ವಿಸರ್ಜನೆ ಮಾರ್ಗ ಬದಲಾವಣ

ಬೆಳಗಾವಿ.
ಯಾವುದೇ ಅನಗತ್ಯ ಕಿರಿಕಿರಿ ಇಲ್ಲದೇ ಗಣೇಶೋತ್ಸವ ವಿಸರ್ಜನೆ ಮುಕ್ತಾಯಗೊಳ್ಳುತ್ತದೆ ಎನ್ನುವಾಗಲೇ ಗಣೇಶ ಮಂಡಳಿ ಮತ್ತು ಪೊಲೀಸ್ ನಡುವೆ ಮಾರ್ಗ ಬದಲಾವಣೆ ಹಗ್ಗ ಜಗ್ಗಾಟ ಶುರುವಾಗಿದೆ.
ಕಳೆದ ಬಾರಿಯಂತೆ ಪಾರಂಪರಿಕ ಮಾರ್ಗದಲ್ಲಿಯೇ ವಿಸರ್ಜನೆ ಮೆರವಣಿಗೆ ಸಾಗುತ್ತದೆ ಎಂದು ಗಣೇಶ ಮಂಡಳಿಗಳು ಸ್ಪಷ್ಟಪಡಿಸಿವೆ.
ಆದರೆ ಪೊಲೀಸರು ಮಾತ್ರ ತಾವು ಸೂಚಿಸಿದ ಮಾರ್ಗದಲ್ಲಿಯೇ ವಿಸರ್ಜನೆಗೆ ತೆರಳಬೇಕು ಎನ್ನುವ ಹುಕುಂನ್ನು ನೀಡಿದ್ದರಿಂದ ಒಂದು ರೀತಿಯ ಗೊಂದಲ ವಾತಾವರಣ ಶುರುವಾಗಿ ಬಿಟ್ಟಿದೆ.
ಇದೆಲ್ಲದರ ಜೊತೆಗೆ ಗಣೇಶೋತ್ಸವದಲ್ಲಿ ಎಲ್ಲಿಯೂ ಇಲ್ಲದ ಕಾನೂನನ್ನು ಮಂಡಳಿಗಳ ಮೇಲೆ ಹೇರುತ್ತಿರುವ ಪೊಲೀಸ್ ಇಲಾಖೆ ಬಗ್ಗೆ ವ್ಯಾಪಕ ಅಸಮಾಧಾನದ ಮಾತುಗಳು ಕೇಳಿ ಬರುತ್ತಿವೆ.
ಇತ್ತೀಚೆಗಷ್ಟೇ ಬೆಳಗಾವಿ ಶಹಾಪುರದ ಮಂಗಲ ಕಾರ್ಯಾಲಯದಲ್ಲಿ ಶಾಸಕ ಅಭಯ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಗಣೇಶ ಮಂಡಳಿಗಳ ಸಭೆಯಲ್ಲಿ ಪೊಲೀಸ್ ಕ್ರಮದ ಬಗ್ಗೆ ವ್ಯಾಪಕ ಅಸಮಾಧಾನದ ಮಾತುಗಳು ಕೇಳಿ ಬಂದಿದ್ದವು.
ಈ ಹಿನ್ನೆಲೆಯಲ್ಲಿ ಮಂಡಳಿಗಳ ಅಭಿಪ್ರಾಯವನ್ನು ಪೊಲೀಸ್ ಆಯುಕ್ತ ಭೂಷಣ ಬೋರಸೆ ಅವರ ಗಮನಕ್ಕೆ ತರುವ ಕೆಲಸವನ್ನು ಶಾಸಕ ಅಭಯ ಪಾಟೀಲ ಮಾಡಿದರು.

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾರ್ಗ ಬದಲಾವಣೆ ಒತ್ತಡ ತಂದರೆ ಹೊಣೆ ಪೊಲೀಸರೇ ಹೊಣೆಯಾಗುತ್ತಾರೆಂದರು.
