34 ಲಕ್ಷಕ್ಕೆ 16 ಮಂದಿಯ ಕನಸು ಬಲಿ – ನೌಕರಿ ಆಮಿಷದ ಜಾಲ ಬಯಲು***
ವಂಚನೆ ಬಗ್ಗೆ ಮೊದಲೇ ದಾಖಲೆ ಸಮೇತ ದೂರು ಕೊಟ್ಟಿದ್ದ ಸಚಿವೆ ಹೆಬ್ಬಾಳ್ಳರ್.
ಎಸ್ಪಿಗೆ ಎಪ್ರಿಲ್ ತಿಂಗಳಲ್ಲಿ ಪತ್ರ ಬರೆದಿದ್ದ ಸಚಿವೆ ಹೆಬ್ಬಾಳಕರ.
ಬೆಳಗಾವಿ:
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಸಹಿ ಹಾಕಿ, “ಸರಕಾರಿ ನೌಕರಿ ಕೊಡಿಸುತ್ತೇವೆ” ಎಂಬ ಆಮಿಷ ನೀಡಿ, 14 ಮಂದಿಯಿಂದ 34 ಲಕ್ಷ ರೂಪಾಯಿ ಕಸಿದುಕೊಂಡಿರುವ ಅಚ್ಚರಿಯ ವಂಚನೆ ಬೆಳಕಿಗೆ ಬಂದಿದೆ.
ಸಾಮಾಜಿಕ ಹೋರಾಟಗಾರ ಜಯಂತ ತಿನೇಕರ್ ಮಂಗಳವಾರ ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ಸಚಿವೆ ಬೆಂಬಲಿಗ ಮಂಜುನಾಥ ಮಲಸರ್ಜ್ ನಕಲಿ ಆದೇಶ ಪತ್ರಗಳನ್ನು ಸಿದ್ಧಪಡಿಸಿ, ರಾಜ್ಯಪಾಲ ಹಾಗೂ ಸಚಿವೆ ಸಹಿ ಮಾಡಿದಂತೆ ತೋರಿಸಿ, ‘ಕಂಪ್ಯೂಟರ್ ಅಪರೇಟರ್’ ಹುದ್ದೆಗೆ ನೇಮಕ ಮಾಡಿಕೊಡುತ್ತೇವೆ ಎಂದು ಬಲೆಗೆಳೆದಿದ್ದಾರೆ” ಎಂದು ಗಂಭೀರ ಆರೋಪ ಹೊರಹಾಕಿದರು

ವಂಚನೆಯ ರಹಸ್ಯ ವಿಧಾನ
ವಂಚನೆಗೊಳಗಾದವರು: ಬೈಲಹೊಂಗಲ, ಖಾನಾಪುರ, ಬೆಳಗಾವಿ ಸೇರಿ 14 ಮಂದಿ
ಮೋಸದ ಮೊತ್ತ: ₹34 ಲಕ್ಷಕ್ಕೂ ಅಧಿಕ – ಫೋನ್‌ಪೇ, ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ
ದಾಖಲೆಗಳು: ರಾಜ್ಯ ಚಿಹ್ನೆ ಸಹಿತ ನಕಲಿ ನೇಮಕಾತಿ ಪತ್ರ
ಪಿಎ ಹೆಸರಿಗೂ ತಳುಕು
ಪ್ರಕರಣದಲ್ಲಿ ಸಚಿವೆ ಹೆಬ್ಬಾಳಕರ್ ಅವರ ಖಾಸಗಿ ಪಿಎ ಸಂಗನಗೌಡರ ಹೆಸರನ್ನೂ ಆರೋಪಿಗಳು ಬಳಸಿಕೊಂಡಿರುವುದು ಹೊರಬಂದಿದೆ. ಆದರೆ, ಪೊಲೀಸರು ದೂರು ಸ್ವೀಕರಿಸದ ಕಾರಣ, ತಿನೇಕರ್ ಕೋರ್ಟ್ ಮೊರೆ ಹೋಗಿದ್ದಾರೆ.

ಪೊಲೀಸರ ವಿರುದ್ಧ ಕಿಡಿ
ತಿನೇಕರ್ ಆಕ್ರೋಶ ವ್ಯಕ್ತಪಡಿಸುತ್ತಾ, “15ಕ್ಕೂ ಹೆಚ್ಚು ಸಲ ಕಿತ್ತೂರು ಪೊಲೀಸ್ ಠಾಣೆಗೆ ಹೋದರೂ, ದೂರು ಸ್ವೀಕರಿಸಲಿಲ್ಲ. ಘಟನೆ ತಮ್ಮ ವ್ಯಾಪ್ತಿಯಲ್ಲಿಲ್ಲವೆಂದು ಹೇಳುತ್ತಾ ಬದಲಿಗೆ ಕಿರುಕುಳ ನೀಡಿದ್ದಾರೆ. ಲಿಖಿತ ಹೇಳಿಕೆ ಕೊಟ್ಟರೂ ಯಾವುದೇ ಕ್ರಮವಿಲ್ಲ” ಎಂದು ಕಿಡಿಕಾರಿದರು.
ಖಾನಾಪುರ ತಾಲೂಕಿನ ಗಂದಿಗವಾಡದ ಕಾವ್ಯಾ ಯಳ್ಳೂರ ಎಂಬ ಯುವತಿಯೂ ದೂರು ದಾಖಲಿಸಿದ್ದು, ಆಕೆ ಕೂಡ ಕೆಲ ಬಲಿಪಶುಗಳಿಂದ ಹಣ ಸಂಗ್ರಹಿಸಿ ಮಲಸರ್ಜ್‌ಗೆ ನೀಡಿರುವ ಮಾಹಿತಿ ತನಿಖೆಯಲ್ಲಿ ಹೊರಬಂದಿದೆ.