Headlines

10 ಕೋಟಿ ರೈತರ ಹಿತಕ್ಕಾಗಿ- ಬಾಲಚಂದ್ರ

ಬೆಳಗಾವಿ ಬೆಮುಲ್ ಲಾಭದ ಮೊತ್ತವನ್ನು ಹೈನುಗಾರರ ಬಲವರ್ಧನೆಗೆ ಮೀಸಲು ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿಯ ಘೋಷಣೆ

ಬೆಳಗಾವಿ –
ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ (ಬೆಮುಲ್) ಕಳೆದ ವರ್ಷ ಗಳಿಸಿದ ₹13 ಕೋಟಿ ಲಾಭದಲ್ಲಿ ಸುಮಾರು ₹10 ಕೋಟಿಯನ್ನು ರೈತರ ಹಿತಕ್ಕಾಗಿ ಮೀಸಲು ಮಾಡಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷರು ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಘೋಷಿಸಿದರು.

ಭಾನುವಾರ ನಗರದ ಜಿಲ್ಲಾ ಹಾಲು ಒಕ್ಕೂಟ ಸಭಾಗೃಹದಲ್ಲಿ ರೈತರಿಗೆ ₹6 ಕೋಟಿ ಮೌಲ್ಯದ ಉಪಕರಣ ವಿತರಣೆ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಜಾರಕಿಹೊಳಿಯವರು –
“ಲಾಭದ ಹೆಚ್ಚಿನ ಭಾಗವನ್ನು ರೈತರಿಗೆ ತಲುಪಿಸುವುದು ನಮ್ಮ ಗುರಿ. ಹೈನುಗಾರರ ಬಲವರ್ಧನೆಗಾಗಿ ಜಿಲ್ಲೆಯ 15 ತಾಲ್ಲೂಕು ಕೇಂದ್ರಗಳಲ್ಲಿ ಶೇ.60 ರಷ್ಟು ರಿಯಾಯಿತಿಯಲ್ಲಿ ಉಪಕರಣ ವಿತರಣೆ ಕಾರ್ಯಕ್ರಮ ನಡೆಯಲಿದೆ” ಎಂದರು.

ರೈತರಿಗೆ ಹಂಚಿದ ಸೌಲಭ್ಯಗಳು:

₹2.46 ಕೋಟಿ ವೆಚ್ಚದಲ್ಲಿ 3,100 ಫಲಾನುಭವಿಗಳಿಗೆ 10 ಸಾವಿರ ರಬ್ಬರ್ ಮ್ಯಾಟ್‌ಗಳು

₹86.10 ಲಕ್ಷ ವೆಚ್ಚದಲ್ಲಿ 350 ರೈತರಿಗೆ 2 ಹೆಚ್.ಪಿ. ವಿದ್ಯುತ್ ಮೇವು ಕತ್ತರಿಸುವ ಯಂತ್ರಗಳು

₹13.95 ಲಕ್ಷ ವೆಚ್ಚದಲ್ಲಿ 50 ರೈತರಿಗೆ ಹಾಲು ಕರೆಯುವ ಯಂತ್ರಗಳು

ಸ್ವಂತ ಕಟ್ಟಡವಿರುವ 40 ಸಂಘಗಳಿಗೆ ತಲಾ ₹5 ಲಕ್ಷ – ಒಟ್ಟು ₹2 ಕೋಟಿ ಸಹಾಯಧನ

15 ಹೊಸ ಬಿಎಂಸಿ ಘಟಕಗಳು ಖರೀದಿಗೆ ₹1.72 ಕೋಟಿ (ಶೇ.100 ರಷ್ಟು ರಿಯಾಯಿತಿ)

ಒಟ್ಟು ₹10 ಕೋಟಿಯ ಯೋಜನೆಗಳು ಹೈನುಗಾರರ ಹಿತಕ್ಕಾಗಿ ಜಾರಿಗೆ ಬಂದಿದೆ ಎಂದು ಅವರು ವಿವರಿಸಿದರು.

ಪ್ರಸ್ತುತ ಹಾಲಿನ ದರ ಆಕಳು ಹಾಲಿಗೆ ₹38, ಎಮ್ಮೆ ಹಾಲಿಗೆ ₹52 ಆಗಿದ್ದು, ಎಮ್ಮೆ ಹಾಲಿಗೆ ಹೆಚ್ಚಿನ ಬೇಡಿಕೆ ಇರುವುದಾಗಿ ಹೇಳಿದರು. “ರೈತರಿಗೆ 10 ದಿನಗಳಲ್ಲಿ ಬಿಲ್ ಪಾವತಿಸುತ್ತಿದ್ದೇವೆ. ಹೈನುಗಾರಿಕೆಯಲ್ಲಿ ರೈತರನ್ನು ಆರ್ಥಿಕವಾಗಿ ಬಲಪಡಿಸಲು ಬೆಮುಲ್ ಸದಾ ಸಜ್ಜಾಗಿದೆ” ಎಂದು ಜಾರಕಿಹೊಳಿಯವರು ಖಚಿತಪಡಿಸಿದರು.

ಈ ವೇಳೆ ಅವರು ₹2.26 ಕೋಟಿ ವೆಚ್ಚದ 3.5 ಮೆಟ್ರಿಕ್ ಟನ್ ಸಾಮರ್ಥ್ಯದ ಮಲ್ಟಿ-ಫ್ಯೂಯಲ್ ಬಾಯ್ಲರ್‌ನ್ನು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಬೆಮುಲ್ ನಿರ್ದೇಶಕರು ಬಾಬು ಕಟ್ಟಿ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಡಾ. ಬಸವರಾಜ ಪರಣ್ಣವರ, ಬಾಬುರಾವ ವಾಘಮೋಡೆ, ವೀರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಬೋಜಿ, ಮಹಾದೇವ ಬಿಳಿಕುರಿ, ಸಂಜಯ ಶಿಂತ್ರೆ, ರಮೇಶ ಅಣ್ಣಿಗೇರಿ, ಸದೆಪ್ಪ ವಾರಿ, ಶಂಕರ ಇಟ್ನಾಳ, ಸವಿತಾ ಖಾನಪ್ಪಗೋಳ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎನ್. ಶ್ರೀಕಾಂತ ಉಪಸ್ಥಿತರಿದ್ದರು.


ಫೋಟೋ ಕ್ಯಾಪ್ಶನ್ – 18 ಬಿಜಿಎಂ – 01
ಬೆಳಗಾವಿ – ಬೆಮುಲ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರೈತರಿಗೆ ₹6 ಕೋಟಿ ಮೌಲ್ಯದ ಉಪಕರಣ ವಿತರಣೆ ನಡೆಸುತ್ತಿರುವುದು. ಬೆಮುಲ್ ಆಡಳಿತ ಮಂಡಳಿಯ ಸದಸ್ಯರು ಜೊತೆಗಿದ್ದಾರೆ.

ಫೋಟೋ ಕ್ಯಾಪ್ಶನ್ – 18 ಬಿಜಿಎಂ – 02
ಬೆಳಗಾವಿ – ಉಪಕರಣ ವಿತರಣೆ ಸಮಾರಂಭದಲ್ಲಿ ರೈತರಿಗೆ ಬೆಂಬಲದ ಭರವಸೆ ನೀಡುತ್ತಿರುವ ಶಾಸಕ ಬಾಲಚಂದ್ರ ಜಾರಕಿಹೊಳಿಯವರು. ಬೆಮುಲ್ ಆಡಳಿತ ಮಂಡಳಿಯ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

error: Content is protected !!