
ಬಾಲ್ಯ ಗರ್ಭಿಣಿ – ಸರ್ಕಾರದ ವಿಫಲತೆಯ ಸ್ಪಷ್ಟ ಸಾಕ್ಷಿ
ಬೆಳಗಾವಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯರು ಕಳೆದ ನಾಲ್ಕು ವರ್ಷದಲ್ಲಿ ನಿರಂತರ ಹೆಚ್ಚುತ್ತಿರುವ ಪ್ರಕರಣಗಳು. ಕ್ರಮಕ್ಕೆ ಮುಂದಾಗದ ಪೊಲೀಸ್ ಇಲಾಖೆ. ಆಫ್ ದಿ ರೆಕಾರ್ಡ ಕಥೆ ಹೇಳುತ್ತಿರುವ ಪೊಲೀಸ್ ಅಧಿಕಾರಿಗಳು ಬೆಳಗಾವಿ. ಶಿಕ್ಷಣ, ಕೃಷಿ, ಕೈಗಾರಿಕೆಗಳಲ್ಲಿ ರಾಜ್ಯದ ಮುಂಚೂಣಿಯಲ್ಲಿರುವ ಈ ಜಿಲ್ಲೆ ಈಗ ಒಂದು ಕರಾಳ ಸಾಮಾಜಿಕ ಸಮಸ್ಯೆಯಿಂದ ಎದುರಾಗಿರುವ ಅಪಖ್ಯಾತಿ ಗಂಭೀರ ಚಿಂತನೆಗೆ ಕಾರಣವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ 1477 ಬಾಲ ಗರ್ಭಿಣಿಯಾಗಿರುವುದು ಸಮಾಜದ ಮೌನ ಸಮ್ಮತಿ ಮತ್ತು ಸರ್ಕಾರಿ ನೀತಿ-ನಿಷ್ಕ್ರಿಯತೆಯ ಭಯಾನಕ ಮುಖವನ್ನು…