ಎಂಇಎಸ್ ಸದಸ್ಯರ ಸದಸ್ಯತ್ವ ರದ್ದತಿಗೆ ಕರವೇ ಆಗ್ರಹ – ಅಭಿವೃದ್ಧಿಗೆ ಅಡ್ಡಿಯಾದ ನಾಡದ್ರೋಹಿಗಳ ರಾಜಕೀಯ
ಕನ್ನಡದ ನೆಲದಲ್ಲಿ ನಾಡದ್ರೋಹಿಗಳ ಆಟ – ದಿಕ್ಕು ತಪ್ಪುತ್ತಿರುವ ಬೆಳಗಾವಿ ಪಾಲಿಕೆ ಅಭಿವೃದ್ಧಿ
“ಮಹಾನಗರ ಪಾಲಿಕೆಯ ಆಡಳಿತ ಹಸಿವಾದ ಬೆಳಗಾವಿಗೆ ಭಾಷಾ ರಾಜಕಾರಣವೇ ಶಾಪ”
ಅಭಿವೃದ್ಧಿಗೆ ಅಡ್ಡಿಯಾದ ಎಂಇಎಸ್ ನಾಯಕರ ಭಾಷಾ ಜಗಳ –
ಪಾಲಿಕೆಯಲ್ಲಿ ಮರಾಠಿ ಬೇಡ, ಅಭಿವೃದ್ಧಿ ಬೇಕು – ಕರವೇ ಎಚ್ಚರಿಕೆ,
ಬೆಳಗಾವಿಯಲ್ಲಿ ಭಾಷಾ ರಾಜಕಾರಣ ಹೊಸದೇನಲ್ಲ. ಆದರೆ 2025ರಲ್ಲಿ ಸಹ ಇನ್ನೂ ಅದೇ ವ್ಯವಸ್ಥೆಯಲ್ಲಿ ಅಲೆದಾಡುತ್ತಿರುವುದು ನಮ್ಮ ಆಡಳಿತ ವ್ಯವಸ್ಥೆಯ ದುರ್ಬಲತೆಯ ನಿಜವಾದ ಪ್ರತಿರೂಪ. ಪಾಲಿಕೆಯಲ್ಲಿ ನಾಡದ್ರೋಹಿಗಳಿಗೆ ಸ್ಥಾನವಿಲ್ಲ ಎಂಬ ಚಿಂತನೆಯೊಂದಿಗೇ, ಆಡಳಿತಮಟ್ಟದ ಶಿಸ್ತು ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಸ್ಪಷ್ಟವಾದ ರಾಜಕೀಯ ಇಚ್ಛಾಶಕ್ತಿ ಈ ಸಂಧರ್ಭದಲ್ಲಿ ಅಗತ್ಯ.
ಇ ಬೆಳಗಾವಿ ವಿಶೇಷ
ಬೆಳಗಾವಿ.
ಒಂದಾನೊಂದು ಕಾಲದಲ್ಲಿ ‘ಶ್ರೀಮಂತ ಪಾಲಿಕೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಳಗಾವಿ ಮಹಾನಗರ ಪಾಲಿಕೆ ಇಂದು ಆರ್ಥಿಕವಾಗಿ ನರಳುತ್ತಿದೆ.
ಆದರೆ ಅದರ ಅಭಿವೃದ್ಧಿಗೆ ಕೈಕಟ್ಟಿರುವುದು ಕೇವಲ ಹಣದ ಕೊರತೆಯೇ ಅಲ್ಲ – ಅದಕ್ಕಿಂತ ಅಪಾಯಕಾರಿ ರೀತಿಯಲ್ಲಿ ಬೆಳಗುತ್ತಿರುವ ಭಾಷಾ ರಾಜಕೀಯ. !

‘ಬೆಳಗಾವಿ ಪಾಲಿಕೆಯು ಕನ್ನಡಿಗರ ಪಾಲಿಕೆ’ ಎಂಬ ಘೋಷಣೆಗೆ ನಾಡದ್ರೋಹಿಗಳ ಅಟ್ಟಹಾಸ ಅಡ್ಡಿಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯ (MES) ಮೂರೂ ನಗರಸೇವಕರ ಸದಸ್ಯತ್ವ ರದ್ದುಪಡಿಸಬೇಕೆಂಬ ಜೋರಾದ ಬೇಡಿಕೆ ಒತ್ತಾಸೆಯಾಗುತ್ತಿದೆ.
ಪಾಲಿಕೆಯಲ್ಲಿ ಅಭಿವೃದ್ಧಿಯ ಬೆಳಕು ಇಲ್ಲ, ಆದರೆ ಭಾಷಾ ರಾಜಕಾರಣದ ಕಿಚ್ವು ಹೆಚ್ಚಾಗಿದೆ!
