
ಇಂದು ಪಾಲಿಕೆ ಮುಖ್ಯಕಚೇರಿಗೆ ಲೋಕಾ ದಾಳಿ!?
ಬೆಳಗಾವಿ. ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ನ್ಯಾಯಮೂರ್ತಿಗಳು ಇಂದು ಬೆಳಿಗ್ಗೆ ೧೦.೩೦ ರ ಸುಮಾರಿಗೆ ಪಾಲಿಕೆಯ ಲೋಕಾಯುಕ್ತ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಕಳೆದ ದಿನ ಪಾಲಿಕೆಯ ಅಶೋಕನಗರದ ಕಚೇರಿಗೆ ಭೆಟ್ಟಿ ನೀಡಿ ಕೆಲ ಮಹತ್ವದ ದಾಖಲೆ ತೆಗೆದುಕೊಂಡಿದ್ದರು. ಇಂದು ಕೆಲವೇ ನಿಮಿಷಗಳಲ್ಲಿ ಪಾಲಿಕೆಯ ಮುಖ್ಯ ಕಚೇರಿಗೆ ಭೆಟ್ಟಿ ನೀಡಲಿದ್ದಾರೆ. ಬಹುಶಃ ಪಾಲಿಕೆಯಲ್ಲಿ ಭ್ರಷ್ಟ ಶಾಖೆ ಎಂದೇ ಹೆಸರಾದ ಕಂದಾಯ ಶಾಖೆಯ ದಾಖಲೆಗಳನ್ನು ಲೋಕಾಯುಕ್ತರು ಜಾಲಾಡುವ ಸಾಧ್ಯತೆಗಳವೆ. ಈ ಹಿಂದೆ ಇದೇ ಶಾಖೆಯಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ…