ಅಧ್ಯಕ್ಷರು ಯಾರಾಗ್ತಾರೆ ಎನ್ನುವ ಕುತೂಹಲ.
ಹಿಂದೆ ಅಧ್ಯಕ್ಷರಾದವರನ್ನು ಬಿಟ್ಡು ಹೊಸಬರಿಗೆ ಅವಕಾಶ?
ಮೇಯರಗಿರಿ ಮೇಲೆ ಕಣ್ಣಿಟ್ಟವರಿಗೆ ಅಧ್ಯಕ್ಷಗಿರಿ ಪಟ್ಟ?
ಅಭಯ ಪಾಟೀಲ
ಬೆಳಗಾವಿ.
ಮೂರು ಬಾರಿ ಮುಂದೂಡಲ್ಪಟ್ಟ ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಒಟ್ಟು ಒಂದು ಕಮಿಟಿಯಲ್ಲಿ ಏಳು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು, ಆಡಳಿತ ಪಕ್ಷದಿಂದ ಐವರು ಮತ್ತು ವಿರೋಧ ಪಕ್ಷದವರಿಂದ ಇಬ್ಬರನ್ನು ಆಯ್ಕೆ ಮಾಡಲಾಯಿತು.
ಆರಂಭಿಕ ಹಂತದಲ್ಲಿ ವಿರೋಧ ಪಕ್ಷದವರು ತಮಗೆ ಕನಿಷ್ಟ ಮೂರು ಸ್ಥಾನಬೇಕೆಂದು ಪಟ್ಟು ಹಿಡಿದಿದ್ದರು, ಆದರೆ ಅದಕ್ಕೆ ಆಡಳಿತ ಪಕ್ಷದವರು ಒಪ್ಪಲಿಲ್ಲ.
ಆಡಳಿತ ಪಕ್ಷದಲ್ಲಿ ಯಾರು ಸಮಿತಿ ಸದಸ್ಯರಾಗಬೇಕು ಎನ್ನುವ ತೀಮರ್ಾನವನ್ನು ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಕಳೆದ ದಿನವೇ ಅಂತಿಮಗೊಳಿಸಿದ್ದರು.
ವಿರೋಧ ಪಕ್ಷದಲ್ಲಿ ಇಬ್ಬರು ಸದಸ್ಯರ ಆಯ್ಕೆಯನ್ನು ಶಾಸಕ ಆಸೀಫ್ ಶೇಠ ಅಂತಿಮ ಗೊಳಿಸಿದ್ದರು.
ಇಂದು ಬೆಳಿಗ್ಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ನಡೆಯಿತು,ನಾಮಪತ್ರ ವಾಪಸ್ಸು ಪಡೆಯುವುದು ಮುಗಿದ ನಂತರ ಮಧ್ಯಾಹ್ನ 3 ಕ್ಕೆ ಆಯ್ಕೆ ಪ್ರಕ್ರಿಯೆ ಶುರುವಾಯಿತು.

ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮೀತಿ
ಜಯಂತ ಜಾಧವ,. ಸಾರಿಕಾ ಪಾಟೀಲ, ಸಂತೋಷ ಪೇಡ್ನೇಕರ, ರೇಖಾ ಮೋಹನ ಹೂಗಾರ, ರಮೇಶ ಶ್ರೀಕಾಂತ ಮೈಲ್ಯಾಗೋಳ, ಅಜೀಮ ಪಟವೇಗಾರ, ಅಫ್ರೋಜ ಮುಲ್ಲಾ.
ಸಾರ್ವಜನಿಕ ಆರೋಗ್ಯ ಶಿಕ್ಷಣಹಾಗು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ.
ಲಕ್ಷ್ಮೀ ಮಹಾದೇವ ರಾಠೋಡ, ನಿತಿನ್ ನಾಮದೇವ ಜಾಧವ. ರೂಪಾ ಚಿಕ್ಕಲದಿನ್ನಿ. ಪ್ರೀತಿ ವಿನಾಯಕ ಕಾಮಕರ. ಅಭಿಜಿತ್ ಜವಳಕರ , ಮೋದಿನಸಾಬ ಮತವಾಲೆ. ವೈಶಾಲಿ ಸಿದ್ಧಾರ್ಥ ಭಾತಖಾಂಡೆ.

ನಗರ ಯೋಜನ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ
ರಾಜು ಭಾತಖಾಂಡೆ, ಸಂದೀಪ ಅಶೋಕ ಜೀರಗ್ಯಾಳ, ಶ್ರೇಯಸ್ ಸೋಮಶೇಖರ ನಾಕಾಡಿ, ದೀಪಾಲಿ ಸಂತೋಷ ಟೋಪಗಿ, ಮಾಧವಿ ಸಾರಂಗ ರಾಘೋಚಿ, ಜ್ಯೋತಿ ರಾಜು ಕಡೋಲ್ಕರ. ಶಾಹೀದಖಾನ್ ಗೌಸಖಾನ್ ಪಠಾಣ
ಲೆಕ್ಕಗಳ ಸ್ಥಾಯಿ ಸಮಿತಿ
ನಂದು ಮಿರಜಕರ, ರವಿರಾಜ ಸಾಂಬ್ರೆಕರ, ನೇತ್ರಾವತಿ ವಿನೋದ ಭಾಗವತ, ವೀಣಾ ಶ್ರೀಶೈಲ ವಿಜಾಪುರೆ, ಶಿವಾಜಿ ಪುಂಡಲೀಕ ಮಂಡೋಲ್ಕರ, ರವಿ ಕೃಷ್ಣಾ ಧೋತ್ರೆ, ಅಸ್ಮಿತಾ ಭೈರಗೌಡ ಪಾಟೀಲ.

ಅಧ್ಯಕ್ಷರು ಯಾರಾಗ್ತಾರೆ?
ಇದೆಲ್ಲದರ ನಡುವೆ ವಾರದೊಳಗೆ ನಡೆಯುವ ಸ್ಥಾಯಿ ಸಮಿತಿ ಅಧ್ಯಕ್ಷರು ಯಾರು ಎನ್ನುವ ಕುತೂಹಲ ಎಲ್ಲರನ್ನು ಕಾಡತೊಡಗಿದೆ.
ಸಧ್ಯ ಬಂದಿರುವ ಮೂಲಗಳ ಪ್ರಕಾರ ಎರಡು ಸ್ಥಾಯಿ ಸಮಿತಿಗೆ ಅಧ್ಯಕ್ಷರು ಯಾರು ಎನ್ನುವುದು ಗೊತ್ತಾಗಿ ಬಿಟ್ಟಿದೆ. ಇನ್ನುಳಿದ ಎರಡು ಸಮಿತಿಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯುವ ಸಾಧ್ಯತೆಗಳಿವೆ.

