Headlines

ಈಜು – ಸಂಪೂರ್ಣ ಆರೋಗ್ಯಕ್ಕೆ ಶ್ರೇಷ್ಠ ವ್ಯಾಯಾಮ

ಬೆಳಗಾವಿ: ಇಂದಿನ ಯುಗದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ಕ್ರೀಡೆ ಮತ್ತು ವ್ಯಾಯಾಮದಲ್ಲಿ ಎಲ್ಲರಿಗೂ ಸಿಗುವ, ಅತಿ ಸುಲಭವಾದ ಮಾರ್ಗವೆಂದರೆ ಈಜು ಎಂದು ಐಎಎಸ್ ಅಭಿನವ ಜೈನ್ ಹೇಳಿದರು.

ಬೆಳಗಾವಿ ಪದವಿ ಪೂರ್ವ ಶಿಕ್ಷಣ ಇಲಾಖೆ, ಬಿ.ಇ ಸೋಸೈಟಿ, ಸತ್ಯಾತ್ಮತೀರ್ಥ ಎಜ್ಯುಕೇಶನ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಈಜು ಮತ್ತು ವಾಟರಪೊಲೊ ಕ್ರೀಡಾಕೂಟದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವೈದ್ಯರು ಹಾಗೂ ಫಿಟ್‌ನೆಸ್ ತಜ್ಞರು ಒಂದೇ ಸ್ವರದಲ್ಲಿ ಹೇಳುವ ಮಾತೇಂದರೆ – “ದೇಹ–ಮನಸ್ಸಿಗೆ ಸಮತೋಲನ ನೀಡುವ ಅತ್ಯುತ್ತಮ ವ್ಯಾಯಾಮ ಈಜು ಎಂದರು.


ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮಂಗೇಶ್ ಪವಾರ ಕ್ರೀಡಾಕೂಟವನ್ನು ‌ದೀಪಬೆಳಗುಸುವುದರ ಮೂಲಕ ಉದ್ಘಾಟಿಸಿ ಚಾಲನೆ ನೀಡಿದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ನಗರಸೇವಕ ಗಿರೀಶ್ ಧೋಂಗಡಿ, ಡಿಸಿಪಿ ನಾರಾಯಣ ಬರಮನಿ, ಬಿಇ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ, ಮುಂತಾದವರು ಹಾಜರಿದ್ದರು. ಸತ್ಯಾತ್ಮತೀರ್ಥ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ವಿಲಾಸ ಜೋಶಿ ಅಧ್ಯಕ್ಷತೆ ವಹಿಸಿದ್ದರು.
ಶ್ರೀಧರ ಹುಕ್ಕೇರಿ ಸ್ವಾಗತಿಸಿದರು. ಅಮೃತಾ ಪ್ರಯಾಗ ಕಾರ್ಯಕ್ರಮ ನಿರೂಪಿಸಿದರು. ಸುಧೀರ ಕುಲಕರ್ಣಿ ವಂದಿಸಿದರು.
ಈ‌ಸ್ಪರ್ಧೆಯಲ್ಲಿ ಬೇರೆ ಬೇರೆ ತಾಲೂಕಿನಿಂದ ಸುಮಾರು 40 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!