ಜಾತಿ, ಉಪಜಾತಿಯಲ್ಲಿ ಕ್ರಿಶ್ಚಿಯನ್ ಸೇರ್ಪಡೆ.
*ಹಿಂದೂ ಸಮಾಜದ ಅಸ್ತಿತ್ವದ ಪ್ರಶ್ನೆ.*
ಹಿಂದೂ ವಿರೋಧಿ ಎನ್ನುವುದನ್ನು ತೋರಿಸಿಕೊಟ್ಟ ಸರ್ಕಾರ.
ಬೆಳಗಾವಿಯಿಂದಲೇ ಹೋರಾಟ ಶುರು.
17 ರಂದೇ ಹಿಂದೂ ಸಮಾಜದವರ ದುಂಡು ಮೇಜಿನ ಸಭೆ.
ಸಭೆಯಲ್ಲಿ ಮಹತ್ವದ ತೀರ್ಮಾನ.
—
ಹಿಂದೂ ಜಾಗರಣಾ ವೇದಿಕೆ.
ದುಂಡು ಮೇಜಿನ ಸಭೆ
ದಿನಾಂಕ: 17.09.2025, ಬೆಳಗ್ಗೆ 10:30
ಸ್ಥಳ: ಗಾಂಧಿ ಭವನ, ಕಾಲೇಜ್ ರೋಡ್, ಬೆಳಗಾವಿ
ರಾಜ್ಯಪಾಲರಿಗೆ ಮನವಿ ಹಾಗೂ ಮುಂದಿನ ಹೋರಾಟದ ತಂತ್ರ ರೂಪಿಸಲು ಪ್ರಮುಖ ಸಭೆ.

—
ಇ ಬೆಳಗಾವಿ ವಿಶೇಷ
ಬೆಳಗಾವಿ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಪ್ರಕಟಿಸಿರುವ ಜಾತಿ-ಉಪಜಾತಿ ಪಟ್ಟಿಯಲ್ಲಿ ಹಿಂದೂ ಜಾತಿಗಳ ಪಕ್ಕದಲ್ಲಿ ಕ್ರಿಶ್ಚಿಯನ್ ಉಪಜಾತಿ ತೂರಿಬಿಡಲಾಗಿದೆ.
ಬ್ರಾಹ್ಮಣರಿಂದ ಹಿಡಿದು ಕುರುಬ, ಲಂಬಾಣಿ,, ಬಂಜಾರ, ಬಣಜಿಗ, ಬೆಸ್ತರು, ಬಿಲ್ಲವ, ಬುಡುಗ, ದೇವಾಂಗ, ಈಡಿಗ, ಜಂಗಮ, ಗೊಲ್ಲ ಮುಂತಾದ ನೂರಾರು ಸಮುದಾಯಗಳ ಪಕ್ಕದಲ್ಲಿ ಕ್ರಿಶ್ಚಿಯನ್ ಹೆಸರನ್ನು ಜೋಡಿಸಿರುವುದು ಹಿಂದೂ ಸಮಾಜದ ಧಾಮರ್ಿಕ ಗುರುತನ್ನೇ ಅಳಿಸುವ ಕುತಂತ್ರ ಎಂದು ಸಮಾಜ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಂದೂ ವಿರೋಧಿ ಸರ್ಕಾರ
ಬೆಳಗಾವಿಯ ಹಿಂದೂ ಜನ ಜಾಗೃತಿ ವೇದಿಕೆ ಈಗ ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ. ಇದು ಹಿಂದೂ ಸಮಾಜವನ್ನು ದುರ್ಬಲಗೊಳಿಸುವ, ಭಿನ್ನಮತ ಬೀರುವ ಯೋಜಿತ ಪ್ರಯತ್ನ ಎಂದು ಜರಿದಿದ್ದಾರೆ.
ಹಿಂದೂ ಜಾತಿಗಳ ಅಸ್ತಿತ್ವವನ್ನು ಕೃತಕವಾಗಿ ಕ್ರಿಶ್ಚಿಯನ್ ಮಾಡುವ ಕೆಲಸವೇ ರಾಜ್ಯ ಸರ್ಕಾರದ ನೀತಿ ಎಂಬ ಗಂಭೀರ ಆರೋಪವನ್ನು ಮಾಡಲಾಗಿದೆ.

