
ಪಾಲಿಕೆಯ ನಿವೇಶನ ಫಲಕಕ್ಕೆ ವಿರೋಧ – ಹಲ್ಲೆ ಮಾಡಿದ ಐವರಿಗೆ 6 ತಿಂಗಳ ಜೈಲು, 65 ಸಾವಿರ ದಂಡ
ಬೆಳಗಾವಿ:ನಗರ ಪಾಲಿಕೆಯ ಖಾಲಿ ನಿವೇಶನಕ್ಕೆ ಫಲಕ ಅಳವಡಿಸುವ ವೇಳೆ ನಡೆದ ಹಲ್ಲೆ ಪ್ರಕರಣದಲ್ಲಿ, ಐವರು ಆರೋಪಿಗಳಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯವು ತಲಾ ಆರು ತಿಂಗಳ ಜೈಲು ಶಿಕ್ಷೆ ಹಾಗೂ ಒಟ್ಟು 65 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ಪ್ರಕಟಿಸಿದೆ. ಶಿಕ್ಷೆಗೆ ಗುರಿಯಾದವರು ಬೆಳಗಾವಿ ತಾಲೂಕಿನ ಬಸವನ ಕುಡಚಿಯ ಕಿರಣ ಮಾಣಿಕ ಪಾಟೀಲ, ಅಮಿತ ಅಪ್ಪಣ್ಣ ಪಾಟೀಲ, ಶ್ರೀಕಾಂತ ದೇವೇಂದ್ರ ಪಾಟೀಲ, ಮಹೇಂದ್ರ ಬಸವಂತ ಪಾಟೀಲ ಮತ್ತು ಸುನೀಲ ಬಾಹು ಪಾಟೀಲ. ಘಟನೆ 2015ರ ಫೆಬ್ರವರಿ…