ನಿಪ್ಪಾಣಿ:
ಜಿಲ್ಲೆಯ ಹೆಮ್ಮೆಯ ಬಿಡಿಸಿಸಿ ಬ್ಯಾಂಕ್ ಮುಂದಿನ ಹಂತದ ಪ್ರಗತಿಯತ್ತ ಹೆಜ್ಜೆ ಇಡಬೇಕಾದರೆ, ಅದು ಅಣ್ಣಾಸಾಹೇಬ್ ಜೊಲ್ಲೆಯವರಂತಹ ದೂರದೃಷ್ಟಿಯುಳ್ಳ, ಅನುಭವಸಂಪನ್ನ ನಾಯಕರ ನೇತೃತ್ವದಲ್ಲಿ ಸಾಧ್ಯವೆಂದು ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅಭಿಪ್ರಾಯಪಟ್ಟರು.

ಅಪ್ಪಾಚವಾಡಿಯ ಹಾಲಸಿದ್ಧನಾಥ ಸಭಾ ಭವನದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿ, “ಬಿಡಿಸಿಸಿ ಬ್ಯಾಂಕ್‌ಗೆ ಶತಮಾನೋತ್ಸವದ ಸಂಭ್ರಮವಿದ್ದರೂ, ಅಭಿವೃದ್ಧಿಯಲ್ಲಿ ಇನ್ನೂ ಬಹಳಷ್ಟು ಸಾಧ್ಯತೆಗಳಿವೆ. ಕೇವಲ 6 ಮಂದಿ ಸದಸ್ಯರಿಂದ ಆರಂಭಿಸಿ ಇಂದು ₹7,000 ಕೋಟಿ ಠೇವಣಿಗೆ ತಲುಪಿದ ಬೆಂಕಿಗೆ, ಇನ್ನಷ್ಟು ವೇಗ ಬೇಕಾದರೆ ಜೊಲ್ಲೆಯವರಂತಹ ನಿಷ್ಠಾವಂತರು ಅಗತ್ಯ,” ಎಂದರು.

ಅಣ್ಣಾಸಾಹೇಬ್ ಅವರು ಸ್ಥಾಪಿಸಿದ ಬೀರೇಶ್ವರ ಸೊಸೈಟಿಯ ಯಶಸ್ಸನ್ನು ಉದಾಹರಿಸಿದ ಅವರು, “25 ವರ್ಷಗಳಲ್ಲಿ ₹4,000 ಕೋಟಿ ಠೇವಣಿಯನ್ನು ಸುಧೀರ್ಘ ಯೋಜನೆಯೊಂದಿಗೆ ಸಂಗ್ರಹಿಸಿರುವುದು ಶ್ಲಾಘನೀಯ. ಇಂತಹ ಸಾಧಕರು ಬಿಡಿಸಿಸಿ ಬ್ಯಾಂಕನ್ನು ಅಂತರಾಷ್ಟ್ರೀಯ ಮಟ್ಟಕ್ಕೇ ತಲುಪಿಸಬಲ್ಲರು” ಎಂದು ಹೇಳಿದರು.

ರಾಜಕೀಯಕ್ಕಿಂತ ಮೇಲಿದಾಗಿರುವ ಸಹಕಾರ
“ಬಿಡಿಸಿಸಿ ಬ್ಯಾಂಕ್ ರೈತರಿಗೂ ಸಹಕಾರಿಗೂ ಸೇರಿದದ್ದು. ಇದರಲ್ಲಿ ರಾಜಕೀಯ ಅಡಚಣೆ ಅಪ್ರಸಂಗಿಕ. ಇಂದು ನಾವು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮರೆಯಬೇಕು. ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸಬೇಕು” ಎಂದು ಅವರು ರಾಜಕೀಯ ಪಕ್ಷಗಳ ಮುಖಂಡರಿಗೆ ಮನವಿ ಮಾಡಿದರು.

ರಾಜ್ಯಮಟ್ಟದ ಬೆಂಬಲ
ಅಣ್ಣಾಸಾಹೇಬ್ ಜೊಲ್ಲೆಯವರಿಗೆ ವೀರಕುಮಾರ ಪಾಟೀಲ, ಪ್ರಕಾಶ ಹುಕ್ಕೇರಿ, ಮಹಾಂತೇಶ ಕವಟಗಿಮಠ, ಉತ್ತಮ ಪಾಟೀಲ, ಲಕ್ಷ್ಮಣರಾವ್ ಚಿಂಗಳೆ, ಗಣೇಶ ಹುಕ್ಕೇರಿ ಸೇರಿದಂತೆ ಹಲವರು ಪಕ್ಷಭೇದವಿಲ್ಲದೆ ಬೆಂಬಲ ನೀಡಿರುವುದು ಈ ಚುನಾವಣೆಯ ವಿಶೇಷತೆ.
ದೇವರ ಆಶೀರ್ವಾದದೊಂದಿಗೆ
ಖಾನಾಪುರದಿಂದ ಆರಂಭಗೊಂಡ ಪ್ರಚಾರ, ನಿಪ್ಪಾಣಿಯ ಹಾಲಸಿದ್ಧನಾಥ ದೇವಸ್ಥಾನದಲ್ಲಿ ಸಮಾರೋಪಗೊಂಡಿದ್ದು, “ದೇವರ ಆಶೀರ್ವಾದ ನಮ್ಮ ಮೇಲಿದ್ದು, ಫೆನಲ್‌ನ ಎಲ್ಲಾ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆ ಇದೆ” ಎಂದು ಶಾಸಕರು ಪ್ರಾರ್ಥಿಸಿದರು.
*ರೈತರ ಪರ ಶೂನ್ಯ ಬಡ್ಡಿದರ ಸಾಲ:*
“ನಾವು ಬ್ಯಾಂಕಿಗೆ ಬರೋದು ರೈತರ ಚೇತರಿಕೆಗೆ, ಅವರ ಮೇಲ್ವಿಚಾರಣೆಗೆ. ಶೂನ್ಯ ಬಡ್ಡಿದರದಲ್ಲಿ ಸಾಲ, ಹೆಚ್ಚಿನ ಪಿಕೆಪಿಎಸ್‌ಗಳಿಗೆ ಮೂಲಸೌಕರ್ಯ, ಹಾಗೂ ನಿರಂತರ ಬೆಂಬಲ—ಇವು ನಮ್ಮ ಗುರಿಗಳು,” ಎಂದು ಅವರು ಸ್ಪಷ್ಟಪಡಿಸಿದರು.
ಸಹಕಾರದ ಹೊಸ ರೂಪವೊಂದೇ ವಿಜಯದ ಮಾರ್ಗ
ಶರದ್ ಪವಾರ್ ಅವರಂತೆ ರಾಜಕೀಯ ಮತ್ತು ಸಹಕಾರವನ್ನು ಸಮತೋಲನದಿಂದ ನಿಭಾಯಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ ಅವರು, “ಇಂದಿನ ವಿರೋಧಿಗಳು ನಾಳಿನ ಮಿತ್ರರು, ಇಂದಿನ ಮಿತ್ರರು ನಾಳೆ ವಿರೋಧಿಯಾಗಬಹುದು ಎಂಬ ಅರಿವು ನಮಗಿದೆ. ಜೊಲ್ಲೆಯವರು ಎಲ್ಲರನ್ನು ಭೇಟಿ ಮಾಡಿ ಪ್ರಾಮಾಣಿಕವಾಗಿ ಮತ ಯಾಚನೆ ನಡೆಸುತ್ತಿದ್ದಾರೆ” ಎಂದರು.
ಅಣ್ಣಾಸಾಹೇಬ ಜೊಲ್ಲೆಯವರ ಸ್ಪಷ್ಟ ಸಂದೇಶ:

“ಬ್ಯಾಂಕು ಶತಮಾನೋತ್ಸವದ ಹಿನ್ನಲೆಯಲ್ಲಿ, ಎಲ್ಲಾ ಪಿಕೆಪಿಎಸ್‌ಗಳಿಗೆ ಮೂಲಸೌಕರ್ಯ ಒದಗಿಸಲು ನಾನು ಸಜ್ಜಿದ್ದೇನೆ. ಈಗಾಗಲೇ 75 ಸಂಘಗಳು ಬೆಂಬಲ ನೀಡಿದ್ದಾರೆ. ಇನ್ನೂ ಹೆಚ್ಚುವರಿ ಬೆಂಬಲವನ್ನು ಸಾಧಿಸಿ, ರೈತರ ಸೇವೆಗೆ ನನ್ನನ್ನು ಆಯ್ಕೆಮಾಡಿ,” ಎಂದು ಅವರು ವಿನಂತಿಸಿದರು.

ಶಶಿಕಲಾ ಜೊಲ್ಲೆ ಮಾತನಾಡಿ,
“ಅಣ್ಣಾಸಾಹೇಬ ಅವರ ಶಿಸ್ತಿಗೆ, ನಿಷ್ಠೆಗೆ, ಸಹಕಾರ ಮನೋಭಾವನೆಗೆ ನಿಪ್ಪಾಣಿ ಕ್ಷೇತ್ರ ಸಾಕ್ಷಿಯಾಗಬೇಕು. ಅವರಂತಹ ಸೌಜನ್ಯಪೂರ್ಣ ವ್ಯಕ್ತಿಗೆ ಈ ಕ್ಷೇತ್ರದ ಬೆಂಬಲ ದೊರೆಯಬೇಕು. ಬಿಡಿಸಿಸಿ ಬ್ಯಾಂಕ್ ಚುನಾವಣೆ ಅತೀ ಮುಖ್ಯವಾದ ಸಂಧಿ,” ಎಂದು ಹೇಳಿದರು.

