Headlines

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿ

ಲೋಕಾಯುಕ್ತ ಬಲೆಗೆ ಬಿದ್ದ ಭೂ ವಿಜ್ಞಾನಿ
ಬೆಳಗಾವಿ.
ಜಪ್ತಾದ ಮರಳನ್ನು ವಿಲೇವಾರಿ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ವಿಜ್ಞಾನಿ ಇಲಾಖೆಯ ಒಬ್ಬರು ಲೋಕಾಯುಕ್ತರು ಬೀಸಿದ ಬಲೆಗೆಸಿಕ್ಕಿ ಬಿದ್ದಿದ್ದಾರೆ.
ಫಿಯರ್ಾದಿದಾರ ಶೀತಲ ಗೋಪಾಲ ಸನದಿ (ಅಥಣಿ, ಹುಳಿಕಟ್ಟಿ ಗಲ್ಲಿ) ನೀಡಿದ ದೂರಿನ ಆಧಾರದ ಮೇಲೆ ಈ ಕಾಯರ್ಾಚರಣೆ ನಡೆದಿದೆ.

ಏನು ಘಟನೆ?
ಫಿಯರ್ಾದಿದಾರ ಶೀತಲ ಅವರ ಪರಿಚಯದ ಗುತ್ತಿಗೆದಾರ ಬಿ.ಕೆ. ಮಗದುಮ್ಮ ಅವರಿಗೆ, ಐನಾಪೂರ ಗ್ರಾಮದ ಎಸ್.ಸಿ ಕಾಲೋನಿಯಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ, ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿರುವ ಐಗಳಿ ಗ್ರಾಮದ ಸೀಜ್ ಮಾಡಿರುವ ಮರಳನ್ನು ಪೂರೈಸಲು ಅನುಮತಿ ಬೇಕಾಗಿತ್ತು.
ಈ ಮರಳಿಗೆ ಬೆಲೆ ನಿಗದಿ ಮಾಡಿ ವಿಲೇವಾರಿ ಆದೇಶ ನೀಡುವ ಸಲುವಾಗಿ ಭೂ ವಿಜ್ಞಾನಿಯು ರೂ. 50 ಸಾವಿರ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ನಡೆದ ಮಾತುಕತೆಯಲ್ಲಿ ಅದನ್ನು ರೂ. 15,000ಕ್ಕೆ ಇಳಿಸಲಾಗಿತ್ತು.
ಈ ಕುರಿತು ದೂರು ಸ್ವೀಕರಿಸಿದ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿ ತನಿಖಾಧಿಕಾರಿ ಎಸ್.ಎಚ್. ಹೊಸಮನಿ (ಪೊಲೀಸ್ ನಿರೀಕ್ಷಕರು) ಪ್ರಕರಣ ದಾಖಲಿಸಿಕೊಂಡು ಲಂಚ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ-2018)ರ ಕಲಂ 7(ಚಿ) ಅಡಿಯಲ್ಲಿ ಕ್ರಮ ಕೈಗೊಂಡಿದ್ದಾರೆ.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ ಮಾರ್ಗದರ್ಶನದಲ್ಲಿ ಡಿ.ಎಸ್.ಪಿ ಬಿ.ಎಸ್. ಪಾಟೀಲ, ಡಿ.ಎಸ್.ಪಿ ಭರತರಡ್ಡಿ ಎಸ್.ಆರ್ ಹಾಗೂ ಸಿಬ್ಬಂದಿಗಳ ವಿಶೇಷ ತಂಡ ದಾಳಿ ನಡೆಸಿ, ಆಪಾದಿತ ಅಧಿಕಾರಿಯನ್ನು ಲಂಚ ಸ್ವೀಕರಿಸುವ ವೇಳೆ ಬಲೆ ಬೀಸಿ ಬಂಧಿಸಿದೆ.
ಆಪಾದಿತನ ವಿರುದ್ಧ ಲಂಚ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

Leave a Reply

Your email address will not be published. Required fields are marked *

error: Content is protected !!