ಪಾಲಿಕೆಗೆ ಕ್ಲೀನ್ ಚಿಟ್- ಡಿಸಿಆರ್ ಇ ಪೊಲೀಸರ ವರದಿ
ಬೆಳಗಾವಿ.
ಕಳೆದ ಕೆಲ ದಿನಗಳಿಂದ ಇಬ್ಬರು ಗುತ್ತಿಗೆದಾರರ ನಡುವೆ ನಡೆದ ಲಾಪ್ ಟಾಪ್ ಖರೀದಿಯಲ್ಲಿ ದೊಡ್ಡ ಮಟ್ಟದ ಹಗರಣ ನಡೆದಿದೆ ಎನ್ನುವ ಆರೋಪಕ್ಕೆ ಈಗ ಡಿಸಿಆರ್ ಇ ಪಾಲಿಕೆಗೆ ಕ್ಲೀನ್ ಚಿಟ್ ನೀಡಿದೆ.
ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಲ್ಯಾಪಟಾಪ್ ಪೂರೈಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ಹಣದ ದುರ್ಬಳಕೆ, ಟೆಂಡರ್ ಷರತ್ತುಗಳ ಉಲ್ಲಂಘನೆ ಆಗಿದೆ ಎನ್ನುವ ದೂರು ಕೇಳಿ ಬಂದಿತ್ತು,

ಇದನ್ನು ಪಾಲಕೆ ಆಯುಕ್ತರೂ ಸಹ ಗಂಭೀರವಾಗಿ ಪರಿಗಣಿಸಿದ್ದರು, ಅಷ್ಟೇ ಅಲ್ಲ ಇಬ್ಬರು ಗುತ್ತಿಗೆದಾರರ ನಡುವಿನ ಅಂತರಿಕ ತಿಕ್ಕಾಟದಲ್ಲಿ ಪಾಲಿಕೆ ಮುಜುಗುರಕ್ಕೊಳಾದ ಪ್ರಸಂಗ ಬಂದೊದಗಿತ್ತು,

ಆದರೆ ಈಗ ಡಿಸಿಆರ್ ಇ ಯವರು ನಡೆಸಿದ ಸಮಗ್ರ ತನಿಖೆಯಲ್ಲಿ ಮಹಾನಗರ ಪಾಲಿಕೆಗೆ ಕ್ಲೀನ್ ಚಿಟ್ ನೀಡಿದ್ದಲ್ಲದೇ ಟೆಂಡರ್ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗಿಲ್ಲ ಎನ್ನುವುದನ್ನು ವರದಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಡಿಸ್ಟ್ರಿಕ್ಟ್ ಕ್ರೈಮ್ ರೆಕಾರ್ಇಡ ಇನ್ವೆಸ್ಟಿಗೇಶನ್ ವಿಭಾಗದ ಪೊಲೀಸರು ಸಲ್ಲಿಸಿದ ತನಿಖಾ ವರದಿಯು ದೂರುದಾರರು ಮಾಡಿದ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದ್ದಾರೆ. ಪೂರೈಕೆದಾರರು ಹಾಗೂ ಪಾಲಿಕೆ ಅಧಿಕಾರಿಗಳ ವಿರುದ್ಧ ಯಾವುದೇ ಅನಿಯಮಿತತೆ ಕಂಡುಬರಲಿಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಮೂಲ ದೂರು ಏನು ?
ಮುಚ್ಚಂಡಿ ಗ್ರಾಮದ ನಿವಾಸಿ ಲಕ್ಷ್ಮಣ ದಶರಥ್ ಹೊಲಕಾರ ಎಂಬುವವರು, ರಾಜೇಶ್ ಎಂಟಪ್ರರ್ೈಸಸ್ ಕಂಪನಿಯು ಎಂಟಿಆಯ್ ಎಚ್ಪಿ 13/ಆರ್3 ಮಾದರಿಯ ಲ್ಯಾಪ್ಟಾಪ್ಗಳನ್ನು ಫ್ರೀಡಾಸ್ (ಲೈಸೆನ್ಸ್ ಇಲ್ಲದ ಆಪರೇಟಿಂಗ್ ಸಿಸ್ಟಮ್) ಸಾಫ್ಟ್ವೇರ್ಗಳೊಂದಿಗೆ ಪೂರೈಕೆ ಮಾಡಿ, ಸುಮಾರು 20 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದರು.
ಈ ಪೂರೈಕೆಯಲ್ಲಿ ಎನ್ಐಸಿ ತಾಂತ್ರಿಕ ಸಿಬ್ಬಂದಿ ಹಾಗೂ ಪಾಲಿಕೆ ಅಧಿಕಾರಿಗಳೂ ಸೇರಿದ್ದಾರೆ ಎಂಬುದು ದೂರಿನ ಸಾರಾಂಶವಾಗಿತ್ತು.
