ಬೆಳಗಾವಿ.
ಉದ್ಯೋಗ ಇಲ್ಲದ ವ್ಯಕ್ತಿ ಎನು ಉಸಾಬರಿ ಮಾಡಬಹುದು ಎನ್ನುವುದಕ್ಕೆ ಬೆಳಗಾವಿಯ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿಯ ಸ್ವಯಂ ಘೋಷಿತ ನಾಯಕರೇ ಸಾಕ್ಷಿ.! ರಾಜ್ಯ ಸರ್ಕಾರದ ಸುತ್ತೋಲೆ ಹಿನ್ನೆಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ತನ್ನ ವಾಹನಗಳ ಮೇಲೆ ಕನ್ನಡದ ಅಂಕಿಗಳ ಮೇಲೆ ನಂಬರ ಫಲಕಗಳನ್ನು ಅಳವಡಿಸಿದೆ.

ಅಷ್ಟೇ ಅಲ್ಲ ಬೆಳಗಾವಿಯ ವಾಣಿಜ್ಯ ಮಳಿಗೆಗಳ ಫಲಕದಲ್ಲಿ ಶೇ. 60 ರಷ್ಟು ಕನ್ನಡ ಇರದಿದ್ದರೆ ಟ್ರೇಡ್ ಲೈಸನ್ಸ್ ಕೊಡಲ್ಲ ಎನ್ನುವ ತೀರ್ಮಾನ ಮಾಡಲಾಗಿತ್ತು ಈ ಸರ್ಕಾರದ ಆದೇಶವನ್ನು ಅಕ್ಷರಶ; ಪಾಲಿಸಿದ ಪಾಲಿಕೆಯು ಮೇಯರ್ , ಉಪಮೇಯರ್ ಸೇರಿದಂತೆ ಬಹುತೇಕ ವಾಹನಗಳ ಫಲಕವನ್ನು ಕನ್ನಡದಲ್ಲಿ ಬರೆಯಿಸಿತು. ಆದರೆ ಇದನ್ನು ಗಮನಿಸಿ ಹೊಟ್ಟೆ ಉರಿಸಿಕೊಂಡ ಎಂಇಎಸ್ ಭಂಡರು ಈ ಕನ್ನಡ ಕಡ್ಡಾಯ ವಿರುದ್ಧ ಮೇಯರ್ ಗೆ ಪತ್ರವನ್ನು ನೀಡಿದ್ದಾರೆ.

ಆದರೆ ಈಗ ಮೇಯರ ಯಾವ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಒಂದು ವೇಳೆ ನಾಡದ್ರೋಹಿ ಗಳ ಮಾತಿಗೆ ಮಣಿದು ಕನ್ನಡ ಅಂಕಿ ಜೊತೆಗೆ ಮರಾಠಿ ಹಾಕಿದರೆ ಮತ್ತೇ ಭಾಷಾ ವಿವಾದದ ಕಿಚ್ಚು ಎಲ್ಲೆಡೆ ಹಬ್ಬುವುದರಲ್ಲಿ ಎರಡು ಮಾತಿಲ್ಲ