ಬ್ಯಾಂಕಿನ ಬೆಳವಣಿಗೆಗಿಂತ ಹೆಚ್ಚಾಗಿ, ರೈತನ ಬೆಳವಣಿಗೆಗೆ ನಾವಿಬ್ಬರೂ ಬದ್ಧ!” — ಶಾಸಕ ಬಾಲಚಂದ್ರ ಜಾರಕಿಹೊಳಿ
ಬೈಲಹೊಂಗಲ :
ಬಿ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ನಾಯಕರ ಸಹಕಾರದೊಂದಿಗೆ ಅವಿರೋಧ ಆಯ್ಕೆಯ ಕನಸು ನನಸು ಮಾಡುವ ಪ್ರಾಮಾಣಿಕ ಪ್ರಯತ್ನ ಮುಂದುವರೆದಿದ್ದು, ಇದೊಂದು ಹೊಸ ರಾಜಕೀಯ ಸಾಂದರ್ಭಿಕ ಸಂದೇಶ ನೀಡಿದೆ. ಶಾಸಕರಾಗಿರುವ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಬಡ ರೈತ ಸಾಮಾನ್ಯರ ನಂಬಿಕೆಗೆ ತಕ್ಕ ಕಾರ್ಯವೈಖರಿಯಿಂದ, ಪ್ರತಿಸ್ಪರ್ಧೆಗಳ ನಡುವೆಯೂ ಸಮರಸತೆ ಹುಡುಕುವ ನೈತಿಕ ಧೋರಣೆಗೆ ಅಗ್ರಸ್ಥಾನ ಪಡೆದಿದ್ದಾರೆ.
ಚಿಕ್ಕ ಬಾಗೇವಾಡಿಯ ಸಮೀಪದ ಗದ್ದಿಕರವಿರನಕೊಪ್ಪ ಕ್ರಾಸ್‌ನ ಬಿ.ಎಸ್. ಯಡಿಯೂರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು,
“ಅವಿರೋಧ ಆಯ್ಕೆ ನಮ್ಮ ಆಶಯವಾಗಿದ್ದು, ಕೆಲವು ಕ್ಷೇತ್ರಗಳಲ್ಲಿ ಸ್ಪರ್ಧಾ ಮನೋಭಾವ ಎದುರಾಗಿದರೂ ಸಹ, ಹಿರಿಯರ ಸಹಭಾಗಿತ್ವದಲ್ಲಿ ಒಗ್ಗಟ್ಟಿನ ನಿರ್ಧಾರ ತೆಗೆದುಕೊಳ್ಳುವ ಯತ್ನ ನಡೆಯುತ್ತಿದೆ,” ಎಂದರು.

ಪಕ್ಷಪಾತ ಇಲ್ಲ, ಪಕ್ಷಾತೀತ ಹೋರಾಟ ಮಾತ್ರ!”
ಜಿಲ್ಲೆಯಾದ್ಯಂತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಎಂಇಎಸ್ ಮುಂತಾದ ಎಲ್ಲಾ ಪಕ್ಷದ ಮುಖಂಡರನ್ನು ಒಂದುಗೂಡಿಸಿಕೊಂಡು ಈ ಚುನಾವಣೆಗೆ ಇಳಿದಿದ್ಡೇವೆ . ಈ ಪೈಕಿ ಸಚಿವ ಸತೀಶ್ ಜಾರಕಿಹೊಳಿ, ಡಾ. ಪ್ರಭಾಕರ ಕೋರೆ, ಲಕ್ಷ್ಮಣ ಸವದಿ, ಅಣ್ಣಾಸಾಹೇಬ ಜೊಲ್ಲೆ, ರಮೇಶ್ ಜಾರಕಿಹೊಳಿ ಅವರ ನೇತೃತ್ವದ ಒಟ್ಟುಗೂಡಿದ ಗುಂಪು ಪ್ರಚಾರದಲ್ಲಿ ಸಕ್ರಿಯವಾಗಿದೆ ಎಂದರು.
ಬಾಲಚಂದ್ರ ಜಾರಕಿಹೊಳಿ ಅವರು, “ಈ ಚುನಾವಣೆ ರಾಜಕೀಯದ ಗಟ್ಟಿತನವಲ್ಲ. ಇದು ರೈತರಿಂದ ಆರಂಭವಾಗಿ ರೈತನ ಮೇಲೆಯೇ ಕೊನೆಗೊಳ್ಳುವ ಹೋರಾಟ,” ಎನ್ನುತ್ತಾ, ರೈತರ ಸಾಲ ಮನ್ನಾ, ಸೌಲಭ್ಯ ವಿಸ್ತರಣೆ, ಮತ್ತು ಬ್ಯಾಂಕ್ ಬಲವರ್ಧನೆ ಬಗ್ಗೆ ದೃಢ ನಿಲುವು ಪ್ರದರ್ಶಿಸಿದರು.

