ಬೆಳಗಾವಿ ರಾಜಕೀಯ ದಂಗಲ್ನಲ್ಲಿ ಅಭಯ ಪಾಟೀಲ: ಸರ್ಕಾರದ ವಿರುದ್ಧ ಹೋರಾಟದ ಹೀರೋ
ಮಂಗೇಶ್ ಪವಾರ್, ಜಯಂತ ಜಾಧವ ಸದಸ್ಯತ್ವ ರದ್ದತಿ ಅಂತಿಮ ತೀರ್ಪು ನಿರೀಕ್ಷೆಯಲ್ಲಿ ಬೆಳಗಾವಿ
ಶಕ್ತಿಶಾಲಿ ಸರ್ಕಾರದ ಎದುರು ನ್ಯಾಯಮಂದಿರ ಮೆಟ್ಟಿಲು ಹತ್ತಿದ ಶಾಸಕ ಅಭಯ
ಪ್ರಜಾಪ್ರಭುತ್ವದ ಗೌರವ ಉಳಿಸಲು ನ್ಯಾಯಪಥದಲ್ಲಿ ಪಾಟೀಲರು ಎದ್ದು ನಿಂತ ಕ್ಷಣ
ಬೆಳಗಾವಿಯ ರಾಜಕೀಯ ದಿಕ್ಕು ಬದಲಾಯಿಸಬಹುದಾದ ನಿರ್ಧಾರಕ ತೀರ್ಪು ಇಂದು
ಸರ್ಕಾರಿ ಒತ್ತಡಕ್ಕೆ ತಲೆಬಗ್ಗದೆ ನ್ಯಾಯಕ್ಕಾಗಿ ದಿಟ್ಟ ಹೋರಾಟ ನಡೆಸಿದ ಪಾಟೀಲರು
ಬೆಳಗಾವಿ
ಬೆಳಗಾವಿ ರಾಜಕೀಯಕ್ಕೆ ಮತ್ತೊಮ್ಮೆ ಚೈತನ್ಯ ನೀಡಿರುವ ಗಂಭೀರ ಪ್ರಕರಣ ಇಂದು ಬೆಂಗಳೂರು ಹೈಕೋರ್ಟ್ನಲ್ಲಿ ಅಂತಿಮ ಹಂತಕ್ಕೆ ದಾವಿಸಿದೆ.
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂಗೇಶ್ ಪವಾರ್ ಹಾಗೂ ನಗರಸೇವಕ ಜಯಂತ ಜಾಧವ ಅವರ ಸದಸ್ಯತ್ವ ರದ್ದತಿ ವಿಚಾರದಲ್ಲಿ ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬ ನಿರೀಕ್ಷೆಯಲ್ಲಿ ಜಿಲ್ಲೆಯ ರಾಜಕೀಯ ವಲಯ ಉಸಿರುಗಟ್ಟಿ ಕುಳಿತಿದೆ.

ಈ ಪ್ರಕರಣವು ಯಾವುದೇ ಸಾಮಾನ್ಯ ಸದಸ್ಯತ್ವ ಸಮಸ್ಯೆಯಲ್ಲ. ಇದು, ಶಾಸಕ ಅಭಯ ಪಾಟೀಲ ಎನ್ನುವ ಹೆಸರನ್ನು ಬೆಳಗಾವಿಯ ರಾಜಕೀಯ ಹೋರಾಟದ ಹೀರೋ ಎನ್ನುತ್ತಿರುವ ವೃತ್ತಿಪರರು, ವಿಶ್ಲೇಷಕರ ಕಣ್ಣುಗಳನ್ನು ಸೆಳೆಯುವಂತೆ ಮಾಡಿದೆ.
ಒಂದು ಕಡೆ ಶಕ್ತಿಶಾಲಿ ರಾಜ್ಯ ಸರ್ಕಾರ, ಮತ್ತೊಂದು ಕಡೆ ಸರ್ಕಾರಿ ಕ್ರಮಗಳ ವಿರುದ್ಧ ಸೌಮ್ಯತೆಯನ್ನೇ ಅಸ್ತ್ರವಾಗಿಸಿಕೊಂಡು ಕಾನೂನಿನ ಹಾದಿ ಹಿಡಿದಿರುವ ಅಭಯ ಪಾಟೀಲ — ಇವರು ಈ ಪ್ರಕರಣದಲ್ಲಿ ಈಗ ಜನಮನ್ನಣೆ ಗಳಿಸುತ್ತಿದ್ದಾರೆ.

