
ಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿ ಮೊಹಮ್ಮದ ರೋಷನ್
ಗಣೇಶ ಮೂರ್ತಿ ಪ್ರತಿಷ್ಠಾಪಿಸಿಭಾವೈಕ್ಯತೆಯ ಸಂದೇಶ ಸಾರಿದ ಜಿಲ್ಲಾಧಿಕಾರಿಬೆಳಗಾವಿ: ವಿವಿಧತೆಯಲ್ಲಿ ಏಕತೆಯ ಹಾಗೂ ಮಾನವೀಯತೆಯ ಬಗ್ಗೆ ಸಂದೇಶ ಸಾರುವ ಬೆಳಗಾವಿಯ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಹಿಂದೂಗಳ ಪವಿತ್ರಧಾರ್ಮಿಕ ಹಬ್ಬದ ಗಣೇಶ ಚತುರ್ಥಿಯಂದು ಗಣೇಶನ ಮೂರ್ತಯನ್ನು ಹೊತ್ತು ತಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಷ್ಠಾಪನೆ ಮಾಡುವ ಮೂಲಕ ಮತ್ತೊಮ್ಮೆ ಭಾವೈಕ್ಯದ ಸಂದೇಶ ಸಾರಿದ್ದಾರೆ. ಬುಧವಾರ ಜಿಲ್ಲಾಧಿಕಾರಿಗಳು ತಮ್ಮ ಪರಿವಾರದೊಂದಿಗೆ ಚೆನ್ನಮ್ಮ ವೃತ್ತದಲ್ಲಿ ಇರುವ ಗಣೇಶ ಮಂದಿರಕ್ಕೆ ಆಗಮಿಸಿ ಗಣೇಶ ಮೂರ್ತಿಗೆ ದೇವಾಲಯದಲ್ಲಿ ಅರ್ಚಕರಿಂದ ವಿಶೇಷ ಪೂಜೆ ಸಲ್ಲಿಸಿ, ಸಾಂಪ್ರದಾಯಿಕವಾಗಿ ಪರಿಸರಪ್ರೇಮಿ…