ಬೆಳಗಾವಿಗೆ ಗ್ರೀನ್ ಶಕ್ತಿ !


ಸಚಿವರು ಹರಡಿದ ಹಸಿರು ಬೆಳಕು – ಬೆಳಗಾವಿ ಬೆಳೆಯುತ್ತಿದೆ.!
ಬೆಳಗಾವಿಯ ಹಳ್ಳಿಗಳಿಗೆ ಶಕ್ತಿಯ ಹೊಸ ದಿಕ್ಕು ತೋರಿಸುತ್ತಿರುವ ಈ ಯೋಜನೆ, ಗ್ರಾಮೀಣ ಕರ್ನಾಟಕದ ಸಹಜ ಶಕ್ತಿ ಬಳಕೆಯ ಮಾದರಿಯಾಗಿದೆ. ಸತೀಶ ಜಾರಕಿಹೊಳಿ ಅವರ ಸರಳವಾದ, ಶ್ರಮಪೂರ್ಣ ನಾಯಕತ್ವ ಈ ಅಭಿವೃದ್ಧಿಗೆ ಹಿರಿಮೆಯನ್ನು ತಂದಿದೆ.

ಸಚಿವ ಸತೀಶ ಜಾರಕಿಹೊಳಿ ಮುನ್ನಡೆಸಿದ ಹಸಿರು ಕ್ರಾಂತಿ – ಎಂಟು ಹಳ್ಳಿಗಳಿಗೆ 110 ಕೆವಿ ಉಪಕೇಂದ್ರ

ಬೆಳಗಾವಿ:
ಗ್ರಾಮೀಣ ಬೆಳವಣಿಗೆಯ ನಿಜವಾದ ನಾಯಕತ್ವವೇನು ಎಂಬುದನ್ನು ರಾಜ್ಯ ಲೋಕೋಪಯೋಗಿ ಸಚಿವ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಗ್ರೀನ್ ಫೀಲ್ಡ್ ಯೋಜನೆಯಡಿಯಲ್ಲಿ ಜಿಲ್ಲೆಯ ಎಂಟು ಹಳ್ಳಿಗಳಿಗೆ 110 ಕೆವಿ ಸಾಮರ್ಥ್ಯದ ಹೊಸ ವಿದ್ಯುತ್ ಉಪಕೇಂದ್ರಗಳ ಸ್ಥಾಪನೆಗೆ ಮುಂದಾಗಿ, ಅಸಾಂಪ್ರದಾಯಿಕ ಇಂಧನ ಬಳಕೆ ಯುಗದಲ್ಲಿ ಬೆಳಗಾವಿಯನ್ನು ಮುನ್ನಡೆಸುವ ದಿಕ್ಕಿನಲ್ಲಿ ಬಹುದೊಡ್ಡ ಹೆಜ್ಜೆ ಇಟ್ಟಿದ್ದಾರೆ.

ಅಪ್ಪಚಿವಾಡಿಯಿಂದ ಮುರಗೋಡದವರೆಗೆ ಹಸಿರು ವಿದ್ಯುತ್ ರೇಖೆ
ಈ ಯೋಜನೆಯಡಿ ನಿಪ್ಪಾಣಿ ತಾಲ್ಲೂಕಿನ ಅಪ್ಪಚಿವಾಡಿ ಸೇರಿದಂತೆ ಗೋಕಾಕ್, ಸೌದತ್ತಿ, ಬೈಲಹೊಂಗಲ, ಮೂಡಲಗಿ, ಹುಕ್ಕೇರಿ ತಾಲ್ಲೂಕಿನ ಎಂಟು ಹಳ್ಳಿಗಳಲ್ಲಿ 110 ಕೆವಿ ಉಪಕೇಂದ್ರಗಳು ನಿರ್ಮಾಣವಾಗಲಿದ್ದು, ಹತ್ತಾರು ಗ್ರಾಮಗಳ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಇದು ಹೆಸ್ಕಾಂ ಮಾದರಿ ಸೌರ ಗ್ರಾಮ ಯೋಜನೆಯಡಿಯಲ್ಲಿ ಜಾರಿಗೆ ಬರಲಿದೆ.

