ಅನಗೋಳ 4ನೇ ಅಂಡರ್ಬ್ರಿಡ್ಜ್ ಕಾಮಗಾರಿ ಆರಂಭ
ಸಾರ್ವಜನಿಕರಿಗೆ ಸಂಚಾರ ಮಾರ್ಗ ಬದಲಾವಣೆ ಸೂಚನೆ
ಬೆಳಗಾವಿ, ಜೂನ್ 18:
ಅನಗೋಳದಲ್ಲಿ ನಿರ್ಮಾಣವಾಗುತ್ತಿರುವ 4ನೇ ರೈಲ್ವೇ ಅಂಡರ್ಬ್ರಿಡ್ಜ್ ಕಾಮಗಾರಿ ಜೂನ್ 20ರಿಂದ ಆರಂಭಗೊಳ್ಳಲಿದ್ದು, ಸುಮಾರು ಒಂದು ವರ್ಷ ಕಾಲ (ಜೂನ್ 19, 2026ರವರೆಗೆ) ಈ ಕಾಮಗಾರಿ ಮುಂದುವರಿಯಲಿದೆ. ಕಾಮಗಾರಿ ಸಮಯದಲ್ಲಿ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಪರ್ಯಾಯ ಮಾರ್ಗಗಳನ್ನು ನಗರ ಪೊಲೀಸ್ ಆಯುಕ್ತರು ಪ್ರಕಟಿಸಿದ್ದಾರೆ.
ಪರ್ಯಾಯ ಸಂಚಾರ ಮಾರ್ಗಗಳು ಇಂತಿವೆ:
ಅನಗೋಳದಿಂದ ಬೆಮ್ಕೋ ಕಡೆಗೆ ಹೋಗುವ ಎಲ್ಲಾ ಮಾದರಿಯ ವಾಹನಗಳು –
ಅನಗೋಳ , ಡಿ.ವಿ.ಎಸ್. ಚೌಕ್ , ಹರಿಮಂದಿರ ರಸ್ತೆ , ಅನಗೋಳ ನಾಕಾ , 3ನೇ ರೈಲ್ವೇ ಗೇಟ್ ಓವರ್ಬ್ರಿಡ್ಜ್ → ಖಾನಾಪೂರ ರಸ್ತೆ ಮೂಲಕ ಸಂಚರಿಸಬೇಕು.

ಖಾನಾಪೂರ ಕಡೆಯಿಂದ ಅನಗೋಳ ಕಡೆಗೆ ಬರುವ ವಾಹನಗಳು –
ಬೆಮ್ಕೋ ಸರ್ಕಲ್ , 3ನೇ ರೈಲ್ವೇ ಗೇಟ್ ಓವರ್ಬ್ರಿಡ್ಜ್ , ಅನಗೋಳ ನಾಕಾ , ಹರಿಮಂದಿರ ರಸ್ತೆ ಮೂಲಕ ಅನಗೋಳ ಕಡೆಗೆ ಸಂಚರಿಸಬೇಕು.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಬೆಳಗಾವಿ ನಗರ ಪೊಲೀಸ್ ಆಯುಕ್ತರು, ಸಾರ್ವಜನಿಕರು ನಿಗದಿತ ಪರ್ಯಾಯ ಮಾರ್ಗಗಳನ್ನು ಬಳಸಬೇಕು . ಮತ್ತು ಈ ಯೋಜನೆಯ ಯಶಸ್ಸಿಗಾಗಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.