸ್ ಆಯುಕ್ತರ ಆಗಮನ ಹೊಸ ಆಶಾವಾದವನ್ನು ಮೂಡಿಸಿದರೂ, ಅವರ ಎದುರು ಸವಾಲುಗಳ ಪರ್ವತವೇ ನಿರ್ಮಾಣವಾಗಿದೆ. ಪೊಲೀಸ್ ಇಲಾಖೆಯೊಳಗಿನ ಸಹಕಾರದ ಅಭಾವ, ವ್ಯಾಪ್ತಿಯೊಳಗೇ ನಡೆಯುತ್ತಿರುವ ಅಕ್ರಮ ದಂಧೆಗಳ ಬೆನ್ನುತಟ್ಟಿ ನಿಂತಿರುವ ಕೆಲ ಅಧಿಕಾರಿಗಳ ನಿರ್ಲಕ್ಷ್ಯ – ಈ ಎಲ್ಲವು ಈಗಲೇ ಸಮರ್ಥ ನೇತೃತ್ವಕ್ಕಾಗಿ ಕಟು ಸವಾಲು ಎಸೆದಂತಾಗಿದೆ.

ಸಧ್ಯದ ಪರಿಸ್ಥಿತಿಯನ್ನು ಗಮನಿಸಿದರೆ ಕೆಲ ಠಾಣೆಯ ಅಧಿಕಾರಿಗಳು ಕೈಯ್ಯಲ್ಲಿ ಲಾಠಿ ಗಟ್ಟಿ ಹಿಡಿದು ಕೆಲಸ ಮಾಡುವ ಬದಲು ಮಂತ್ರಿಗಳ ಹೆಸರು ಹೇಳಿ ಕಾಲಹರಣ ಮಾಡುತ್ತಿರುವುದೇ ಹೆಚ್ಚು ಎನ್ನುವ ಹಾಗೆ ಕಾಣುತ್ತಿದೆ.

ಇವೆಲ್ಕವನ್ನು ನಿಯಂತ್ರಿಸಲು ಗೃಹ ಸಚಿವ ಪರಮೇಶ್ವರ ಅವರು ಬೆಳಗಾವಿಗೆ ಬಂದು ಸಂಬಂಧಿಸಿದವ ಬೆಂಡೆತ್ತುವ ಕೆಲಸ ಮಾಡುತ್ತಿಲ್ಲ. ಇನ್ನು ಬೆಂಗಳೂರು ಮಟ್ಟದ ಅಧಿಕಾರಿಗಳು ಬೆಳಗಾವಿ ಪೊಲೀಸ್ ವ್ಯವಸ್ಥೆ ಕಂಡು ಇತ್ತ ತಲೆ ಇಟ್ಟು ಮಲಗಿಕೊಳ್ಳುವುದನ್ನೇ ಬಿಟ್ಟಿದ್ದಾರೆ ಎನ್ನುವ ಮಾತಿದೆ.
ಹೀಗಾಗಿ ಇವೆಲ್ಲವುಗಳನ್ನು ನಿಯಂತ್ರಿಸಲು ಖುದ್ದು ಪರಮೇಶ್ವರನೇ ಬರಬೇಕಾದ ಅನಿವಾರ್ಯತೆ ಇದೆ.

ಹಿಂದೆ ಯಾವುದೇ ಘಟನೆ ನಡೆದರೂ ಎಲ್ಲ ಅಧಿಕಾರಿಗಳು ಸೇರಿ ಸಹಕಾರ ನೀಡುತ್ತಿದ್ದರು. ಆದರೆ ಈಗ ಇಲಾಖೆಯಲ್ಲಿ ರಾಜಕಾರಣದ ಆಟದ ರಣಭೂಮಿಯಾಗಿ ಮಾರ್ಪಟ್ಟಿದೆ. ಈತನ ಕೆಲಸ ಅದಕ್ಕೆ ಸಂಬಂಧವಿಲ್ಲ, ಅವನ ಕರ್ತವ್ಯ ಇದಲ್ಲ ಎನ್ನುವ ತಾಳಮೇಳದ ಕೊರತೆ ಸ್ಪಷ್ಟವಾಗಿದೆ.

ಹಲವು ಠಾಣೆ ವ್ಯಾಪ್ತಿಯಲ್ಲಿ ಜೂಜು ಅಡ್ಡೆಗಳು, ಪಡಿತರ ಅಕ್ಕಿಯ ಕಳ್ಳಸಾಗಾಟ, ಮಾದಕ ವಸ್ತು ಮಾರಾಟ, ಗ್ರಾಮೀಣ ಪ್ರದೇಶದ ರೆಸಾರ್ಟ್‌ಗಳಲ್ಲಿ ನಡೆಯುತ್ತಿರುವ ಅನೈತಿಕ ದಂಧೆಗಳು ಗೂಢಚರ್ಯೆಯ ಅಗತ್ಯವಿಲ್ಲದಷ್ಟು ಬೃಹತ್ ಪ್ರಮಾಣಕ್ಕೆ ತಲುಪಿವೆ. ಇವುಗಳಿಗೆ ನಿರ್ಬಂಧ ಹೇರುವ ಬದಲು, ಕೆಲ ಠಾಣಾಧಿಕಾರಿಗಳು ಮೌನದ ಆಶ್ರಯದಲ್ಲಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಪೊಲೀಸ್ ಇಲಾಖೆ ಒಳಗಿನ ನೈತಿಕ ಶಿಸ್ತಿಗೆ ಬಲ ನೀಡದಿದ್ದರೆ, ರಾಜ್ಯ ಮಟ್ಟದಲ್ಲಿ ಬೆಳಗಾವಿಯ ಭದ್ರತೆಗೆ ಮೋಚೆ ಬಿಡುವುದು ಅನಿವಾರ್ಯ ಎಂಬ ಎಚ್ಚರಿಕೆಯ ಧ್ವನಿ ಸಾಮಾಜಿಕ ವಲಯಗಳಿಂದ ಕೇಳಿಬರುತ್ತಿದೆ. ನೂತನ ಆಯುಕ್ತರು ಈ ಅಕ್ರಮ ದಂಧೆಗಳ ವಿರುದ್ಧ ಉಗ್ರ ಹೋರಾಟ ಆರಂಭಿಸಿ, ಪ್ರತಿಯೊಂದು ಅಕ್ರಮದ ಹಿಂದೆ ನಿಂತಿರುವ ಠಾಣಾಧಿಕಾರಿಯೇ ಮೊದಲು ಹೊಣೆದಾರ ಎನ್ನುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಹೆಚ್ಚುತ್ತಿದೆ.

” *ಇನ್ನು ತಾಳ್ಮೆಯಲ್ಲ, ಕ್ರಮವೇ ಉತ್ತರ!” ಎಂಬ ನಾಡಿನ ಧ್ವನಿಗೆ ಸ್ಪಂದಿಸಲು ಈ ಹೊಸ ನೇತೃತ್ವ ಸಜ್ಜಾಗಬೇಕಿದೆ .

*

+1

Leave a Reply

Your email address will not be published. Required fields are marked *

error: Content is protected !!