ಗಣೇಶೋತ್ಸವದ ವಿಸರ್ಜನೆ ಮೆರವಣಿಗೆ ಪಾರಂಪರಿಕ ಮಾರ್ಗದಲ್ಲೇ ಸಾಗಬೇಕು, ಬದಲಾವಣೆ ಮಾಡುವ ಯಾವುದೇ ಪ್ರಯತ್ನ ಗಂಭೀರ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಎಚ್ಚರಿಸಿದರು.
ಜನಸಾಮಾನ್ಯರು ಭಾರಿ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿರುವುದರಿಂದ, ಅವರ ಭಾವನೆಗೆ ತಕ್ಕಂತೆ ಪಾರಂಪರಿಕ ಮಾರ್ಗವೇ ಉಳಿಯಬೇಕು ಎಂದು ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದರು.

ಆದರೆ ಈಗ ನಗರ ಪೊಲೀಸರು ಈ ಬಾರಿ ಹೊಸ ನಿರ್ಭಂಧನೆಗಳನ್ನು ಹೇರಿದ್ದಾರೆ. ಇದರಿಂದ ಗಣೇಶೋತ್ಸವ ಮಂಡಳಿಗಳು ಅಸಮಾಧಾನಗೊಂಡು ತಮ್ಮ ಅಳಲುಗಳನ್ನು ನನ್ನ ಗಮನಕ್ಕೆ ತಂದಿವೆ. ಕೆಲ ಮಂಡಳಿ ಸದಸ್ಯರಿಂದ ಖಾಲಿ ಸ್ಟಾಂಪ್ ಪೇಪರ್ ಮೇಲೆ ಸಹಿ ಹಾಕಲು ಒತ್ತಾಯಿಸಿ ಬೆದರಿಕೆಯೊಡ್ಡಿದ ಘಟನೆ ಅತೀ ವಿಷಾದನೀಯ ಎಂದು ಹೇಳಿದರು.
ಯಾವುದೇ ಗಣೇಶೋತ್ಸವ ಮಂಡಳಿಗೆ ಪಾರಂಪರಿಕ ಮೆರವಣಿಗೆ ಮಾರ್ಗ ಬದಲಾವಣೆ ಮಾಡುವಂತೆ ಒತ್ತಾಯಿಸಬಾರದು ಎಂದು ಹೇಳಿರುವ ಅವರು, ಪಟಾಕಿ ಸಿಡಿಸಲು ಹಾಗೂ ಧ್ವನಿವ್ಯವಸ್ಥೆ ಬಳಸಲು ವಿಸರ್ಜನೆ ಸ್ಥಳದವರೆಗೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಹೊರ ಜಿಲ್ಲೆಗಳಿಂದ ಬಂದಿರುವ ಪೊಲೀಸರ ಹಸ್ತಕ್ಷೇಪದಿಂದ ಅನಗತ್ಯ ಗಲಾಟೆ ಉಂಟಾಗುವ ಭೀತಿ ಇದೆ ಎಂದು ಶಾಸಕ ಅಭಯ ಪಾಟೀಲರು ಹೇಳಿದರು.

ಮಹಾನಗರ ಪಾಲಿಕೆ ಪ್ರತಿವರ್ಷ ವಿಸರ್ಜನೆ ಮೆರವಣಿಗೆಗೆ ಅಗತ್ಯ ವ್ಯವಸ್ಥೆ ಮಾಡುತ್ತದೆ. ಜಿಲ್ಲಾ ಆಡಳಿತದಿಂದ ಮಹಾಪ್ರಸಾದ ನೀಡಲು ವಿರೋಧವಿಲ್ಲ. ಆದರೆ ಅದಕ್ಕೆ ಜಿಲ್ಲಾಧಿಕಾರಿಗಳ ಬಳಿ ಇರುವ ನಿಧಿ ಅದಕ್ಕೆ ಬಳಸಬಹುದು. ಆದರೆ ಹೊಸದಾಗಿ ಬಂದಿರುವ ಡಿಸಿ ಹಾಗೂ ಪೊಲೀಸ್ ಆಯುಕ್ತರು ಕೆಲವರಿಂದ ತಪ್ಪು ಮಾಹಿತಿ ಪಡೆದಿದ್ದಾರೆ ಎಂದು ಶಾಸಕರು ಕಿಡಿಕಾರಿದರು.
