ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ- ಬಾಲಚಂದ್ರ

ಹುಕ್ಕೇರಿ ಹಾಲು ಒಕ್ಕೂಟ: ರೈತರ ಆಶೀರ್ವಾದದೊಂದಿಗೆ ಬಿಡಿಸಿಸಿ ಬ್ಯಾಂಕ್‌ನಲ್ಲಿ ಬಹುಮತದ ಗುರಿ

ಬೆಳಗಾವಿ: ಅಕ್ಟೋಬರ್ 19 ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಮ್ಮ ಫೆನಲ್ ತಂಡ ಸಂಪೂರ್ಣ ಅಧಿಕಾರಕ್ಕೆ ಬರಲಿದೆ ಎಂದು ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ಆತ್ಮವಿಶ್ವಾಸದಿಂದ ಹೇಳಿದರು. ಸುಮಾರು 12 ಜನ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ, ಅವರು ಬ್ಯಾಂಕಿನ ನಿರ್ವಹಣೆಯ ಚುಕ್ಕಾಣಿ ನೇರವಾಗಿ ಹಿಡಿಯಲಿದ್ದಾರೆ ಎಂದರು.

ಗುರುವಾರ, ಹುಕ್ಕೇರಿ ಪಟ್ಟಣದ ರವದಿ ಫಾರ್ಮ್ ಹೌಸ್‌ನಲ್ಲಿ, ಜಿಲ್ಲಾ ಹಾಲು ಒಕ್ಕೂಟದ ಆಶ್ರಯದಲ್ಲಿ ಜರುಗಿದ 2024-25ನೇ ಸಾಲಿನ ಪ್ರಾದೇಶಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ದೇವರು ಮತ್ತು ರೈತರ ಆಶೀರ್ವಾದದಿಂದ ಈ ಸಲ ನಮ್ಮ ಗುಂಪು ಸಂಪೂರ್ಣ ಬಹುಮತ ಪಡೆಯುವುದು ಖಚಿತ. ಬ್ಯಾಂಕ್ ರೈತರಿಗಾಗಿಯೇ, ಅವರ ಅಭಿವೃದ್ಧಿ ನಮ್ಮ ಗುರಿ” ಎಂದರು.


ರೈತರ ಆರ್ಥಿಕ ಬಲವರ್ಧನೆ – ನಮ್ಮ ಪ್ರಾಥಮಿಕತೆ

ಬಾಲಚಂದ್ರ ಜಾರಕಿಹೊಳಿಯವರ ಪ್ರಕಾರ, ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸುವ ಮೂಲಕ ಸಂಘಗಳು ಮತ್ತು ರೈತರ ಆರ್ಥಿಕ ಬಲವರ್ಧನೆಗೆ ಮಹತ್ವ ನೀಡಲಾಗುತ್ತಿದೆ. “ಯಾರೂ ಏನೇ ಹೇಳಲಿ, ಬ್ಯಾಂಕಿನ ಅಧಿಕಾರ ಮತ್ತು ನಿರ್ವಹಣೆಯ ಹಕ್ಕು ನಮ್ಮವರೇ” ಎಂದು ಅವರು ಸ್ಪಷ್ಟಪಡಿಸಿದರು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳು ಪ್ರಬಲ ಲಿಂಗಾಯತ ಸಮುದಾಯಕ್ಕೆ ಮೀಸಲಿಟ್ಟಿವೆ. ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರು, ಹಿರಿಯ ನಾಯಕರಾದ ಡಾ. ಪ್ರಭಾಕರ ಕೋರೆ, ರಮೇಶ್ ಜಾರಕಿಹೊಳಿಯವರು ಮತ್ತು ಅಣ್ಣಾಸಾಹೇಬ ಜೊಲ್ಲೆಯವರು ನಿರ್ದೇಶಕರಾಗಿ ಬೆಂಬಲ ನೀಡುತ್ತಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರಚಾರ ಅಭಿಯಾನ ಯಶಸ್ವಿಯಾಗಿ ನಡೆಸಲಾಗಿದೆ.


ಹಾಲು ಒಕ್ಕೂಟ: ಶತಮಾನೋತ್ಸವದಲ್ಲಿ ಹೊಸ ಪ್ರಪಂಚ

ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷನಾಗಿ ಅವರು ಕೇವಲ 68 ಲಕ್ಷ ರೂ. ಲಾಭದೊಡನೆ ಸಂಸ್ಥೆಯನ್ನು ಸ್ವೀಕರಿಸಿ, 13 ಕೋಟಿ ರೂ. ಲಾಭಕ್ಕೆ ಮುನ್ನಡೆಸಿದ್ದಾರೆ. ಹೈನುಗಾರ ರೈತರಿಗೆ 60% ರಿಯಾಯಿತಿ ದರದಲ್ಲಿ ಸೌಲಭ್ಯಗಳು, ಹತ್ತು ದಿನಗಳಲ್ಲಿ ಖಾತೆಗಳಿಗೆ ಬಿಲ್ ಪಾವತಿ – ಎಲ್ಲಾ ಹಾಲು ಒಕ್ಕೂಟದ ವೈಶಿಷ್ಟ್ಯ.

“ಹಲವಾರು ಯೋಜನೆಗಳೊಂದಿಗೆ ರೈತರ ಆರ್ಥಿಕ ಸ್ವಾವಲಂಬನೆಗೆ ಪ್ರಯತ್ನಿಸುತ್ತೇವೆ. ಬೆಳಗಾವಿ ಹಾಲು ಒಕ್ಕೂಟವನ್ನು ರಾಜ್ಯದ ಮಾದರಿ ಸಂಸ್ಥೆಯಾಗಿ ಮಾರ್ಪಡಿಸುವುದು ನಮ್ಮ ಉದ್ದೇಶ” ಎಂದು ಅವರು ಹೇಳಿದರು.


ಗ್ರಾಮದ ಸಹಕಾರಿ ಸಂಘಗಳಲ್ಲಿಯೂ ಶಕ್ತಿ ಪ್ರದರ್ಶನ

ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ದಿ. ಅಪ್ಪಣ್ಣಗೌಡ ಪಾಟೀಲ ಸಹಕಾರ ಫೆನಲ್ ಮೂಲಕ ನಮ್ಮ ಅಭ್ಯರ್ಥಿಗಳು ಬಹುಮತದಿಂದ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

ರಾಯಪ್ಪ ಡೂಗ, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ, ಪ್ರಕಾಶ ಅಂಬೋಜಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಹೀರಾ ಶುಗರ್ಸ್ ಅಧ್ಯಕ್ಷ ಅಜ್ಜಪ್ಪ ಕಲ್ಲಟ್ಟಿ ಹಲವಾರು ಸಹಕಾರಿ ಮುಖಂಡರು ಹಾಜರಿದ್ದರು.

.

Leave a Reply

Your email address will not be published. Required fields are marked *

error: Content is protected !!