ಯಾವ ಜಾತಿಗೆ ಕ್ರಿಶ್ಚಿಯನ್ ಸೇರಿದೆ ಗೊತ್ತೆ?*
ಬ್ರಾಹ್ಮಣ- ಬ್ರಾಹ್ಮಣ ಕ್ರಿಶ್ಚಿಯನ್ (ಕೋಡ್ 209)
ಬಂಜಾರ- ಬಂಜಾರ ಕ್ರಿಶ್ಚಿಯನ್ (ಕೋಡ್ 125, 135)
ಜಡಗ – ಜಡಗ ಕ್ರಿಶ್ಚಿಯನ್ (ಕೋಡ್ 217, 489)
ಕುರುಬ – ಕುರುಬ ಕ್ರಿಶ್ಚಿಯನ್ (ಕೋಡ್ 740)
ಲಂಬಾಣಿ – ಲಂಬಾಣಿ ಕ್ರಿಶ್ಚಿಯನ್ (ಕೋಡ್ 756)
ಮಾಡಿಗ – ಮಾಡಿಗ ಕ್ರಿಶ್ಚಿಯನ್ (ಕೋಡ್ 803)
ಇಂತಹ 40 ಕ್ಕೂ ಹೆಚ್ಚು ಹಿಂದೂ ಜಾತಿ-ಉಪಜಾತಿಗಳ ಪಕ್ಕದಲ್ಲಿ ಕ್ರಿಶ್ಚಿಯನ್ ಸೇರಿಸಲಾಗಿದೆ.
*ಸಮಾಜದ ಪ್ರಶ್ನೆ*
ನಾವು ಬ್ರಾಹ್ಮಣರೇನಾ? ಒಕ್ಕಲಿಗರೇನಾ? ಕುರುಬರೇನಾ? ಅಥವಾ ಎಲ್ಲರೂ ಕ್ರಿಶ್ಚಿಯನ್ನರೇನಾ? ಈ ಪ್ರಶ್ನೆ ಈಗ ರಾಜ್ಯದ ಮೂಲೆಮೂಲೆಗಳಲ್ಲಿ ಚರ್ಚೆ ಯಾಗಿದೆ.

ಬೆಳಗಾವಿಯಿಂದಲೇ ಸರ್ಕಾರ ವಿರೋಧಿ ಹೋರಾಟದ ಕಿಡಿ ಹಚ್ಚುತ್ತೇವೆ ಎಂದು ವೇದಿಕೆಯ ನಾಯಕರು ಘೋಷಿಸಿದ್ದಾರೆ.
*ರಾಜಕೀಯ ಮೌನವೇ ಕುತಂತ್ರಕ್ಕೆ ಬೆಂಬಲ?*
ವಿವಾದ ರಾಜ್ಯವ್ಯಾಪಿ ಚರ್ಚೆಗೆ ಕಾರಣವಾದರೂ ರಾಜಕೀಯ ನಾಯಕರು ಮೌನ ವಹಿಸಿರುವುದು ಇನ್ನಷ್ಟು ಅನುಮಾನ ಹುಟ್ಟಿಸಿದೆ. ಮೌನವೇ ಸರ್ಕಾರದ ಹಿಂದೂ ವಿರೋಧಿ ನಿಲುವಿಗೆ ಬೆಂಬಲವೋ? ಎಂಬ ಪ್ರಶ್ನೆ ತೀವ್ರಗೊಂಡಿದೆ.
ಈ ಸಮೀಕ್ಷೆ ಹಿಂದೂ ಸಮಾಜದ ಅಸ್ತಿತ್ವವನ್ನು ಕುಸಿತಗೊಳಿಸುವ ಅಪಾಯಕಾರಿ ಸಂಚು. ಸರ್ಕಾರ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಬೆಳಗಾವಿಯಿಂದ ಪ್ರಾರಂಭವಾಗುವ ಹೋರಾಟ ರಾಜ್ಯಮಟ್ಟಕ್ಕೆ ವಿಸ್ತರಿಸಲಿದೆ

