ಕುರಾನ ಸುಟ್ಟ ಪ್ರಕರಣ- ನ್ಯಾಯ ಎಲ್ಲಿದೆ?


E belagavi special

ಅನುಮಾನ ಕಾಡುತ್ತಿದೆ: ತನಿಖೆ ನಿಜಕ್ಕೂ ನಡೆಯುತ್ತಿದೆಯೇ?”

ಪವಿತ್ರ ಗ್ರಂಥದ ಅವಮಾನ: ಸಮುದಾಯಕ್ಕೆ ನ್ಯಾಯ ಸಿಗದ ಹಾದಿ?”

ಸಿಐಡಿ ತನಿಖೆ ಮುಗಿದಂಗಾಯಿತು? ಮುಂದೇನು?

ಬೆಳಗಾವಿ

ರಾಜ್ಯವನ್ನು ಕದಡಿದ ಸಂತಿ ಬಸ್ತವಾಡದ ಕುರಾನ್ ದಹನ ಪ್ರಕರಣ, ತನಿಖೆಯು ಅಂಧಕಾರದಲ್ಲಿ ಹಾಳುಬಿದ್ದಿದೆ. ಮೊದಲು ಬೆಳಗಾವಿ ನಗರ ಪೊಲೀಸರು, ನಂತರ ಸಿಐಡಿ ತನಿಖೆ..ಎಲ್ಲವೂ **ಆರೋಪಿಗಳನ್ನು ಪತ್ತೆ ಮಾಡುವಲ್ಲಿ ವಿಫಲವಾಗಿವೆ.
ಮೂರು ದಿನಗಳ ತೀವ್ರ ತನಿಖೆಯ ನಂತರವೂ ಸಿಐಡಿ ಅಧಿಕಾರಿಗಳಿಗೆ “ಪ್ರಕರಣದ ತಳಬುಡವೇ ಕಾಣದಿರುವುದು” ವಿಶೇಷ .

ಘಟನೆಯ ಹಿನ್ನೆಲೆ:
ನಿರ್ಮಾಣ ಹಂತದಲ್ಲಿದ್ದ ಪ್ರಾರ್ಥನಾ ಮಂದಿರದಲ್ಲಿ ಪವಿತ್ರ ಕುರಾನ್ ಭಸ್ಮವಾದ ದಿನ, ಬೆಳಗಾವಿ ಸಿಡಿದುಬಿದ್ದಿತು. ಸಿಸಿಸಿಟಿವಿ ಇಲ್ಲದ ಆ ಘಳಿಗೆ, ಸಮುದಾಯದ ಭಾವನೆ ಕೆರಳಿಸಿತು. ತಕ್ಷಣವೇ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಸೇರಿದ ಮುಸ್ಲಿಂ ಸಮುದಾಯದ ಪ್ರತಿಭಟನೆ, ಉದ್ವಿಗ್ನತೆಯ ಅಂಗಾರವಾಯಿತು.

ಶಾಸಕ ಆಸೀಫ್ ಶೇಠರ ನೇತೃತ್ವದಲ್ಲಿ ಬಂದ ಜನಸಮೂಹ, “ನ್ಯಾಯ ಬೇಕು” ಎಂಬ ಕೂಗು ಮುಗಿಲು‌ ಮುಟ್ಟುವಂತೆ ಮಾಡಿತ್ತು.

  • ಮಾತು‌ ತಪ್ಪಿದ ಪೊಲೀಸರ:
    ನಗರ ಪೊಲೀಸ್ ಆಯುಕ್ತ ಇಡಾ ಮಾಟರ್ನ್‌ನವರ “3 ದಿನಗಳಲ್ಲಿ ಅಪರಾಧಿಗಳನ್ನು ಬಂಧಿಸುತ್ತೇವೆ” ಎಂಬ ಭರವಸೆಯು ಪ್ರತಿಭಟನೆಯನ್ನು ಸ್ಥಗಿತಗೊಳಿಸಿತು. ಆದರೆ **ವಾಗ್ದಾನ ಭಂಗವಾದಾಗ, ಸಮುದಾಯ ಮತ್ತೆ ಬೀದಿಗಿಳಿಯಿತು. ಈ ಸಲ ಪೊಲೀಸರು 7 ದಿನಗಳ ಅವಕಾಶ” ಕೇಳಿದರು. ಇದರ ನಡುವೆ, ತನಿಖೆಯಲ್ಲಿ ನಿರ್ಲಕ್ಷ ತೋರಿದ ಆರೋಪದ ಮೇಲೆ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಅಮಾನತ್ತು ಮಾಡಲಾಯಿತು. ಅದಕ್ಕೆ ಹಿಂದೂ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ಷೇಪ ವ್ಯಕ್ತಪಡಿಸಿದವು.

*ಸಿಐಡಿ ವಿಫಲತೆ:?
ಪ್ರಕರಣವನ್ನು ಸಿಐಡಿಗೆ ವಹಿಸಿದಾಗ, “ಸತ್ಯ ಬೆಳಕಿಗೆ ಬರಲಿದೆ” ಎಂಬ ನಿರೀಕ್ಷೆ ಇತ್ತು. ಆದರೆ ಮೂರು ದಿನಗಳ ತೀವ್ರ ವಿಚಾರಣೆಯ ನಂತರವೂ:

  • ಯಾವುದೇ ನಿರ್ಣಾಯಕ ಸುಳಿವು ಸಿಗಲಿಲ್ಲ.
  • ಸಾಕಷ್ಟು ಸಾಕ್ಷಿಗಳನ್ನು ಕೇಳಿದರೂ, ಘಟನೆಯ ಹಿಂದಿನ ಕೈ ಗುರುತಿಸಲಾಗಿಲ್ಲ.
  • “ಸಿಐಡಿಯೂ ಕೈತೊಳೆದುಕೊಂಡಿದೆಯೇ?” ಎಂಬ ಪ್ರಶ್ನೆ ಕೇಳಿ ಬರಲಾರಂಭಿಸಿದೆ ಸಮುದಾಯದ ನೋವು
    ಮೇಲ್ನೋಟಕ್ಕೆ ಶಾಂತವಿರುವ ಬೆಳಗಾವಿ, ಆಂತರಿಕವಾಗಿ ಅಸಮಾಧಾನದ ಕಿಚ್ಚನ್ನು ಹೊತ್ತಿಸುತ್ತಿದೆ. ಧಾರ್ಮಿಕ ಗೌರವಕ್ಕೆ ದಕ್ಕೆ ತಂದ ಈ ಘಟನೆ, ಸಾಮಾಜಿಕ ಏಕತೆಯ ಬುನಾದಿಗೆ ಪೆಟ್ಟು ಎಂಬ ಕಹಿ ಪ್ರಶ್ನೆಗಳು ಜನಮನದಲ್ಲಿ ಸುಳಿಯುತ್ತಿವೆ:

Leave a Reply

Your email address will not be published. Required fields are marked *

error: Content is protected !!