ಮಹಾಂತೇಶ ದೊಡ್ಡಗೌಡರ (ಬೈಲಹೊಂಗಲ ಅಭ್ಯರ್ಥಿ) ಹಾಗೂ ವಿಕ್ರಂ ಇನಾಂದಾರ (ಚೆನ್ನಮ್ಮನ ಕಿತ್ತೂರು ಅಭ್ಯರ್ಥಿ) — ಇಬ್ಬರೂ ತಮ್ಮ ನಿಷ್ಠಾವಂತ ರೈತ ಪರವಿದ್ದು ಈ ಚುನಾವಣೆಯಲ್ಲಿ ಹೊಸ ತಿರುವಿಗೆ ಕಾರಣರಾಗಲಿದ್ದಾರೆ.
ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಜಗದೀಶ ಮೆಟಗುಡ್ಡ, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಅಧ್ಯಕ್ಷ ಅಪ್ಪಾ ಸಾಹೇಬ ಕುಲಗೋಡೆ, ಚಿದಾನಂದ ಸವದಿ, ವಿಕ್ರಂ ಇನಾಂದಾರ, ನಿರ್ದೇಶಕರಾದ ರಾಜೇಂದ್ರ ಅಂಕಲಗಿ, ಶ್ರೀಕಾಂತ ಢವಣ, ಶಂಕರ ಮಾಡಲಗಿ, ವೀರುಪಾಕ್ಷ ಮಾಮನಿ ಮೊದಲಾದವರು ಸಭೆಗೆ ಹಾಜರಿದ್ದರು.
ಪ್ರಚಾರದ ಪಟ್ಟಿ ಖಚಿತ!

“ಜಿಲ್ಲೆಯ ಎಲ್ಲಾ ೧೬ ಕ್ಷೇತ್ರಗಳಲ್ಲಿ ಪ್ರಚಾರ ರಭಸದ ನಡುವೆ ನಾವು ಪಕ್ಷಾತೀತ ಗುಂಪನ್ನು ಕಟ್ಟಿಕೊಂಡಿದ್ದೇವೆ. ದೆಹಲಿಯಲ್ಲಿ ಇರುವ ಲಕ್ಷ್ಮಣ ಸವದಿ ಅವರ ಬದಲು ಪುತ್ರ ಚಿದಾನಂದ ಸವದಿ ಪ್ರಚಾರದಲ್ಲಿ ಸಕ್ರಿಯವಾಗಿ ನಾಳೆಯ ಸಭೆಗೂ ಅವರು ಭಾಗವಹಿಸಲಿದ್ದಾರೆ. ಈ ಬಾರಿ ದೇವರ ಅನುಗ್ರಹ ಹಾಗೂ ರೈತರ ಆಶೀರ್ವಾದದಿಂದ ಭರ್ಜರಿ ಜಯ ಸಾಧಿಸಿ, ಆಧುನಿಕ ಮತ್ತು ದಕ್ಷ ಆಡಳಿತ ನೀಡುವ ಭರವಸೆಯಿದೆ.”
— ಬಾಲಚಂದ್ರ ಜಾರಕಿಹೊಳಿ, ಶಾಸಕರು ಮತ್ತು ಬೆಮ್ಯುಲ್ ಅಧ್ಯಕ್ಷರು