ಬೆಳಗಾವಿಯು ಬಹುಭಾಷಾ ನಗರವಾಯಿತು ಎನ್ನುತ್ತಿದ್ದಾಗ, ಅದರ ಆಡಳಿತದಲ್ಲಿ ಕನ್ನಡದ ಸ್ಥಾನ ಹೆಚ್ಚಾಗಿ ಮಗ್ಗುಲಲ್ಲಿ ಹೋಗುತ್ತಿದೆ. ಚುನಾವಣೆಯಲ್ಲಿ ಗೆದ್ದು ಬಂದ ಎಂಇಎಸ್ ಬೆಂಬಲಿತ 3 ಜನ ನಗರಸೇವಕರು, ಕೌನ್ಸಿಲ್ ಸಭೆಗಳಲ್ಲಿ “ದಾಖಲೆ ಮರಾಠಿಯಲ್ಲಿ ಬೇಕು” ಎಂಬ ಒತ್ತಡ ತಂದು, ಕನ್ನಡ ಭಾಷಾ ಅನುಷ್ಠಾನಕ್ಕೆ ಅಡ್ಡಿಯಾಗುತ್ತಿದ್ದಾರೆ .

ಇತ್ತೀಚೆಗೆ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ MES ನ ರವಿ ಸಾಳುಂಕೆ, ಶಿವಾಜಿ ಮಂಡೋಲಕರ ಮತ್ತು ವೈಶಾಲಿ ಭಾತಖಾಂಡೆ ಎಂಬ ತ್ರಿಮೂರ್ತಿಗಳು ಈ ಬೇಡಿಕೆಯನ್ನು ಪುನರಾವರ್ತಿಸಿದಾಗ, ಸಭೆಯ ವಾತಾವರಣ ಕಾವೇರಿತು. ಶಾಸಕರಾದ ಅಭಯ ಪಾಟೀಲ ಮಧ್ಯಪ್ರವೇಶಿಸಿ, “ಇದು ನಾಡದ್ರೋಹ” ಎಂದು ಖಾರವಾಗಿ ಟೀಕೆ ಮಾಡಿದ ದೃಶ್ಯ ಎಲ್ಲರಿಗೂ ಗೊತ್ತಿದೆ.
*ಪಾಲಿಕೆಗೆ ನುಗ್ಗಿದ ಕರವೇ – ಸದಸ್ಯತ್ವ ರದ್ದತಿಗೆ ಒತ್ತಾಯ*

ಕರವೇಯಿಂದ ಡಿಸಿಗೆ ಮನವಿ
ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಕಾರ್ಯಕರ್ತರು ನೇರವಾಗಿ ಪಾಲಿಕೆಗೆ ನುಗ್ಗಿ, “ಮರಾಠಿಗರ ಹೊರೆ ಬಿಡಿಸಿ” ಎಂಬ ಘೋಷಣೆಯೊಂದಿಗೆ ಪ್ರತಿಭಟನೆ ನಡೆಸಿದರು. ದೀಪಕ್ ಗುಡಗನಟ್ಟಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾದ ಮನವಿ ಪತ್ರದಲ್ಲಿ, “ಇವರು ನಾಡದ್ರೋಹಿಗಳಂತೆ ವರ್ತಿಸುತ್ತಿದ್ದಾರೆ. ಇವರ ಸದಸ್ಯತ್ವವನ್ನು ತಕ್ಷಣವೇ ರದ್ದುಗೊಳಿಸಬೇಕು,” ಎಂದು ಆಗ್ರಹಿಸಲಾಗಿದೆ.
*ಶಿಸ್ತು ತರಲು ಯತ್ನಿಸುತ್ತಿರುವ ಆಯುಕ್ತೆ*

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಪಾಲಿಕೆಗೆ ದಿಟ್ಟ ನಾಯಕರಾಗಿರುವ ಆಯುಕ್ತೆ ಶುಭಾ ಬಿ ಅವರು ತೆರಿಗೆ ವಸೂಲಿ, ಕಟ್ಟಡ ನಿಯಮ ಉಲ್ಲಂಘನೆಗಳ ವಿರುದ್ಧ ಶಿಸ್ತು ತರಲು ಕ್ರಮ ಕೈಗೊಂಡಿದ್ದಾರೆ. ಆದರೆ ಅವರ ಪ್ರಯತ್ನಗಳು ಪಕ್ಷೀಯ ರಾಜಕಾರಣ ಹಾಗೂ ಭಾಷಾ ಸಂಘರ್ಷದ ನಡುವೆ ಮುಸುಕು ಹೋಗುತ್ತಿವೆ. ಕಂದಾಯ ಶಾಖೆಯ ಕೆಲ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ತನಿಖೆಗೆ ಪತ್ರ ಬರೆದರೂ ಅದಕ್ಕೆ ಈವರೆಗೆ ಚಾಲನೆ ಸಿಕ್ಕಿಲ್ಲ.
ಪಾಲಿಕೆಯ ಮೂಲಗಳ ಪ್ರಕಾರ “ಬಲಿಷ್ಠರನ್ನು ಮುಟ್ಟಲು ಹಿಂದೇಟು ಹಾಕಲಾಗುತ್ತದೆ ಎಂಬ ಚರ್ಚೆ ನಡೆದಿದೆ ಮುಂದಿಟ್ಟಿವೆ.
*ವಿಕಾಸಕ್ಕೇನು ದಿಕ್ಕಿಲ್ಲವೆ?*
ಪಾಲಿಕೆಯು ಕಾನೂನು ಬದ್ಧವಾಗಿ ಬಡವರ ಮನೆಗಳಿಗೆ ನೀರು, ಚರಂಡಿ ಸಂಪರ್ಕ ಒದಗಿಸಬೇಕಾದ ಸಂದರ್ಭದಲ್ಲಿ, ಕೌನ್ಸಿಲ್ ವೇದಿಕೆಯಲ್ಲಿ ಭಾಷಾ ಜಗಳವೇ ಪ್ರಾಥಮಿಕ ಅಡ್ಡಿಯಾಗುತ್ತಿದೆ. ಇದು ಜನಪ್ರತಿನಿಧಿಗಳ ನೈತಿಕ ಚ್ಯುತಿಗೆ ಸಾಕ್ಷ್ಯ.
ಪ್ರತೀ ಸಭೆಯಲ್ಲಿ ಭಾಷಾ ಗಲಾಟೆ, ಧ್ವನಿಯುದ್ದಗಳು ನಡೆದು ತದಂತರವಾಗಿ ಅಭಿವೃದ್ಧಿಯ ಕುರಿತು ಚರ್ಚೆಗೆ ಸ್ಪೇಸ್ ಉಳಿಯುವುದಿಲ್ಲ. ಇದರಿಂದ ರಾಜಕೀಯ ಶಕ್ತಿಯ ಶೋಷಣೆ ಮತ್ತು ಸಾರ್ವಜನಿಕ ಸಮಸ್ಯೆಗಳ ನಿರ್ಲಕ್ಷ್ಯ ಮಾತ್ರ ಆಗುತ್ತಿದೆ.
—
ನಮ್ಮ ಪಾಲಿಕೆ ಬಡವಲ್ಲ – ಅದರಲ್ಲಿ ಸಾಮರ್ಥ್ಯ ಇದೆ, ಲೌಕಿಕತೆ ಇದೆ. ಆದರೆ ನಿರಂತರವಾಗಿ ನಡೆಯುತ್ತಿರುವ ಭಾಷಾ ದ್ವೇಷ ಮತ್ತು ನಾಡದ್ರೋಹಿ ಧೋರಣೆಯ ಪರಿಣಾಮವಾಗಿ ಈ ಸಾಮರ್ಥ್ಯ ಶೂನ್ಯಕ್ಕೆ ತಲುಪುತ್ತಿದೆ. ಬೆಳಗಾವಿಗರ ಆಶಯ – “ನಮ್ಮ ಪಾಲಿಕೆಯಲ್ಲಿ ಭಾಷಾ ರಾಜಕಾರಣವಲ್ಲ, ಬಡವರ ಮನೆಗೆ ನೀರು ಹರಿಯಬೇಕು, ಯುವಕರಿಗೆ ಉದ್ಯೋಗ ಸಿಗಬೇಕು, ರಸ್ತೆಗಳು ಬದಲಾವಳಿ ಕಾಣಬೇಕು!”
—
ಕನ್ನಡಿಗರು ಕ್ಷಮಿಸಲ್ಲ
“ನೀವು ಎಂಇಎಸ್ ಸದಸ್ಯರಾಗಿರಬಹುದು. ಆದರೆ ಬೆಳಗಾವಿಯಲ್ಲಿ ಆಡಳಿತ ಮಾಡುವೆವು ಎಂದರೆ, ಕನ್ನಡಿಗರ ಗೌರವ ಉಳಿಸಬೇಕು. ಇಲ್ಲವಾದರೆ ಈ ನಾಡು ನಿಮಗೆ ಕ್ಷಮಿಸುವುದಿಲ್ಲ!” – ಕರವೇ ಕಾರ್ಯಕರ್ತರ ಕಠಿಣ ಎಚ್ಚರಿಕೆ