ಸಚಿವರ ನಿರಂತರ ಹೋರಾಟದ ಫಲ
ಅಪ್ಪಚಿವಾಡಿ ಸೇರಿದಂತೆ ಹಲವು ಹಳ್ಳಿಗಳ ರೈತರು ದಶಕಗಳ ಕಾಲ ಎದುರಿಸುತ್ತಿದ್ದ ವಿದ್ಯುತ್ ಪೂರೈಕೆಯ ಸಮಸ್ಯೆ ಇದೀಗ ಖಚಿತ ಪರಿಹಾರ ಕಾಣುತ್ತಿದೆ. ಈ ಬೆಡಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಸಚಿವ ಜಾರಕಿಹೊಳಿ ಅವರು ಖುದ್ದಾಗಿ ರಾಜ್ಯ ಇಂಧನ ಇಲಾಖೆಯವರೊಂದಿಗೆ ಚರ್ಚೆ ನಡೆಸಿ, ಬೆಳಗಾವಿಯನ್ನು ಗ್ರೀನ್ ಎನರ್ಜಿ ಕಾರಿಡಾರ್ ಯೋಜನೆಯ ಎರಡನೇ ಹಂತಕ್ಕೆ ಸೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಹೆಚ್ಚಿದ ಬೇಡಿಕೆ – ತಕ್ಷಣದ ಪರಿಹಾರ
ಕೊಗ್ನೋಲಿ ಹಾಗೂ ಅಪ್ಪಚಿವಾಡಿ ಪ್ರದೇಶಗಳಲ್ಲಿ ಹೆಚ್ಚಿದ ವಿದ್ಯುತ್ ಪಂಪ್ ಬಳಕೆಗನುಗುಣವಾಗಿ ಗ್ರೀನ್ ಫೀಲ್ಡ್ ಯೋಜನೆಯ ಉಪಕೇಂದ್ರಗಳು ನವೀನ ಶಕ್ತಿ ಮೂಲಗಳಿಂದ ವಿದ್ಯುತ್ ಪೂರೈಕೆ ಮಾಡುವ ಮೂಲಕ ಶ್ರೇಯಸ್ಕರವಾದ ಅಭಿವೃದ್ಧಿಗೆ ದಾರಿ ಒದಗಿಸಲಿದೆ. ಈಗಿರುವ ಸಬ್‌ಸ್ಟೇಷನ್‌ಗಳ ಮೇಲಿನ ಒತ್ತಡ ಕಡಿಮೆಯಾಗುವಂತಾಗಿದೆ.

ಹಳ್ಳಿ ಹಳ್ಳಿ ಮೆಚ್ಚಿನ ರಾಜಕಾರಣಿ
ಈ ಯೋಜನೆಯ ಮಾಹಿತಿ ಪ್ರಕಟವಾದ ನಂತರ, ಹಲವಾರು ಹಳ್ಳಿಗಳ ರೈತರು ಸಚಿವ ಜಾರಕಿಹೊಳಿಯವರನ್ನು ಅಭಿನಂದಿಸಿ, ಅವರ ಪ್ರಾಮಾಣಿಕ ಪ್ರಯತ್ನಕ್ಕೆ ಧನ್ಯವಾದ ವ್ಯಕ್ತಪಡಿಸಿದ್ದಾರೆ. ಅವರು ತಾವು ವಾಸವಿರುವ ಹಳ್ಳಿಗಳ ಸಮಸ್ಯೆಗಳ ಬಗ್ಗೆಯೂ ಇತರ ನಗರದಂತೆ ಗಮನ ಹರಿಸುತ್ತಿದ್ದಾರೆಂಬ ವಿಶ್ವಾಸಕ್ಕೆ ಪುಟಿಪುಟಿಯಾಗಿ ಸಾಕ್ಷಿಯಾದಂತಿದೆ.


ಯೋಜನೆಯು ಕೈಗೊಳ್ಳಲಿರುವ ಪ್ರಮುಖ ಹಳ್ಳಿಗಳು:

ಅಪ್ಪಚಿವಾಡಿ (ನಿಪ್ಪಾಣಿ)

ಪಾಮಲದಿನ್ನಿ (ಗೋಕಾಕ್)

ಸೌದತ್ತಿ ಜಾಕ್ವೆಲ್ (ಸೌದತ್ತಿ)

ಗಣಿಕೊಪ್ಪ (ಬೈಲಹೊಂಗಲ)

ಪಿ.ವೈ. ಹುಣಶಲ (ಮೂಡಲಗಿ)

ಮುರಗೋಡ (ಸೌದತ್ತಿ)

ಪಾಚ್ಚಾಪುರ (ಹುಕ್ಕೇರಿ)

ಕೆಂಚನಹಟ್ಟಿ


Leave a Reply

Your email address will not be published. Required fields are marked *

error: Content is protected !!