ಕೆರೆ ಆಳ ದ್ವಿಗುಣ..!
ಈ ಬಾರಿ ಗಣೇಶೋತ್ಸವದ ನಂತರ ಹೊಸ ಕಪಿಲೇಶ್ವರ ಕೆರೆಯ ಆಳವನ್ನು ದ್ವಿಗುಣಗೊಳಿಸಲಾಗುವುದು ಎಂದು ಶಾಸಕ ಅಭಯ ಪಾಟೀಲ ಸ್ಪಷ್ಟಪಡಿಸಿದರು.
ಹಳೆಯ ಕೆರೆಯ ಅಗಲವನ್ನೂ ಹೆಚ್ಚಿಸುತ್ತೇವೆ. ಹೊಸ ಕೆರೆಯ ಸಾದ್ಯತೆ ಇದ್ದರೂ ಜನರ ಹೃದಯ ಬಡಿತವು ಪಾರಂಪರಿಕ ವಿಸರ್ಜನೆ ಸ್ಥಳಗಳಲ್ಲೇ ಇದೆ. ಹೀಗಾಗಿ ಆ ಜನರ ಭಾವನೆಗಳನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.
ವಿಸರ್ಜನೆ ಮೆರವಣಿಗೆಗೆ ಬಿಗಿ ಪೊಲೀಸ್ ಭದ್ರತೆ..!
ನಗರದ ಗಣೇಶ ಮೂತರ್ಿ ವಿಸರ್ಜನೆ ಮೆರವಣಿಗೆ ಸೆಪ್ಟೆಂಬರ್ 6 (ಶನಿವಾರ)ರಿಂದ ಆರಂಭವಾಗಲಿದ್ದು, ಮುಂದಿನ ದಿನವೂ ಮುಂದುವರಿಯುವ ನಿರೀಕ್ಷೆ ಇದೆ. ಈ ಮೆರವಣಿಗೆಯ ಭದ್ರತೆಗಾಗಿ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಭೂಷಣ್ ಬೊರಸೆ ತಿಳಿಸಿದರು.
ಮೆರವಣಿಗೆಯ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮತ್ತು ಕರ್ತವ್ಯದಲ್ಲಿರುವ ಪೊಲೀಸರಿಗೆ ಅಗತ್ಯ ವಿಶ್ರಾಂತಿ ಸಿಗುವಂತೆ ಪಾಳಿಗಳಲ್ಲಿ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಬುಧವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಸರ್ಜನೆ ಮೆರವಣಿಗೆಯ ಭದ್ರತಾ ವ್ಯವಸ್ಥೆಯನ್ನು ಕನರ್ಾಟಕ ರಾಜ್ಯ ರಿಸವರ್್ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಸಂದೀಪ್ ಪಾಟೀಲ ಮೇಲ್ವಿಚಾರಣೆ ಮಾಡಲಿದ್ದಾರೆಂದರು,

ಈ ಸಂದರ್ಭದಲ್ಲಿ 6 ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಅಧೀಕ್ಷಕರು
25 ಡಿವೈಎಸ್ಪಿ ಗಳು, 87 ವಲಯ ಇನ್ಸ್ಪೆಕ್ಟರ್ಗಳು, 240 ಪಿಎಸ್ಐ, ಎಎಎಸ್ಐಗಳು 1,947 ಹೆಡ್ ಕಾನ್ಸ್ಟೆಬಲ್ ಹಾಗೂ ಪೊಲೀಸ್ ಕಾನ್ಸ್ಟೆಬಲ್ಗಳು, ರ್ಯಾಪಿಡ್ ಆಕ್ಷನ್ ಫೋಸರ್್ನ 1 ಕಂಪನಿ, ಕನರ್ಾಟಕ ರಾಜ್ಯ ರಿಸವರ್್ ಪೊಲೀಸ್ನ 10 ಕಂಪನಿಗಳು,
ಶಸ್ತ್ರಸಜ್ಜಿತ ಪೊಲೀಸ್ನ 9 ಕಂಪನಿಗಳು, ಹೋಮ್ಗಾಡರ್್ ಪಡೆ
ಎಲ್ಲರೂ ಕರ್ತವ್ಯದಲ್ಲಿರಲಿದ್ದಾರೆ ಎಂದು ವಿವರಿಸಿದರು.