ಟೆಂಡರ್ ಷರತ್ತುಗಳಲ್ಲಿ ಲೋಪವಿಲ್ಲ:
ಪಾಲಿಕೆಯ ವಕರ್್ ಆರ್ಡರ್ ಪ್ರಕಾರ, ಲ್ಯಾಪ್ಟಾಪ್ಗಳಲ್ಲಿ ವಿಂಡೋಸ್ 11 ಪ್ರೋ ಬ್ಯುಜಿನೆಸ್ ಆಪರೇಟಿಂಗ್ ಸಿಸ್ಟಮ್ ಇರುವಂತೆ ಷರತ್ತು ಉಲ್ಲೇಖಿಸಲಾಗಿದೆ. ಆದರೆ ಓಇಎಂ ಅಥವಾ ಫ್ಯಾಕ್ಟರಿ ಪ್ರೀಲೋಡೆಡ್ ಎಂಬ ಬಿಂದು ಇಲ್ಲ. ಹೀಗಾಗಿ ಎಚ್ಪಿ ಕಂಪನಿ ಸ್ಪಷ್ಟಪಡಿಸಿದಂತೆ ಎಂಟ್ರಿ ಲೆವಲ್ ಮಾದರಿಗಳಿಗೆ ಓಇಎಂ ಸಾಫ್ಟ್ವೇರ್ ನೀಡುವುದು ಸಾಮಾನ್ಯವಲ್ಲ.
ಎನ್ಐಸಿ ಅಧಿಕಾರಿಗಳು ತಾಂತ್ರಿಕ ಪರಿಶೀಲನೆ ನಡೆಸಿ, “ವಿಂಡೋಸ್ 11 ಪ್ರೋ ಡಿಜಿಟಲ್ ಲೈಸೆನ್ಸ್ ಸಹಿತ ಲ್ಯಾಪಟಾಪ್ಗಳು ಸರಿಯಾಗಿ ಇನ್ಸ್ಟಾಲ್ ಆಗಿವೆ” ಎಂಬ ವರದಿಯನ್ನು ನೀಡಿದ್ದಾರೆ. ಮೈಕ್ರೋಸಾಫ್ಟ್ ಕಂಪನಿಯು ಕೂಡ, “ಜಿನ್ಯೂಯಿನ್ ಸಾಫ್ಟ್ವೇರ್ ಕೀ ಬಳಸಲಾಗಿದೆ” ಎಂಬ ಅಧಿಕೃತ ದೃಢೀಕರಣವನ್ನು ಪಾಲಿಕೆಗೆ ನೀಡಿದೆ.
ಟೆಂಡರ್ ಪ್ರಕ್ರಿಯೆ ಪಾರದರ್ಶಕ:
ಒಟ್ಟು 9 ಕಂಪನಿಗಳು ಬಿಡ್ ಸಲ್ಲಿಸಿದ್ದು, ದಾಖಲೆಗಳ ಕೊರತೆಯಿಂದ 5ನ್ನು ನಿರಾಕರಿಸಲಾಗಿದೆ. ರಾಜೇಶ್ ಎಂಟಪ್ರರ್ೈಸಸ್ ಕಡಿಮೆ ದರದ (ಎಲ್1) ನೀಡಿದ ಪೂರೈಕೆದಾರನಾಗಿದ್ದು, ಎಚ್ಪಿ ರೈಸನ್ 5 ಮಾದರಿಯ ಲ್ಯಾಪಟಾಪ್ಗಳನ್ನು ನಿಧರ್ಿಷ್ಟ ಪ್ರಮಾಣದಂತೆ ಪೂರೈಸಿದೆ ಎಂದು ಸ್ಪಷ್ಪಪಡಿಸಲಾಗಿದೆ.
ವರದಿಯ ತೀರ್ಮಾನ
ದೂರುದಾರನ ಆರೋಪಗಳಿಗೆ ಯಾವುದೇ ದೃಢವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ. ಟೆಂಡರ್ ಹಾಗೂ ಪೂರೈಕೆ ಪ್ರಕ್ರಿಯೆ ನಿಯಮಾನುಸಾರ ನಡೆದಿದ್ದು, ಯಾವುದೇ ಅವ್ಯವಹಾರದ ಅಂಶ ಕಂಡುಬಂದಿಲ್ಲ. ಹೀಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸಲು ಶಿಫಾರಸು ಮಾಡಲಾಗಿದೆ” ಎಂದು ಡಿಸಿಆರ್ ಇ ಪೊಲೀಸ್ ಇನ್ಸ್ಪೆಕ್ಟರ್ ರಂಜಿತ್ ಗಿಲ್ ತಮ್ಮ ಅಂತಿಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.