ಬೆಳಗಾವಿ ಮೇಲೆ ಖಾಕಿ ಹದ್ದಿನ ಕಣ್ಣು.
ಗಣೇಶೋತ್ಸವ ವಿಸರ್ಜನಾ ಮೆರವಣಿಗೆ.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ- ಶುಭ ಬಿ. ಆಯುಕ್ತರು. ಬೆಳಗಾವಿ ಮಹಾನಗರ ಪಾಲಿಕೆ.
ಕಿಡಿಗೇಡಿತನ ಮಾಡಿದರೆ ಕಠಿಣ ಕ್ರಮ. ಭೂಷಣ ಗುಲಾಬರಾವ್ ಬೋರಸೆ.
ಪೊಲೀಸ್ ಆಯುಕ್ತರು.

ಬೆಳಗಾವಿ:
ಹನ್ನೊಂದು ದಿನಗಳ ಸಂಭ್ರಮದ ಶ್ರೀ ಗಣೇಶೋತ್ಸವ ನಾಳೆ (ಸೆಪ್ಟೆಂಬರ್ 6) ಅಂತಿಮ ಘಟ್ಟಕ್ಕೆ ತಲುಪುತ್ತಿದೆ. ನಗರವು ಹಬ್ಬದ ಕಲರವ, ಭಕ್ತಿ, ಮೆರವಣಿಗೆ ರೂಪಕ ವಾಹನಗಳು ಮತ್ತು ಭಕ್ತಿ ಭಾವದಿಂದ ತುಂಬಿದ ಗಣೇಶ ಮೂರ್ತಿಗಳೊಂದಿಗೆ ಜೀವಂತವಾಗಿದೆ.

ವಿಸರ್ಜನಾ ಮೆರವಣಿಗೆ ಮಾರ್ಗ ಬದಲಾವಣೆ, ಡಿಜೆ ಬ್ಯಾನ್ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳ ಹಿನ್ನೆಲೆ ಪೊಲೀಸ್ ಇಲಾಖೆ ಸಂಪೂರ್ಣ ಹದ್ದಿನ ಕಣ್ಣಿನಡಿ ಬದ್ಧವಾಗಿದೆ.
ಸಿಸಿಟಿವಿ ಮತ್ತು ಸಮವಸ್ತ್ರವಿಲ್ಲದ ಪೊಲೀಸ್ ಸಿಬ್ಬಂದಿ ಹೆಚ್ಚುವರಿ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ.

6 ಎಸ್ಪಿ/ಎಎಸ್ಪಿ, 25 ಡಿಎಸ್ಪಿ, 87 ಸಿಪಿಐ, 240 ಪಿಎಸ್ ಐ ಮತ್ತು ಕೆಎಸ್ಆರ್ಪಿ ಅರೆಮೀಸಲು ಪಡೆಗಳು ಬಂದೋ ಬಸ್ತಿಯಲ್ಲಿತ್ತವೆ
: ಹಿರಿಯ ಪೊಲೀಸ್ ಅಧಿಕಾರಿ ಸಂದೀಪ ಪಾಟೀಲ, ನಿಯಂತ್ರಣ ಸಮಿತಿ: ಪೊಲೀಸ್ ಆಯುಕ್ತ ಭೂಷಣ ಗುಲಾಬರಾವ್ ಬೋರಸೆ, ಡಿಸಿಪಿ ನಾರಾಯಣ ಬರಮನಿ ನೇತೃತ್ವ ವಹಿಸಲಿದ್ದಾರೆ.