ನಗರದಲ್ಲಿ ಇರುವ ಎಲ್ಲಾ ವಿಸರ್ಜನೆ ಕೆರೆಗಳಲ್ಲಿ ಬೆಳಕಿನ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ಮಾಡಿದ್ದು, ಗ್ರಾಮಾಂತರ ಭಾಗದಲ್ಲಿ ಗುರುತಿಸಲಾದ ಸ್ಥಳಗಳಲ್ಲೇ ಮೂತರ್ಿಗಳನ್ನು ವಿಸಜರ್ಿಸಲಾಗುವುದು. ಟ್ರಾಫಿಕ್ ನಿಯಂತ್ರಣಕ್ಕಾಗಿ ಬೆಂಗಳೂರು ಮತ್ತು ಮೈಸೂರು ಪೊಲೀಸರು ಸಹಕಾರ ನೀಡಲಿದ್ದಾರೆ. ಹೊರ ಜಿಲ್ಲೆಯಿಂದ ಬರುವ ಭಕ್ತರಿಗೆ ವಾಹನ ನಿಲುಗಡೆ ಮಾಡಲು 17 ಸ್ಥಳಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಹೆಸ್ಕಾಂಗೆ ಎತ್ತರದ ಗಣೇಶ ಮೂತರ್ಿಗಳ ಹಿನ್ನೆಲೆ ವಿದ್ಯುತ್ ಕೇಬಲ್ಗಳನ್ನು ಎತ್ತುವಂತೆ ಸೂಚಿಸಲಾಗಿದೆ. ಮೆರವಣಿಗೆ ಮಾರ್ಗದ ಹೆಚ್ಚಿನ ಕಾಮಗಾರಿ ಪೂರ್ಣಗೊಂಡಿದೆ. ಪಟಾಕಿಗಳನ್ನು ತೆರೆದ ಸ್ಥಳಗಳಲ್ಲಿ ಮಾತ್ರ ಸಿಡಿಸಲು ಅನುಮತಿ ಇದೆ. ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬೊರಸೆ ಹೇಳಿದರು.
ಒತ್ತಡ ಇಲ್ಲ…!
ಗಣೇಶೋತ್ಸವ ಮಂಡಳಿಗಳಿಗೆ ಮೆರವಣಿಗೆ ಮಾರ್ಗ ಬದಲಾವಣೆ ಮಾಡುವಂತೆ ಒತ್ತಡ ಹಾಕಲಾಗುವುದಿಲ್ಲ. ಕಪಿಲೇಶ್ವರ ಕೆರೆಯ ಬಳಿ ಅಡಚಣೆ ಕಂಡು ಬಂದಲ್ಲಿ, ಜಕ್ಕೇರಿ ಹೊಂಡದತ್ತ ಸಾಗಲು ಆಯ್ಕೆ ನೀಡಲಾಗುವುದು ಎಂದು ಪೊಲೀಸ್ ಆಯುಕ್ತ ಬೋರಸೆ ಹೇಳಿದರು.
ಮೆರವಣಿಗೆಗಳನ್ನು ಶೀಘ್ರ ಆರಂಭಿಸುವಂತೆ ಮಂಡಳಿಗಳಿಗೆ ಮನವಿ ಮಾಡುತ್ತೇವೆ, ಹೀಗಾಗಿ ಅವು ಬೇಗನೆ ಅಂತ್ಯಗೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು.