ಗ್ರಹಣದ ನಡುವೆಯೇ ಗಣೇಶ ವಿಸರ್ಜನೆ ಸಂಭ್ರಮ
ಬೆಳಗಾವಿ, ಸೆನಗರದ ಸಡಗರ–ಸಂಭ್ರಮಕ್ಕೆ ಚಂದ್ರಗ್ರಹಣವೂ ತಡೆದಿಲ್ಲ. ನಿನ್ನೆ (ಸೆ. 6) ಸಂಜೆ 5 ಗಂಟೆಗೆ ಆರಂಭವಾದ ಗಣೇಶ ವಿಸರ್ಜನೆ ಮೆರವಣಿಗೆ ಇಂದಿಗೂ ಮುಂದುವರಿಯುತ್ತಿದ್ದು, ನಗರದ ಬೀದಿಗಳು ಭಕ್ತಿ-ಭಾವನೆಯಿಂದ ನಾದಮಯವಾಗಿವೆ. ಮೆರವಣಿಗೆ ವೈಭವ ನಗರದ ಪ್ರಮುಖ ರಸ್ತೆಗಳಲ್ಲಿ ಗಣೇಶ ಭಕ್ತರ ಹರ್ಷೋದ್ಗಾರ, ಡಿಜೆ ನಾದ, ತಾಳ-ಮದ್ದಳೆ ಸದ್ದು, ಭಜನಾ–ಕೀರ್ತನೆಗಳ ಸೊಗಸು ಒಟ್ಟಾಗಿ ಸಂಭ್ರಮದ ಚಿತ್ರಣ ಮೂಡಿಸಿದೆ. ಅನೇಕ ಮೂರ್ತಿಗಳು ಹೂಮಾಲೆಗಳಿಂದ, ವಿದ್ಯುತ್ ಬೆಳಕಿನಿಂದ ಅಲಂಕರಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದು, ಸಾವಿರಾರು ಮಂದಿ ವೀಕ್ಷಕರಾಗಿ ಸೇರುತ್ತಿದ್ದಾರೆ. ಇನ್ನೂ 24 ಮೂರ್ತಿಗಳ ವಿಸರ್ಜನೆ…

