Headlines

ಪಾಲಿಕೆ ಮೇಲೆ ಸರ್ಕಾರದ ಭ್ರಹ್ಮಾಸ್ತ್ರ


ಬೆಳಗಾವಿ ಮಹಾನಗರ ಪಾಲಿಕೆ ವಿರುದ್ಧ ಸರ್ಕಾರದ ಭ್ರಹ್ಮಾಸ್ತ್ರ:

ಅಭಯ ಪಾಟೀಲ ಕಾನೂನು ಹೋರಾಟಕ್ಕೆ ಸಜ್ಜು

ಗುಬ್ಬಿ ಮೇಲೆ ಸರ್ಕಾರದ ಬ್ರಹ್ಮಾಸ್ತ್ರ.

ಎರಡು ಬಾರಿ ಸೂಪರ್ ಸೀಡ್ ಮಾಡುವ ವಿಫಲ ಯತ್ನ.

ರಾಜ್ಯಪಾಲರವರೆಗೆ ದೂರು ಕೊಂಡೊಯ್ದ ಶಾಸಕ ಅಭಯ ಪಾಟೀಲ.

ಬೆಳಗಾವಿ,
ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಅಸ್ಥಿರಗೊಳಿಸುವಲ್ಲಿ ವಿಫಲಗೊಡಿರುವ ಕಾಂಗ್ರೆಸ್ ಸರ್ಕಾರ ಈಗ ತನ್ನ ರಾಜಕೀಯ ತೆವಲಿಗಾಗಿ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಗೊಳಿಸಿದೆ .

ಪಾಲಿಕೆಯ ಬಿಜೆಪಿ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದ್ದು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

‘ತಿನಿಸು ಕಟ್ಟೆ’ ವಿವಾದವನ್ನು ಆಧಾರವಾಗಿಸಿಕೊಂಡು ಸರ್ಕಾರ ಬಿಜೆಪಿಯ ಮೇಯರ್ ಸೇರಿದಂತೆ ಮತ್ತೊಬ್ಬ ನಗರಸೇವಕರ ಸದಸ್ಯತ್ವವನ್ನು ರದ್ದುಗೊಳಿಸಿದೆ .
ಈ ಹಿಂದೆ ಕೂಡ ಯಾವುದೇ ತಪ್ಪಿಲ್ಲದ ಮಹಾನಗರ ಪಾಲಿಕೆಗೆ ಸೂಪರ್‌ಸೀಡ್ ನೋಟಿಸ್ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರವು ತನ್ನ ನೀಚ ಬುದ್ದಿಯನ್ನು ಪ್ರದರ್ಶಿಸಿತ್ತು.

ಆದರೆ, ಇದಕ್ಕೆ ಶಾಸಕ ಅಭಯ ಪಾಟೀಲ ಅವರು ಕಾನೂನು ಬದ್ಧವಾಗಿ ತಕ್ಕ ಉತ್ತರ ನೀಡಿ ಸರ್ಕಾರದ ತಂತ್ರಕ್ಕೆ ತಡೆಯುಂಟು ಮಾಡಿದ್ದರು.

ಇದು ನ್ಯಾಯದ ಹೆಸರಿನಲ್ಲಿ ರಾಜಕೀಯ ಪ್ರತಿಕಾರ”: ಅಭಯ ಪಾಟೀಲ

ಸರ್ಕಾರದ ಈ‌ ಕ್ರಮಕ್ಕೆ ಶಾಸಕ ಅಭಯ ಪಾಟೀಲ ಕಿಡಿಕಾರಿದ್ದಾರೆ.

