Headlines

ಕನ್ನಡ ನಾಮಫಲಕ- ಮೇಯರಗೆ ಅಭಿನಂದನೆ

ಕಿತ್ತೂರು ಕರ್ನಾಟಕ ಸೇನೆ ಆಗ್ರಹ

ಕನ್ನಡ ಫಲಕ ಅಳವಡಿಸಿದ್ದ ಮೇಯರ, ಉಪಮೇಯರ್ಗೆ ಅಭಿನಂದನೆ.


ಕನ್ನಡ ಅನುಷ್ಠಾನದಿಂದ ಹಿಂದೆ ಸರಿಯಬೇಡಿ.

ವಾಹನ ಮೇಲಿದ್ದ ಕನ್ನಡ ಫಲಕ ತೆರವುಗೊಳಿಸಬೇಡಿ.

ಡಿಸಿ, ಪೊಲೀಸ್, ಪಾಲಿಕೆ ಆಯುಕ್ತರಿಗೆ ಮನವಿ ಪತ್ರ ಅರ್ಪಣೆ
ಕನ್ನಡಕ್ಕೆ ಧಕ್ಕೆಯಾದರೆ ಸಹಿಸಲ್ಲ.

ಬೆಳಗಾವಿ.
ಗಡಿನಾಡ ಬೆಳಗಾವಿಯಲ್ಲಿ ಮತ್ತೇ ಎಂಇಎಸ್ ಪುಂಡಾಟಿಕೆಗೆ ಬ್ರೆಕ್ ಹಾಕುವ ನಿಟ್ಟಿನಲ್ಲಿ ಕಿತ್ತೂರು ಕರ್ನಾಟಕ ದಿಟ್ಟ ಹೆಜ್ಜೆಯನ್ನು ಮುಂದಿಟ್ಟಿದೆ.
ಸಂಘಟನೆ ಮುಖಂಡ ಮಹಾದೇವ ತಳವಾರ ನೇತೃತ್ವದಲ್ಲಿ ಈ ಕುರಿತಂತೆ ಜಿಲ್ಲಾಧಿಕಾರಿಗಳು, ಮಹಾನಗರ ಪಾಲಿಕೆ ಆಯುಕ್ತರು, ಪೊಲೀಸ್ ಆಯುಕ್ತರು ಸೇರಿದಂತೆ ಮೇಯರ್, ಉಪಮೇಯರ್ ಗೆ ಮನವಿ ಪತ್ರವನ್ನು ಅರ್ಪಿಸಲಾಗಿದ.

ಮಹಾನಗರ ಪಾಲಿಕೆಯನ್ನು ಕನ್ನಡ ಅನುಷ್ಠಾನ ಸರಿಯಾಗಿ ಉತ್ತಮವಾಗಿ ನಡೆದಿದೆ, ಮೇಯರ್, ಉಪಮೇಯರ್ ಅವರು ಬಳಸುವ ಪಾಲಿಕೆಯ ವಾಹನದ ಮೇಲೆ ಸಂಪೂರ್ಣ ಕನ್ನಡ ನಂಬರ ಪ್ಲೇಟನ್ನು ಅಳವಡಿಸಲಾಗಿದೆ. ಇದು ಹೆಮ್ಮೆಯ ಸಂಗತಿ ಎಂದು ಸಂಘಟನೆ ಮುಖಂಡ ಮಹಾದೇವ ತಳವಾರ ಅವರು ಹೇಳಿ ಅವರನ್ನು ಅಭಿನಂದಿಸಿದರು.

2022ರ ಸರ್ಕಾರದ ಸುತ್ತೋಲೆ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಸೇರಿದಂತೆ ಜಿಲ್ಲೆಯ ವಿವಿಧ ಸಕರ್ಾರಿ ಕಚೇರಿಗಳಲ್ಲಿ ಕನ್ನಡ ಕಡ್ಡಾಯವಾಗಿ ಜಾರಿಗೊಳಿಸಲಾಗುತ್ತಿದೆ. ಆದರೆ ಗಡಿನಾಡಲ್ಲಿ ಎಂಇಎಸ್ ಅದಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ ಎಂದರು.

ಇತ್ತೀಚೆಗೆ ಮೇಯರ್ ಮಂಗೇಶ್ ಪವಾರ್ ಮತ್ತು ಉಪಮೇಯರ್ ವಾಣಿ ಜೋಶಿ ಅವರ ವಾಹನದ ಮೇಲೆ ಕನ್ನಡ ಅಂಕಿ ಬೋರ್ಡ ಅಳವಡಿಸಲಾಗಿದೆ ಎಂಬ ಕಾರಣಕ್ಕೆ, ಎಂಇಎಸ್ ಸದಸ್ಯರು ನಿನ್ನೆ ನೇರವಾಗಿ ಅವರನ್ನು ಭೇಟಿ ಮಾಡಿ ಕನ್ನಡ ಕಡ್ಡಾಯ ಅನುಷ್ಠಾನ ಹಿಂಪಡೆಯಲು ಒತ್ತಾಯ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಕಿತ್ತೂರು ಕರ್ನಾಟಕ ಸೇನೆಯ ಪದಾಧಿಕಾರಿಗಳು, ಕನ್ನಡವೇ ನಮ್ಮ ನಾಡು, ನುಡಿ. ಅದನ್ನು ಹಿಂಪಡೆಯಲು ಯಾರಿಗೂ ಅವಕಾಶವಿಲ್ಲ” ಎಂದು ಎಚ್ಚರಿಸಿದ್ದಾರೆ.


ದೇವೇಂದ್ರ ತಳವಾರ, ಸಂತೋಷ ತಳ್ಳಿಮಣಿ, ಮಾರುತಿ ದೊಡ್ಡ ಲಕ್ಕಪ್ಪಗೋಳ, ಭರಮಣ್ಣ ಕಾಂಬಳೆ, ವಾಸು ಬಸನಾಯ್ಕರ್, ಸಿದ್ರಾಯ ನಾಯಿಕ ಹಾಗೂ ಇತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!