ಅಭಯರ ‘ಭಯ’ ವಿಲ್ಲದ ದಿಟ್ಟ ಧ್ವನಿ
ಅಭಯ ಪಾಟೀಲ ಈ ಪ್ರಕರಣದಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ಬೆಳಗಾವಿ ಮೇಯರ್ ಮತ್ತು ನಗರಸೇವಕರ ಸದಸ್ಯತ್ವದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳಿಗೆ ಎದುರಾಗಿ ನ್ಯಾಯಾಂಗ ದಾರಿ ಹಿಡಿದು ನ್ಯಾಯಮಂದಿರದ ಮೆಟ್ಟಿಲು ಹತ್ತಿದ್ದಾರೆ.
ಈ ಹೋರಾಟವು ಕೇವಲ ಇಬ್ಬರು ಸದಸ್ಯರ ಸ್ಥಾನವನ್ನು ಉಳಿಸುವ ನಿಟ್ಟಿನಲ್ಲಿ ಅಲ್ಲ, ಬೆಳಗಾವಿ ಜನಪ್ರಾತಿನಿಧ್ಯ ವ್ಯವಸ್ಥೆಯ ಗೌರವವನ್ನು ಉಳಿಸುವ ಹೋರಾಟವಾಗಿದೆ ಎಂಬಂತಾಗಿದೆ.
“ಈ ರದ್ದತಿ ಕ್ರಮ ಜನತೆಗೆ ತೀವ್ರ ಅನ್ಯಾಯವಾಗಿದೆ, ಪ್ರಜಾಪ್ರಭುತ್ವಕ್ಕೆ ಕೆಡಕು ತರುವಂತದ್ದು” ಎಂಬ ಮಾತುಗಳು ಪಾಟೀಲರ ಹೋರಾಟದ ಸ್ಪಷ್ಟ ಸಂದೇಶವಾಗಿದೆ.

ರಾಜ್ಯ ಸರ್ಕಾರದ ಶಕ್ತಿಯ ಎದುರು ನಿಂತು ಹೋರಾಡುವುದು ಯಾವುದೇ ಸಾಮಾನ್ಯ ಶಾಸಕನಿಗೆ ಸುಲಭದ ವಿಷಯವಲ್ಲ. ಸರ್ಕಾರದ ಪ್ರಭಾವ, ಸುತ್ತಲಿನ ರಾಜಕೀಯ ಒತ್ತಡ, ಅಧಿಕಾರ — ಈ ಎಲ್ಲಕ್ಕೂ ಬೆದರದಿರುವುದು ಅಭಯ ಪಾಟೀಲರ ವಿಶೇಷತೆ.

ಪಾಟೀಲರು ಈ ಹೋರಾಟದಲ್ಲಿ ತಮ್ಮ ರಾಜಧರ್ಮ ನೈತಿಕ ಬದ್ಧತೆಯನ್ನು ಮೆರೆಯುತ್ತಿದ್ದಾರೆ ಎನ್ನಬಹುದು.
ಇಂದು ವಮಬರುವ ಹೈಕೋರ್ಟ್ ತೀರ್ಪು ಬೆಳಗಾವಿ ರಾಜಕೀಯದ ದಿಕ್ಕು ನಿರ್ಧರಿಸಲಿದೆ
ಇಂದು ನಡೆಯಲಿರುವ ಅಂತಿಮ ವಿಚಾರಣೆ ಬೆಳಗಾವಿ ಮಹಾನಗರ ಪಾಲಿಕೆ ಭವಿಷ್ಯಕ್ಕೆ ಮಾತ್ರವಲ್ಲ, ಜಿಲ್ಲೆಯ ಪ್ರಾದೇಶಿಕ ರಾಜಕೀಯ ಸಮೀಕರಣಗಳಿಗೆ ತೀರ್ಮಾನಾತ್ಮಕವಾಗಿದೆ. ತೀರ್ಪು ಯಾವ ದಿಕ್ಕು ತಾಳುತ್ತದೆ ಎನ್ನುವುದು ಕುತೂಹಲದ ವಿಷಯ. ಆದರೆ ಅಭಯ ಪಾಟೀಲ ಇಷ್ಟು ದೂರ ಹೋರಾಟ ನಡೆಸಿದ್ದು ವಿಶೇಷ ಎನ್ನಬಹುದು.

ಈ ಪ್ರಕರಣ ನಮ್ಮ ರಾಜ್ಯದ ಪ್ರಜಾಪ್ರಭುತ್ವದ ಶಕ್ತಿ ಪರೀಕ್ಷಿಸುವ ಸಂದರ್ಭ. ಶಾಸಕರು, ತಮ್ಮ ಕ್ಷೇತ್ರದ, ತಮ್ಮ ನಗರದ ಗೌರವ ಉಳಿಸಿಕೊಳ್ಳಲು ಯಾವ ಮಟ್ಟದ ಹೋರಾಟ ನಡೆಸಬೇಕು ಎಂಬುದಕ್ಕೆ ಅಭಯ ಪಾಟೀಲ ಉತ್ತಮ ಮಾದರಿ. ರಾಜ್ಯದ ರಾಜಕೀಯದಲ್ಲಿ ಇಂತಹ ಧೈರ್ಯದ ಧ್ವನಿಗಳು ಹೆಚ್ಚು ಬೆಳೆಬೇಕು ಎಂಬುದು ಈ ಪ್ರಕರಣ ಪಾಠ.
ಇಂದಿನ ತೀರ್ಪು ಬಳಿಕ ಬೆಳಗಾವಿಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಅಭಯ ಪಾಟೀಲ ಹೀರೋ ಆಗಿ ಹೊರಹೊಮ್ಮಿದ ಈ ಹೋರಾಟ ಜನಸ್ಮೃತಿಯಲ್ಲಿ ಉಳಿಯುವುದರಲ್ಲಿ ಸಂಶಯವಿಲ್ಲ.