“ರಾಜಕೀಯ ಹೆಸರಿನಲ್ಲಿ ನಡೆಯುತ್ತಿರುವ ಈ ದುಃಸ್ವಪ್ನಕ್ಕೆ ಅಂತ್ಯಕಾಲ ಸಮೀಪಿಸಿದೆ. ಸರ್ಕಾರ ನಿಯಮಗಳನ್ನು ಬಗ್ಗುಬಡಿದು ನಮ್ಮ ಪಾಲಿಕೆಯನ್ನು ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ನಾವು ಕಾನೂನು ಹೋರಾಟಕ್ಕೆ ಸಿದ್ಧರಾಗಿದ್ದೇವೆ. ಬೆಳಗಾವಿಯ ಜನರ ಮಾನವನ್ನು ಕಾಪಾಡುವ ಜವಾಬ್ದಾರಿ ನನ್ನದು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ..

ಕಾನೂನು ಹೋರಾಟಕ್ಕೆ ಸಿದ್ಧತೆ

ಅಭಯ ಪಾಟೀಲ ಈಗ ಹಿರಿಯ ಕಾನೂನು ತಜ್ಞರ ಸಲಹೆ ಪಡೆಯುತ್ತಿದ್ದಾರೆ. ಮೇಯರ್ ಹಾಗೂ ನಗರಸೇವಕರ ಸದಸ್ಯತ್ವ ರದ್ದುಪಡಿಸಿದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವರು ಸಂಪೂರ್ಣ ಸಿದ್ಧತೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಸರ್ಕಾರದ ನಿರ್ಧಾರ: ಜನಾದೇಶಕ್ಕೆ ಧಿಕ್ಕಾರ?

ರಾಜ್ಯದಲ್ಲಿ ಬಿಜೆಪಿ ಹಿಡಿತದಲ್ಲಿರುವ ಬಹುತೇಕ ಮಹಾನಗರ ಪಾಲಿಕೆಗಳನ್ನು ಉರುಳಿಸಲು ಕಾಂಗ್ರೆಸ್ ಸರ್ಕಾರ ಬಹಳ ಕಾಲದಿಂದಲೇ ಷಡ್ಯಂತ್ರ ಹೂಡಿದೆ ಎನ್ನುವುದು ರಾಜಕೀಯ ವಲಯದ ಅನೇಕ ಗಣ್ಯರ ಅಭಿಪ್ರಾಯ. ಬೆಳಗಾವಿಯ ಪಾಲಿಕೆಯ ಮೇಲೆ ಈ ಬಾರಿ ತೆಗೆದುಕೊಂಡ ನಿರ್ಧಾರವನ್ನು ಕೂಡ ಜನಪರ ಆಡಳಿತವನ್ನು ಕುಗ್ಗಿಸುವ ಪ್ರಯತ್ನವೆಂದು ಹೇಳಲಾಗುತ್ತದೆ

ಸರ್ಕಾರದ ಈ ಕ್ರಮದಿಂದ ಬೆಗಾವಿಯಲ್ಲಿ ರಾಜಕೀಯ ಮತ್ತಷ್ಟು ಕಹಿಯಾಗುತ್ತಿದೆ. ಶಾಸಕ ಅಭಯ ಪಾಟೀಲ ಅವರ ಮುಂದಿನ ಹೋರಾಟ ರಾಜಕೀಯ ಕ್ಷಿತಿಜದಲ್ಲಿ ದೊಡ್ಡ ಕ್ರಾಂತಿ ಮಾಡಲಿದೆ ಎಂಬುದು ಖಚಿತ. ಅವರ ಹೋರಾಟ ಸರ್ಕಾರದ ಈ ನಿರ್ಧಾರವನ್ನು ಹಿಂಪಡೆಯಿಸುವತ್ತ ಸಾಗುತ್ತದೆಯೋ ಅಥವಾ ಬೆಳಗಾವಿ ಪಾಲಿಕೆಯ ಹೊಸ ರಾಜಕೀಯ ಭಾಷ್ಯಕ್ಕೆ ನಾಂದಿ ಹಾಡುತ್ತದೆಯೋ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಬೇಕಾಗಿದೆ.

0

Leave a Reply

Your email address will not be published. Required fields are marked *

error: Content is protected !!