
ಗುರಿ ಸಾಧನೆಗಾಗಿ ವಿದ್ಯಾರ್ಥಿಗಳು ಪ್ರಾಥಮಿಕ ಗುರಿಯತ್ತ ಗಮನ ಹರಿಸಬೇಕು
ಪುಣೆ :“ಗುರಿಯತ್ತ ಮುನ್ನುಗ್ಗುವಾಗ ಪ್ರತಿ ವಿದ್ಯಾರ್ಥಿಯೂ ಮೊದಲಿಗೆ ತನ್ನ ಎದುರಿನ ಪ್ರಾಥಮಿಕ ಗುರಿಗಳನ್ನು ಆದ್ಯತೆಗೊಳಿಸಿದಾಗ ಮಾತ್ರ ಅಂತಿಮ ಗುರಿ ಸಾಧನೆ ಸುಲಭವಾಗುತ್ತದೆ,” ಎಂದು ಬೆಳಗಾವಿಯ ಹಿರಿಯ ಪತ್ರಕರ್ತ ಹಾಗೂ ಸಮಾಜಸೇವಕ ಲೂಯಿಸ್ ರೋಡ್ರಿಗ್ಸ್ ಅಭಿಪ್ರಾಯಪಟ್ಟರು ಮಂಗಳವಾರ ಸಂಜೆ ಪುಣೆಯ ‘ಸಂತುಲನ’ ಸಂಸ್ಥೆಯ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭಕ್ಕೆ ಪ್ರತಿಕ್ರಿಯೆ ನೀಡುತ್ತಿದ್ದ ಅವರು ಮಾತನಾಡಿದರು. ‘ಜಿಂದಾಬಾದ್’ ಎಂಬ ಸಂತುಲನ ಸಂಸ್ಥೆಯ ಘೋಷವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಸಂಸ್ಥಾಪಕ ಅಡ್ವೊಕೇಟ್ ಬಸ್ತು ರೇಗೇ, ಸಂಸ್ಥೆಯ ನಿರ್ದೇಶಕಿ ಅಡ್ವೊಕೇಟ್ ಪಲ್ಲವಿ ರೇಗೇ…