8 ಪ್ರಮುಖ ಹೊಂಡಗಳು
ಪೂರಕ ಹೊಂಡಗಳನ್ನು ಸಜ್ಜುಗೊಳಿಸಲಾಗಿದೆ: ಹಳೆ, ಹೊಸ ಕಪಿಲೇಶ್ವರ, ಜಕ್ಕೇರಿ, ಅನಗೋಳ ಲಾಲ್ ತಲಾವ್, ಕಲ್ಮೇಶ್ವರ, ಮಜಗಾಂವ ಬ್ರಹ್ಮ ದೇವ ಮಂದಿರ, ಕೋಟೆಕೆರೆ, ಕಣಬರ್ಗಿ ಹೊಂಡಗಳಲ್ಲಿ ವಿಸರ್ಜನೆ ನಡೆಯಲಿದೆ.
ಬೆಳಕು, ಕುಡಿಯುವ ನೀರು, ಸ್ವಚ್ಛತೆ, ಭದ್ರತೆ ಎಲ್ಲ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ.
ದೊಡ್ಡ ಪ್ರತಿಮೆಗಳ ವಿಸರ್ಜನೆಗೆ 24 ಕ್ರೇನ್ ಮೀಸಲಿಡಲಾಗಿದೆ. 20 ಈಜುಗಾರರು ನಿಯೋಜನೆ ಜೊತೆಗೆ ಹೊಂಡ ಸಜ್ಜುಗೊಳಿಸಲು ವೆಚ್ಚ: 66.80 ಲಕ್ಷ. ವೆಚ್ಚ ಮಾಡಲಾಗಿದೆ.

ಮೆರವಣಿಗೆ ಮಾರ್ಗ:
ಮಧ್ಯಾಹ್ನ 2 ಗಂಟೆಗೆ ನರಗುಂದಕರ ಭಾವೆ ಚೌಕದಿಂದ ಪ್ರಾರಂಭ, ಮಾರ್ಗ:
ಮಾರುತಿ ಗಲ್ಲಿ ಹುತಾತ್ಮ ಚೌಕ ರಾಮದೇವ ಗಲ್ಲಿ ಸಮಾದೇವಿ ಗಲ್ಲಿ ಎನ್.ಡಿ. ಖೂಟ ಸಿಗ್ನಲ್ ಸಂಭಾಜಿ ಚೌಕ (ಬೋಗಾರವೇಸ್) ರಾಮಲಿಂಗಖಿಂಡ ಗಲ್ಲಿ ಟಿಳಕಚೌಕ ಹೇಮುಕಲಾನಿ ಚೌಕ ಶನಿಮಂದಿರ ಕಪಿಲೇಶ್ವರ ಫೈ ಓವರ್ ರೇಣುಕಾ ಹೋಟೆಲ್ ಕ್ರಾಸ್ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆ.
ಮಹಾನಗರ ಪಾಲಿಕೆಯ ಆಯುಕ್ತೆ ಶುಭ ಬಿ ಏನಂತಾರೆ?.

ಪ್ರತಿಯೊಬ್ಬರಿಗೂ ಜವಾಬ್ದಾರಿ ನೀಡಿದ್ದು, ಯಾವುದೇ ತೊಂದರೆ ಇಲ್ಲದಂತೆ ನೋಡಿಕೊಳ್ಳಲಾಗಿದೆ.
ಪ್ರತಿಹೊಂಡದಲ್ಲಿ ನಿಗದಿತ ಸಿಬ್ಬಂದಿ, ಬೆಳಕು, ಕುಡಿಯುವ ನೀರು, ಸ್ವಚ್ಛತೆ, ಭದ್ರತೆ ಎಲ್ಲವೂ ಪೂರ್ಣವಾಗಿದೆ.
ಬಾಲಬಿಚ್ಚಿದ್ರೆ ಕ್ರಮ ಖಚಿತ.

ಗಣೇಶೋತ್ಸವ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ಖಡಕ್ ಬಂದೋಬಸ್ತಿ ಮಾಡಲಾಗಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಕೆಲವೊಂದು ಕ್ರಮಗಳನ್ನು ಜರುಗಿಸಲಾಗಿದೆ ಯಾರಾದರೂ ಬಾಲಬಿಚ್ಚಿದರೆ ಕ್ರಮ ಖಂಡಿತ.
ಭೂಷಣ ಗುಲಾಬರಾವ್ ಬೋರಸೆ. ಪೊಲೀಸ್ ಆಯುಕ್ತರು. ಬೆಳಗಾವಿ.

